ಅನುದಾನ ಬಳಕೆಗೆ ಸೂಚನೆ

7

ಅನುದಾನ ಬಳಕೆಗೆ ಸೂಚನೆ

Published:
Updated:

ತುಮಕೂರು: ಆರ್ಥಿಕ ವರ್ಷಾಂತ್ಯದೊಳಗೆ ಅನುದಾನ ಪೋಲಾಗದಂತೆ ಯೋಜನೆಗಳನ್ನು ಜಾರಿಗೊಳಿಸಬೇಕೆಂದು ಜಿಲ್ಲಾ ಪಂಚಾಯ್ತಿ ನೂತನ ಅಧ್ಯಕ್ಷ ಡಾ.ಬಿ.ಎನ್.ರವಿ ಅಧಿಕಾರಿಗಳಿಗೆ ಸೂಚಿಸಿದರು.ಜಿಲ್ಲಾ ಪಂಚಾಯ್ತಿ ಸಭಾಂಗದಲ್ಲಿ ಶುಕ್ರವಾರ ಏರ್ಪಡಿಸಿದ್ದ ಕೆಡಿಪಿ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿ, ಮಾರ್ಚ್ ಅಂತ್ಯದೊಳಗೆ ಎಲ್ಲ ಇಲಾಖೆಗಳು ಗುರಿ ಸಾಧಿಸಬೇಕು ಎಂದರು.

ಸಿಬ್ಬಂದಿ ಕೊರತೆಯಿಂದ ವಿವಿಧ ಕೃಷಿ ಯೋಜನೆಗಳ ಜಾರಿಗೆ ಸಮಸ್ಯೆಯಾಗಿದೆ. ಮುಂದಿನ ಮುಂಗಾರು ಸಮಯಕ್ಕೆ ಅಗತ್ಯವಾಗಿರುವ ಮುಂಜಾಗ್ರತೆ ವಹಿಸಲಾಗಿದೆ ಎಂದು ಕೃಷಿ ಜಂಟಿ ನಿರ್ದೇಶಕ ಶ್ರೀರಾಮರೆಡ್ಡಿ ಹೇಳಿದರು."ಪಶುಪಾಲನೆ ಇಲಾಖೆ ಉಪನಿರ್ದೇಶಕ ಡಾ.ರವೀಂದ್ರ ಮಾತನಾಡಿ, ಜಿಲ್ಲೆಯಲ್ಲಿ ಸುಮಾರು 20 ಲಕ್ಷ ಜಾನುವಾರುಗಳಿದ್ದು, ಪ್ರತಿವರ್ಷ ಔಷಧಿಗಳ ಕೊರತೆಯಾಗುತ್ತದೆ. ವಾರ್ಷಿಕ ಜಿ.ಪಂ.ನಿಂದ ರೂ. 62 ಲಕ್ಷ ಮತ್ತು ರಾಜ್ಯ ಸರ್ಕಾರ ರೂ. 62 ಲಕ್ಷ ಅನುದಾನ ನೀಡುತ್ತದೆ. ಆದರೆ ಸಮರ್ಪಕ ಔಷಧಿ ವಿತರಣೆಗೆ ಸುಮಾರು ರೂ. 3 ಕೋಟಿ ಅಗತ್ಯವಿದೆ ಎಂದು ಹೇಳಿದರು.

ಡಿಡಿಪಿಐ ಮೋಹನ್‌ಕುಮಾರ್ ಮಾತನಾಡಿ, ಶಾಲೆಬಿಟ್ಟ ಮಕ್ಕಳನ್ನು ಮತ್ತೆ ಶಾಲೆಗೆ ಸೇರಿಸುವಲ್ಲಿ ವಿವಿಧ ಯೋಜನೆಗಳನ್ನು ರೂಪಿಸಲಾಗಿದೆ. ಈಗಾಗಲೇ ಶೇ. 34ರಷ್ಟು ಗುರಿ ಸಾಧನೆ ಮಾಡಲಾಗಿದೆ. ಮುಂದಿನ ಜೂನ್‌ನಲ್ಲಿ ಉಳಿದ ಮಕ್ಕಳನ್ನು ಶಾಲೆಗೆ ಕರೆತರಲಾಗುವುದು ಎಂದು ಹೇಳಿದರು.ಸಮಗ್ರ ಜಲನಯನ ಅಭಿವೃದ್ಧಿ ಯೋಜನೆಯಡಿ ಶೇ. 51 ಗುರಿ ಸಾಧಿಸಲಾಗಿದೆ ಎಂದು ಜಲನಯನ ಇಲಾಖೆ ಅಧಿಕಾರಿಗಳು ಹೇಳಿದರು. ರಾಷ್ಟ್ರೀಯ ತೋಟಗಾರಿಕೆ ಮಿಷನ್ ಯೋಜನೆಯಡಿ ಶೇ. 95 ಪ್ರಗತಿಯಾಗಿದೆ ಎಂದು ತಿಳಿಸಿದರು.ಜಿಲ್ಲಾ ಪಂಚಾಯಿತಿ ಉಪಾಧ್ಯಕ್ಷೆ ಲಲಿತಮ್ಮ ಮಂಜುನಾಥ್, ಉಪಕಾರ್ಯದರ್ಶಿ ಯಾಲಕ್ಕಿಗೌಡ, ಮುಖ್ಯ ಯೋಜನಾಧಿಕಾರಿ ಸಿ.ರಾಜಮ್ಮ ಭಾಗವಹಿಸಿದ್ದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry