ಅನುದಾನ ಅಪವ್ಯಯಕ್ಕೆ ಅಧಿಕಾರಿಗಳೇ ಹೊಣೆ

ಶನಿವಾರ, ಜೂಲೈ 20, 2019
28 °C

ಅನುದಾನ ಅಪವ್ಯಯಕ್ಕೆ ಅಧಿಕಾರಿಗಳೇ ಹೊಣೆ

Published:
Updated:

ಹಾವೇರಿ: `ಪರಿಶಿಷ್ಟ ಜಾತಿ ಹಾಗೂ ಪರಿಶಿಷ್ಟ ಪಂಗಡದ ಶ್ರೆಯೋಭಿವೃದ್ಧಿ ಗಾಗಿಯೇ ಬೇರೆ ಬೇರೆ ಇಲಾಖೆಗಳಲ್ಲಿ ನೀಡುವ ಅನುದಾನವನ್ನು ಅವರಿಗಾ ಗಿಯೇ ಖರ್ಚು ಮಾಡಬೇಕು. ತಪ್ಪಿದರೆ, ಅಲ್ಲಿ ಆಗುವ ಲೋಪಕ್ಕೆ ಅಧಿಕಾರಿಗಳನ್ನೇ ಹೊಣೆಗಾರರನ್ನಾಗಿ ಮಾಡಲಾಗುತ್ತದೆ~ ಎಂದು ಜಿಲ್ಲಾ ಪಂಚಾಯಿತಿ ಅಧ್ಯಕ್ಷ ಮಂಜುನಾಥ ಓಲೇಕಾರ ಎಚ್ಚರಿಸಿದರು.ಜಿಲ್ಲಾ ಪಂಚಾಯಿತಿ ಸಭಾಂಗಣದಲ್ಲಿ ಬುಧವಾರ ಏರ್ಪಡಿಸಿದ್ದ ಜಿಲ್ಲಾ ಪಂಚಾಯಿತಿಯ ಅಭಿವೃದ್ಧಿ ಕಾರ್ಯ ಕ್ರಮಗಳ ಮಾಸಿಕ ಪ್ರಗತಿ ಪರಿಶೀಲನಾ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.ಜಿಲ್ಲೆಯ ಅನೇಕ ಇಲಾಖೆಗಳಿಗೆ ಪರಿಶಿಷ್ಟ ಜಾತಿ ಹಾಗೂ ಪರಿಶಿಷ್ಟ ಪಂಗಡದ ಅಭಿವೃದ್ಧಿಗಾಗಿ ಖರ್ಚು ಮಾಡಿದ ವಿವರಗಳು ಸಮಾಜ ಕಲ್ಯಾಣ ಇಲಾಖೆ ಅಧಿಕಾರಿಗಳು ಪಡೆದಿರಬೇಕು. ಈ ಅನುದಾನವು ಯಾವುದೇ ಕಾರಣಕ್ಕೂ ಮರಳಿ ಹೋಗದಂತೆ ಹಾಗೂ ಅರ್ಹ ಫಲಾನುಭವಿಗಳಿಗೆ ತಲುಪಿರುವ ಕುರಿತು ಮಾಹಿತಿ ಒದಗಿಸಬೇಕೆಂದು ಅವರು ಸೂಚಿಸಿದರು.ಕೃಷಿ ಇಲಾಖೆ ಜಂಟಿ ಕೃಷಿ ನಿರ್ದೇಶಕ ಎಸ್.ಕೆ. ಕೆಂಪರಾಜು ಅವರು ಮಾತ ನಾಡಿ, ಜಿಲ್ಲೆಯಲ್ಲಿ ಒಟ್ಟು 3.22 ಲಕ್ಷ ಹೆಕ್ಟೇರ್ ಪ್ರದೇಶದಲ್ಲಿ ಬಿತ್ತನೆ ಗುರಿಯಿದ್ದು, ಈವರೆಗೆ 9,633 ಹೆಕ್ಟೇರ್ ಪ್ರದೇಶದಲ್ಲಿ ಬಿತ್ತನೆಯಾಗಿದೆ.ಪ್ರಸಕ್ತ ವರ್ಷ 46 ಸಾವಿರ ಕ್ವಿಂಟಲ್ ಬೀಜದ ಬೇಡಿಕೆಯಿದೆ. ಈವರೆಗೆ 32 ಸಾವಿರ ಬೀಜ ಮಾರಾಟವಾಗಿದೆ. 31 ಸಾವಿರ ಟನ್ ಡಿಎಪಿ ಹಾಗೂ ಕಾಂಪ್ಲೆಕ್ಸ್ ರಸಗೊಬ್ಬರದ ಮಾರಾಟದ ಗುರಿಯಿದೆ. ಈವರೆಗೆ 22 ಸಾವಿರ ಟನ್ ಸರಬರಾಜಾಗಿದೆ ಎಂದು ಸಭೆಗೆ ಮಾಹಿತಿ ನೀಡಿದರು.ಸಂಪೂರ್ಣ ನೈರ್ಮಲ್ಯ ಆಂದೋಲನದ ಯೋಜನೆ ಅಡಿ 55,773 ವಯಕ್ತಿಕ ಶೌಚಾಲಯ (ಬಿಪಿಎಲ್) ನಿರ್ಮಿಸುವ ವಾರ್ಷಿಕ ಗುರಿ ಹೊಂದಿದ್ದು ಈವರೆಗೆ 782 ಶೌಚಾಲಯ ನಿರ್ಮಿಸಲಾಗಿದೆ. 26,679 ವಯಕ್ತಿಕ ಶೌಚಾಲಯ (ಎಪಿಎಲ್) ನಿರ್ಮಿಸುವ ವಾರ್ಷಿಕ ಗುರಿ ಹೊಂದಿದ್ದು, ಈವರೆಗೆ 102 ಶೌಚಾಲಯ ನಿರ್ಮಿಸಲಾಗಿದೆ. ಎಂದು ಜಿ.ಪಂ.ಸದಸ್ಯ ಪದ್ಮನಾಭ ಕುಂದಾ ಪೂರ ಕೇಳಿದ ಪ್ರಶ್ನೆಗೆ ಜಿ.ಪಂ. ಉಪ ಕಾರ್ಯದರ್ಶಿ ಜಿ. ಗೋವಿಂದಸ್ವಾಮಿ ತಿಳಿಸಿದರು.ಸಹಕಾರ ಸಂಘಗಳ ಉಪನಿಬಂಧಕ ನಾಗಾಶಯನ ಅವರು ಮಾತನಾಡಿ, ಪ್ರಸಕ್ತ ಸಾಲಿನಲ್ಲಿ 3,500 ಕೋಟಿ ರೂ. ಅಲ್ಪಾವಧಿ ಸಾಲ ವಿತರಿಸುವ ಗುರಿ ಹೊಂದಿದ್ದು, ಮೇ ಅಂತ್ಯದವರೆಗೆ 600 ಕೋಟಿ ರೂ.ಗಳ ಗುರಿಯಿದೆ. 1317.41 ಕೋಟಿ ರೂ. ಅಲ್ಪಾವಧಿ ಸಾಲ ವಿತರಿಸಲಾಗಿದೆ ಎಂದ ಅವರು, 200 ಕೋಟಿ ರೂ.ಗಳ ಮಧ್ಯಮಾವಧಿ ಸಾಲ, 900 ಕೋಟಿ ರೂ.ಗಳ ದೀರ್ಘಾವಧಿ ಸಾಲ ವಿತರಣೆಯ ಗುರಿ ಹೊಂದಲಾಗಿದ್ದು, ಈವರೆಗೆ 10.30 ಕೋಟಿ ರೂ.ಗಳ ಸಾಲ ವಿತರಣೆ ಮಾಡಲಾಗಿದೆ ಎಂದರು.ಜಿಲ್ಲಾ ಸಾಕ್ಷರ ಸೌರಭ ಸಮಿತಿಯ ಕಾರ್ಯದರ್ಶಿ ಡಾ. ಐ.ಎ. ಲೋಕಾಪೂರ ಅವರು ಮಾತನಾಡಿ, ಪ್ರಸಕ್ತ 2011ರ ಜನಗಣತಿಯ ಅಂಕಿ ಅಂಶಗಳ ಪ್ರಕಾರ ಶೇ 77 ಸಾಕ್ಷರತಾ ಪ್ರಮಾಣ ಹೊಂದಿದ್ದು, ಇದರಲ್ಲಿ ಶೇ 84 ರಷ್ಟು ಪುರುಷರು ಹಾಗೂ ಶೇ 70ರಷ್ಟು ಮಹಿಳೆಯರು ಸಾಕ್ಷರರಾಗಿದ್ದಾರೆ.  ಹಾವೇರಿ ಜಿಲ್ಲೆ 10ನೇ ಸ್ಥಾನದಲ್ಲಿದೆ ಎಂದರು.  ಸಾರ್ವಜನಿಕ ಶಿಕ್ಷಣ ಇಲಾಖೆ ಉಪ ನಿರ್ದೇಶಕ ಎಸ್.ಬಿ.ಕೊಡ್ಲಿ ಮಾತನಾಡಿ, ಪ್ರಸಕ್ತ ವರ್ಷ ಜಿಲ್ಲೆಯಲ್ಲಿ 17 ಲಕ್ಷ ಪುಸ್ತಕ ಬೇಡಿಕೆ ಇದ್ದು, ಈಗಾಗಲೇ 15 ಲಕ್ಷ ಪುಸ್ತಕ ಪೂರೈಕೆಯಾಗಿದೆ. ಅವುಗಳನ್ನು ಎಲ್ಲ ಮಕ್ಕಳಿಗೆ ವಿತರಿಸಲಾಗಿದೆ ಎಂದು ಹೇಳಿದರು.ಇದೇ ಸಂದರ್ಭದಲ್ಲಿ ಜಿ.ಪಂ.ಅಧ್ಯಕ್ಷರು, ಖಾಸಗಿ ಶಾಲೆಗಳಲ್ಲಿ ಹೆಚ್ಚುವರಿಯಾಗಿ ಶಾಲಾ ಶುಲ್ಕ ವಸೂಲಿ ಮಾಡುವುದು ಕಂಡು ಬಂದಲ್ಲಿ ಅಂತಹ ಶಾಲೆಗಳ ಮೇಲೆ ಸೂಕ್ತ ಕ್ರಮ ಜರುಗಿಸುವಂತೆ ಉಪ ನಿರ್ದೇಶಕರಿಗೆ ಸೂಚಿಸಿದರು.ಜಿ,ಪಂ. ಉಪಾಧ್ಯಕ್ಷೆ ಗದಿಗೆವ್ವ ಬಸನಗೌಡ್ರ, ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಉಮೇಶ ಕುಸುಗಲ್ಲ, ಜಿ.ಪಂ.ಸ್ಥಾಯಿ ಸಮಿತಿ ಅಧ್ಯಕ್ಷರಾದ ಶೋಭಾ ನಿಸ್ಸೀಮಗೌಡ್ರ, ಸುಜಾತಾ ಕೊಟಗಿಮನಿ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಉಪನಿರ್ದೇಶಕಿ ಪ್ರಭಾವತಿ ಕರ್ನಿಂಗ್, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಾಯಕ ನಿರ್ದೇಶಕಿ ಶಶಿಕಲಾ ಹುಡೇದ, ನಿರ್ಮಿತಿ ಕೇಂದ್ರದ ಅಧಿಕಾರಿ ತಿಮ್ಮೇಶ ಸೇರಿದಂತೆ ಜಿಲಾ ಮಟ್ಟದ ಅಧಿಕಾರಿಗಳು ಹಾಜರಿದ್ದರು.ಅಂಗವಿಕಲರ ಪುನರ್ವಸತಿ ಕೇಂದ್ರ ಉದ್ಘಾಟನೆ 20ರಂದು

ಗದಗ: ವಿಕಲಚೇತನರ ಹಾಗೂ ಹಿರಿಯ ನಾಗರಿಕ ಸಬಲೀಕರಣ ಇಲಾಖೆ, ಭಾರತೀಯ ರೆಡ್ ಕ್ರಾಸ್ ಸಂಸ್ಥೆ ಸಹಯೋಗದಲ್ಲಿ ಅನುಷ್ಠಾನ ಗೊಳಿಸುತ್ತಿರುವ ಜಿಲ್ಲಾ ಅಂಗವಿಕಲರ ಪುನರ್ವಸತಿ ಕೇಂದ್ರದ ಉದ್ಘಾಟನಾ ಸಮಾರಂಭವು ಕೆ. ಎಚ್. ಪಾಟೀಲ ಕ್ರೀಡಾಂಗಣದ ಎದುರು ಇರುವ ಜಿಲ್ಲಾ ರೆಡ್‌ಕ್ರಾಸ್ ಭವನದಲ್ಲಿ ಇದೇ 20ರಂದು ಬೆಳಿಗ್ಗೆ 11ಕ್ಕೆ ನಡೆಯಲಿದೆ.ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಸಚಿವ ಸಿ.ಸಿ.ಪಾಟೀಲ ಸಮಾ ರಂಭ ಉದ್ಘಾಟಿಸಲಿದ್ದಾರೆ.ಶಾಸಕ ಶ್ರೀಶೈಲಪ್ಪ ಬಿದರೂರ ಅಧ್ಯಕ್ಷತೆ ವಹಿ ಸುವರು. ಕಾರ್ಯಕ್ರಮದಲ್ಲಿ ಸಂಸದರು, ಶಾಸಕರು,  ಕರ್ನಾಟಕ ರಸ್ತೆ ಅಭಿವೃದ್ಧಿ ನಿಗಮದ ಅಧ್ಯಕ್ಷರು, ಬೆಂಗಳೂರಿನ ಕೆ.ಎಸ್.ಬಿ ಐ.ಆರ್.ಸಿ.ಎಸ್ ನ ಅಧ್ಯಕ್ಷರು, ಜಿ.ಪ. ಅಧ್ಯಕ್ಷರು, ತಾ.ಪಂ. ಅಧ್ಯಕ್ಷರು, ಗದಗ-ಬೆಟಗೇರಿ ನಗರಸಭೆಯ ಅಧ್ಯಕ್ಷರು ಇತರರು ಪಾಲ್ಗೊಳ್ಳಲಿದ್ದಾರೆ ಎಂದು ಪ್ರಕಟಣೆ ತಿಳಿಸಿದೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry