ಮಂಗಳವಾರ, ಜನವರಿ 21, 2020
19 °C

ಅನುಜ್ ಬಿಡ್ವೆ ಹತ್ಯೆ: ಆರೋಪಿ ಪೊಲೀಸ್ ಕಸ್ಟಡಿಗೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಲಂಡಂನ್ (ಪಿಟಿಐ): ಭಾರತೀಯ ವಿದ್ಯಾರ್ಥಿ ಅನುಜ್ ಬಿಡ್ವೆ ಅವರನ್ನು ಹತ್ಯೆ ಮಾಡಿದ ಶಂಕಿತ ಆರೋಪಿ ಕಿಯರಾನ್ ಸ್ಟೇಪಲ್ಟನ್ ಎಂಬಾತನನ್ನು ನ್ಯಾಯಾಲಯ ಸೋಮವಾರ ಪೊಲೀಸರ ಕಸ್ಟಡಿಗೆ ನೀಡಿದೆ.ಇದಕ್ಕೆ ಮುನ್ನ ಬೆಳಿಗ್ಗೆ ಮ್ಯಾಂಚೆಸ್ಟರ್‌ನ ಮ್ಯಾಜಿಸ್ಟ್ರೇಟ್ ನ್ಯಾಯಾಲಯಕ್ಕೆ ಆರೋಪಿಯನ್ನು ಹಾಜರು ಪಡಿಸಲಾಯಿತು. ನ್ಯಾಯಾಧೀಶರು ಆತನ ಹಿನ್ನೆಲೆ, ಹೆಸರು ಇತ್ಯಾದಿಗಳನ್ನು ವಿಚಾರಿಸಿದಾಗ, ಆತ ತನ್ನ ಹೆಸರು `ಸೈಕೋ ಸ್ಟೇಪಲ್ಟನ್~ ಎಂದು ಹೇಳಿಕೊಂಡ. ನಂತರ ನ್ಯಾಯಾಧೀಶರು ಆತನನ್ನು 24 ಗಂಟೆಗಳ ಕಾಲ ಪೊಲೀಸರ ವಶಕ್ಕೆ ನೀಡಿದ್ದಾರೆ.ಪುಣೆ ಮೂಲದ 23 ವರ್ಷದ ಯುವಕ ಅನುಜ್ ಬಿಡ್ವೆ ಅವರನ್ನು ಡಿ. 26ರಂದು ಹತ್ಯೆ ಮಾಡಲಾಗಿತ್ತು.

ಪ್ರತಿಕ್ರಿಯಿಸಿ (+)