ಬುಧವಾರ, ಅಕ್ಟೋಬರ್ 23, 2019
23 °C

ಅನುಜ್ ಬಿಡ್ವೆ ಶವ ಹಸ್ತಾಂತರ

Published:
Updated:

ಲಂಡನ್ (ಪಿಟಿಐ):  ಹತ್ಯೆಗೊಳಗಾದ ಭಾರತೀಯ ವಿದ್ಯಾರ್ಥಿ ಅನುಜ್ ಬಿಡ್ವೆ ಅವರ ಶವವನ್ನು ತನಿಖಾಧಿಕಾರಿಗಳು ಅಂತ್ಯಸಂಸ್ಕಾರ ಮಾಡುವ ಸಂಸ್ಥೆಯೊಂದಕ್ಕೆ ಹಸ್ತಾಂತರಿಸಿದ್ದಾರೆ. ಅಂತ್ಯಸಂಸ್ಕಾರಕ್ಕಾಗಿ ಬಿಡ್ವೆ ಅವರ ಶವವನ್ನು ಅಲ್ಲಿಂದ ಭಾರತಕ್ಕೆ ತರುವ ನಿರೀಕ್ಷೆ ಇದೆ.ಮಂಗಳವಾರ ಎರಡನೇ ಬಾರಿ ಶವವನ್ನು ಮರಣೋತ್ತರ ಪರೀಕ್ಷೆಗೆ ಒಳಪಡಿಸಿದ ಬಳಿಕ ತನಿಖಾಧಿಕಾರಿಗಳು ಪಾರ್ಥಿವ ಶರೀರವನ್ನು ಹಸ್ತಾಂತರಿಸಿದರು.ಭಾರತಕ್ಕೆ ಶವವನ್ನು ಕೊಂಡೊಯ್ಯುವುದಕ್ಕಾಗಿ ಬಿಡ್ವೆ ಕುಟುಂಬದ ಸದಸ್ಯರು ಲಂಡನ್‌ಗೆ ಬರಲಿದ್ದಾರೆ ಎನ್ನಲಾಗಿದೆ.ಶುಲ್ಕ ಮರುಪಾವತಿಗೆ ವಿವಿ ಒಪ್ಪಿಗೆ:  ಮೈಕ್ರೊ ಎಲೆಕ್ಟ್ರಾನಿಕ್ಸ್ ವಿಷಯದಲ್ಲಿ ಸ್ನಾತಕೋತ್ತರ ಪದವಿ ಪಡೆಯಲು ಬಿಡ್ವೆ ಪಾವತಿಸಿದ್ದ ಶುಲ್ಕವನ್ನು ಹಿಂದಿರುಗಿಸುವುದಾಗಿ ಲ್ಯಾಂಕೆಸ್ಟರ್ ವಿಶ್ವವಿದ್ಯಾಲಯವು  ಬರ್ಮಿಂಗ್‌ಹ್ಯಾಮ್‌ನಲ್ಲಿರುವ ಭಾರತೀಯ ರಾಜತಾಂತ್ರಿಕ ಅಧಿಕಾರಿ ಆರ್. ಆರ್. ಸ್ವೇನ್ ಅವರಿಗೆ ತಿಳಿಸಿದೆ.

ಬಿಡ್ವೆ ಪೋಷಕರು ಪುತ್ರನನ್ನು ವಿದೇಶದಲ್ಲಿ ಓದಿಸುವುದಕ್ಕಾಗಿ ಪುಣೆಯಲ್ಲಿರುವ ತಮ್ಮ ಮನೆಯನ್ನು ಒತ್ತೆ ಇಟ್ಟು ಬ್ಯಾಂಕ್ ಸಾಲ ಮಾಡಿದ್ದರು ಎಂದು ಹೇಳಲಾಗಿದೆ.ಮತ್ತೊಬ್ಬ ಏಷ್ಯಾ ಪ್ರಜೆ ಮೇಲೆ ಹಲ್ಲೆ: ಭಾರತೀಯ ವಿದ್ಯಾರ್ಥಿ ಅನುಜ್ ಬಿಡ್ವೆ ಹತ್ಯೆ ನಡೆದ ಕೆಲವೇ ದಿನಗಳ ಬಳಿಕ  ಸಾಲ್‌ಫೋರ್ಡ್ ನಗರದಲ್ಲಿ ದುಷ್ಕರ್ಮಿಗಳ ಗುಂಪು ಏಷ್ಯಾ ಯುವಕನ ಮೇಲೆ ಜನಾಂಗೀಯ ನಿಂದನೆ ಮಾಡಿ ಹಲ್ಲೆನಡೆಸಿದ್ದಾರೆ.ದುಷ್ಕರ್ಮಿಗಳ ತಂಡವೊಂದು ಸಾಲ್‌ಫೋರ್ಡ್‌ನಲ್ಲಿ ಮಂಗಳವಾರ ದರೋಡೆ ನಡೆಸಲು ಯತ್ನಿಸಿದ ಸಂದರ್ಭದಲ್ಲಿ 24 ವರ್ಷದ ಏಷ್ಯಾ ಮೂಲದ ಯುವಕನ ಮೇಲೆ ಹಲ್ಲೆ ನಡೆಸಿದೆ ಎಂದು ಮ್ಯಾಂಚೆಸ್ಟರ್ ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ. ಹಲ್ಲೆಗೊಳಗಾದ ಯುವಕನ ಗುರುತನ್ನು ಬಹಿರಂಗ ಪಡಿಸಲಾಗಿಲ್ಲ.

ಚುನಾವಣಾ ಫಲಿತಾಂಶ 2019 | ಹರಿಯಾಣ ಮತ್ತು ಮಹಾರಾಷ್ಟ್ರ ವಿಧಾನಸಭೆ 2019 ಚುನಾವಣೆಗೆ ಸಂಬಂಧಿಸಿದ ಸಮಗ್ರ ಸುದ್ದಿ, ಮಾಹಿತಿ, ವಿಶ್ಲೇಷಣೆ ಇಲ್ಲಿ ಲಭ್ಯ.

ಮಹಾರಾಷ್ಟ್ರ ವಿಧಾನಸಭೆಯ ಫಲಿತಾಂಶಕ್ಕಾಗಿ ಇಲ್ಲಿ ಕ್ಲಿಕ್ ಮಾಡಿ

ಹರಿಯಾಣ ವಿಧಾನಸಭೆಯ ಫಲಿತಾಂಶಕ್ಕಾಗಿ ಇಲ್ಲಿ ಕ್ಲಿಕ್ ಮಾಡಿ

ಪ್ರತಿಕ್ರಿಯಿಸಿ (+)