ಅನುದಾನಿತ ಸಂಸ್ಥೆಗಳಲ್ಲಿ ಆಡಳಿತಾತ್ಮಕ ಸಿಬ್ಬಂದಿ ನೇಮಕಾತಿಯಾಗಲಿ

ಶನಿವಾರ, ಜೂಲೈ 20, 2019
28 °C

ಅನುದಾನಿತ ಸಂಸ್ಥೆಗಳಲ್ಲಿ ಆಡಳಿತಾತ್ಮಕ ಸಿಬ್ಬಂದಿ ನೇಮಕಾತಿಯಾಗಲಿ

Published:
Updated:

ಬೋಧಕೇತರ ಸಿಬ್ಬಂದಿಗಳ ಕೊರತೆಯಿಂದ ತತ್ತರಿಸುತ್ತಿರುವ ಅನೇಕ ಅನುದಾನಿತ ಶಿಕ್ಷಣ ಸಂಸ್ಥೆಗಳಲ್ಲಿ ಅನೇಕ ವರ್ಷಗಳಿಂದ ಖಾಲಿಯಿರುವ ಹುದ್ದೆಗಳನ್ನು ಮಾತ್ರ ಭರ್ತಿ ಮಾಡಲು  ಯಾವುದೇ ಕ್ರಮ ಕೈಗೊಳ್ಳದಿರುವುದು ದುರ್ದೈವದ ಸಂಗತಿ.

 

ಈ ಸಂಬಂಧ ಬೋಧಕೇತರ ಸಿಬ್ಬಂದಿ ರಾಜ್ಯ ವ್ಯಾಪಿ ಸಭೆ ಸಂಘಟಿಸಿ ತಮಗಾದ ಅನ್ಯಾಯದ ಬಗ್ಗೆ ಶಾಸಕರು ಹಾಗೂ ಕಾಲೇಜು ಶಿಕ್ಷಣ ಇಲಾಖೆಯ ಹಿರಿಯ ಅಧಿಕಾರಿಗಳ ಸಮ್ಮುಖದಲ್ಲಿ ನಿವೇದಿಸಿಕೊಂಡರೂ ಯಾವುದೇ ಪ್ರಗತಿ ಆಗಿಲ್ಲ.ಸರ್ಕಾರಿ ಆದೇಶ ಸಂಖ್ಯೆ ಇಡಿ/ 196/ ಯುಪಿಸಿ/ 2000 ದಿ. 1-3-2001 ರಲ್ಲಿ ದಿ. 1-3-2001 ರಂದು ಇದ್ದ ಹಾಗೂ ಆ ನಂತರ ಖಾಲಿಯಾಗಿರುವ ಎಲ್ಲಾ ಹುದ್ದೆಗಳನ್ನು ಶಾಶ್ವತ ಅನುದಾನರಹಿತ ಹುದ್ದೆಗಳೆಂದು ತೀರ್ಮಾನಿಸಿದ ನಂತರ ಮತ್ತೆ ಸರ್ಕಾರಿ ಆದೇಶ ಸಂಖ್ಯೆ ಇಡಿ/ 371/ ಯುಪಿಸಿ/ 2006, ದಿ. 13-11-2006 ರಲ್ಲಿ ಕೇವಲ ಬೋಧಕ ಹುದ್ದೆಗಳನ್ನು ಮಾತ್ರ ತುಂಬಲು ಅವಕಾಶ ಕಲ್ಪಿಸಲಾಗಿರುತ್ತದೆ. ಆದರೆ ಸರ್ಕಾರ ಇದನ್ನು ಕಡೆಗಣಿಸಿ ಅನ್ಯಾಯ ಮಾಡಿದೆ.  ಮಾನವೀಯತೆಯಿಂದ ಸರ್ಕಾರ ತ್ವರಿತವಾಗಿ ಅನುದಾನಿತ ಶಿಕ್ಷಣ ಸಂಸ್ಥೆಗಳಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ಬೋಧಕೇತರ ಸಿಬ್ಬಂದಿಗಳ ಅಳಲಿಗೆ ಸ್ಪಂದಿಸಿ ಬಡ್ತಿ ಹಾಗೂ ನೇಮಕಾತಿಯನ್ನು ಹಂತಹಂತವಾಗಿಯಾದರೂ ಮಾಡಲು ಕ್ರಮಕೈಗೊಳ್ಳಲಿ.

 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry