ಅನುದಾನ: ಅಸಮಾಧಾನ

7

ಅನುದಾನ: ಅಸಮಾಧಾನ

Published:
Updated:

ಬೆಂಗಳೂರು: `ಅನುದಾನ ಬಿಡುಗಡೆ ಮಾಡುವ ಸಂಬಂಧ ಮುಖ್ಯಮಂತ್ರಿ ಡಿ.ವಿ.ಸದಾನಂದ ಗೌಡ ಕೇವಲ ಭರವಸೆ ನೀಡಿದರೆ ಸಾಲದು, ಕೂಡಲೇ ಈ ಸಂಬಂಧ ಆದೇಶ ಹೊರಡಿಸಬೇಕು~ ಎಂದು ಅನುದಾನರಹಿತ ಶಾಲಾ- ಕಾಲೇಜುಗಳ ಅಧ್ಯಾಪಕರ ಸಂಘದ ಅಧ್ಯಕ್ಷ ಜಾಲಮಂಗಲ ನಾಗರಾಜ್ ಒತ್ತಾಯಿಸಿದ್ದಾರೆ.ವಿಧಾನ ಪರಿಷತ್ತಿನಲ್ಲಿ ಈ ವಿಷಯ ಚರ್ಚೆಗೆ ಬಂದಾಗ ಇದೇ 8ರಂದು ಸದನದಲ್ಲಿ ಹೇಳಿಕೆ ನೀಡುವುದಾಗಿ ಹೇಳಿದ್ದಾರೆ. ಹಿಂದಿನ ಹಾಗೆ ಕೇವಲ ಭರವಸೆ ನೀಡದೆ 1991ರಿಂದ 1995ರ ಒಳಗೆ ಪ್ರಾರಂಭಗೊಂಡಿರುವ ಎಲ್ಲ ಶಾಲಾ ಕಾಲೇಜುಗಳಿಗೆ ವೇತನ ಅನುದಾನ ಬಿಡುಗಡೆ ಮಾಡಲು ಆದೇಶ ಹೊರಡಿಸಬೇಕು ಎಂದು ಪತ್ರಿಕಾ ಹೇಳಿಕೆ ಮೂಲಕ ಆಗ್ರಹಿಸಿದ್ದಾರೆ.

 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry