ಗುರುವಾರ , ಜನವರಿ 23, 2020
27 °C
ಗುಲ್ಬರ್ಗ: ಕೇಂದ್ರದ ಯೋಜನೆಗಳ ಪರಿಶೀಲನಾ ಸಭೆ

ಅನುದಾನ ಬಳಕೆ: ಅಧಿಕಾರಿಗಳಿಗೆ ಖರ್ಗೆ ಪಾಠ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಗುಲ್ಬರ್ಗ: ಹಿಂದುಳಿದ ಪ್ರದೇಶ ಅಭಿವೃದ್ಧಿ ನಿಧಿ (ಬಿಆರ್‌ಜಿಎಫ್‌) ಸೇರಿದಂತೆ ಹಲವು ಯೋಜನೆ ಗಳಿಗೆ ಕೇಂದ್ರ ಸರ್ಕಾರ ನೀಡುವ ಅನುದಾನ ಪೂರ್ಣ ಬಳಕೆ ಮಾಡದ ವಿವಿಧ ಇಲಾಖೆಗಳ ಅಧಿಕಾರಿಗಳನ್ನು ರೈಲ್ವೆ ಸಚಿವ ಮಲ್ಲಿಕಾರ್ಜುನ ಖರ್ಗೆ ತರಾಟೆಗೆ ತೆಗೆದು ಕೊಂಡರು.ಜಿಲ್ಲಾಧಿಕಾರಿ ಸಭಾಂಗಣದಲ್ಲಿ ಭಾನುವಾರ ನಡೆದ ‘ಜಿಲ್ಲಾ ಮಟ್ಟದ ಜಾಗೃತ ಮತ್ತು ಉಸ್ತುವಾರಿ ಸಮಿತಿಯಿಂದ ಕೇಂದ್ರದ ಯೋಜನೆ ಗಳ ಪರಿಶೀಲನಾ ಸಭೆ’ ಅಧ್ಯಕ್ಷತೆ ವಹಿಸಿದ್ದ ಅವರು, ‘ಹೈದರಾಬಾದ್‌ ಕರ್ನಾಟಕ ಪ್ರದೇಶಕ್ಕೆ ಅನುಕೂಲವಾಗುವ ಯಾವುದೇ ಯೋಜನೆ ಯನ್ನು ತಯಾರಿಸಿ ನನ್ನ ಗಮನಕ್ಕೆ ತನ್ನಿ. ಕೂಡಲೇ ಸಂಬಂಧಿಸಿದ ಸಚಿವರೊಂದಿಗೆ ಸಮಾಲೋಚಿಸಿ ಯೋಜನೆ ಅನುಮೋದನೆಗೆ ಪ್ರಯತ್ನಿಸುತ್ತೇನೆ. ಅನುದಾನ ಬಳಕೆಗೆ ಯಾವುದಾದರೂ ನಿಯಮ ಅಡ್ಡಿಯಾಗಿದ್ದರೂ, ಹಿಂದುಳಿದ ಪ್ರದೇಶಕ್ಕೆ ವಿಶೇಷ ಮಾನ್ಯತೆ ನೀಡಿ ನಿಯಮಗಳ ಸಡಿಲಿಕೆ ಮಾಡುವಂತೆ ಅಧಿಕಾರಿಗಳು ಕೋರಲು ಅವಕಾ  ಶವಿದೆ. ಅಭಿವೃದ್ಧಿಗೆ ಸ್ಪಂದಿಸದ ಅಧಿಕಾರಿಗಳನ್ನು ಕಟ್ಟಿಕೊಂಡು ಏನು ಸಾಧಿಸಲು ಸಾಧ್ಯವಾಗು ವುದಿಲ್ಲ’ ಎಂದು ಬೇಸರ ವ್ಯಕ್ತಪಡಿಸಿದರು.ಬಿಆರ್‌ಜಿಎಫ್‌ ಯೋಜನೆ ಕೇಂದ್ರ ಸರ್ಕಾರದ ಮಹತ್ವ ಯೋಜನೆಯಾಗಿದ್ದು, 2011–12ರಲ್ಲಿ ಜಿಲ್ಲೆಗೆ ಬಿಡುಗಡೆಯಾದ ಅನುದಾನ ಬಳಸಿ ಕೊಳ್ಳದ್ದರಿಂದ ಅನುದಾನದ ಪ್ರಮಾಣ ಕಡಿಮೆ ಯಾಗುತ್ತಾ ಬಂದಿದೆ. ಬಿಆರ್‌ಜಿಎಫ್‌ ಅನುದಾನ ಹಂಚಿಕೆ ಮಾಡುವುದೊಂದೇ ಜಿಲ್ಲಾ ಪಂಚಾ ಯಿತಿ ಅಧಿಕಾರಿಗಳ ಕೆಲಸವಲ್ಲ, ಉಸ್ತುವಾರಿ ಮಾಡಬೇಕು ಎಂದು ತಾಕೀತು ಮಾಡಿದರು.

ಹೆದ್ದಾರಿ ಮೇಲ್ದರ್ಜೆಗೆ: ಅಫಜಲಪುರ ತಾಲ್ಲೂಕಿನ ದೇವಲಗಾಣಗಾಪುರದ ಹೆದ್ದಾರಿ ಮೇಲ್ದರ್ಜೆ ಗೇರಿಸುವ ಅಗತ್ಯವಿದೆ. ಈ ಕುರಿತು ಅಂದಾಜು ಸಲ್ಲಿಸಿದರೆ, ಯೋಜನೆಗೆ ಕ್ಷಿಪ್ರಗತಿಯಲ್ಲಿ ಅನುಮೋದನೆ ಪಡೆಯಲಾಗು ವುದು. ಈ ಹೆದ್ದಾರಿ ಮೂರು ರಾಷ್ಟ್ರೀಯ ಹೆದ್ದಾರಿಗಳನ್ನು ಸೇರಿಸಿದಂತಾಗುತ್ತದೆ. ಇದರಿಂದ ಇತರೆ ರಾಷ್ಟ್ರೀಯ ಹೆದ್ದಾರಿಗಳ  ಸಂಚಾರ ದಟ್ಟಣೆ ಕಡಿಮೆಯಾಗುವುದು ಎಂದು ಹೇಳಿದರು.ಕುರಿಕೋಟಾ ಸೇತುವೆ: ಕುರಿಕೋಟಾ ಸೇತುವೆ ದುರಸ್ತಿ ಕಾಮಗಾರಿ ನನೆಗುದಿಗೆ ಬಿದ್ದಿದೆ. ಸೇತುವೆ ಯಿಂದ ಕಲ್ಲುಗಳು ಇನ್ನೂ ಕೆಳಗೆ ಬೀಳುತ್ತಿವೆ. ದುರಸ್ತಿ ಕೈಗೊಳ್ಳಲು ಆಗದಿದ್ದರೆ, ಕೇಂದ್ರ ಸರ್ಕಾ ರದ ಇಲಾಖೆಗೆ ಕೆಲಸ ವಹಿಸಿಕೊಡಿ ಎಂದರು.ವಾಡಿಯಲ್ಲಿ ನೂತನ ವೃತ್ತ: ವಾಡಿಯಲ್ಲಿನ ವೃತ್ತವನ್ನು ನೆಲಸಮಗೊಳಿಸಲಾಗಿದ್ದು, ರಾಷ್ಟ್ರೀಯ ಲಾಂಛನ ಕೆಳಗೆ ಬಿದ್ದು ಅವಮಾನ ಮಾಡಲಾಗುತ್ತಿದೆ. ಕೂಡಲೇ ನೂತನ ವೃತ್ತದ ಕೆಲಸ ಆರಂಭಿಸಬೇಕು ಎಂದು ಹೇಳಿದರು.ಅಭಿವೃದ್ಧಿಗೆ ಹಿನ್ನೆಡೆ: ಗಲ್ಬರ್ಗ ವಿಮಾನ ನಿಲ್ದಾಣ ಕಾಮಗಾರಿ ಗುತ್ತಿಗೆದಾರರಿಂದ ಸ್ಥಗಿತ ಗೊಂಡಿದ್ದು, ಸಮಸ್ಯೆ ನಿವಾರಣೆಗೆ ಕೂಡಲೇ ಮುಖ್ಯಮಂತ್ರಿ ಸಿದ್ಧರಾಮಯ್ಯ ಅವರನ್ನು ಭೇಟಿ ಮಾಡಿ ಸಮಸ್ಯೆ ಪರಿಹರಿಸಿಕೊಳ್ಳಬೇಕು. ವಿಪ್ರೋ, ಇರ್ಫಾನ್, ರೈಟ್ಸ್ ಸೇರಿದಂತೆ ಅನೇಕ ಕಂಪೆನಿ ಗಳು ಸಿಎಸ್‌ಆರ್‌ ಯೋಜನೆ ಅಡಿಯಲ್ಲಿ ಹಿಂದು ಳಿದ ಪ್ರದೇಶದಲ್ಲಿ ಸೇವೆ ಸಲ್ಲಿಸಲು ತಯಾರಿ ದ್ದರೂ ವಿಮಾನ ನಿಲ್ದಾಣ ಇಲ್ಲದಿರುವುದರಿಂದ ಅವರ್‍ಯಾರು ಇತ್ತ ಬರಲು ಮನಸ್ಸು ಮಾಡುತ್ತಿಲ್ಲ ಎಂದು ಸಚಿವ ಖರ್ಗೆ ಹೇಳಿದರು.ವೈದ್ಯಕೀಯ ಶಿಕ್ಷಣ ಸಚಿವ ಡಾ.ಶರಣ ಪ್ರಕಾಶ್ ಪಾಟೀಲ್ ಮಾತನಾಡಿ, ವಿಮಾನ ನಿಲ್ದಾಣ ಕಾಮಗಾರಿ ಕುರಿತಂತೆ ಇಬ್ಬರು ಗುತ್ತಿಗೆದಾರರಲ್ಲಿ ಜಗಳ ಬಂದಿದ್ದು, ಹೀಗಾಗಿ ಕಾಮಗಾರಿ ಸ್ಥಗಿತಗೊಂಡಿದೆ. ಇಬ್ಬರಲ್ಲಿ ಒಬ್ಬರು ಕಾಮಗಾರಿ ಪೂರ್ಣಗೊಳಿಸಲು ಮುಂದೆ ಬಂದರೆ ಅವರಿಗೆ ವಹಿಸಿಕೊಡುವ ಕ್ರಮಗಳು ಜಾರಿಯ ಲ್ಲಿವೆ ಎಂದು ಹೇಳಿದರು.ಪ್ರತ್ಯೇಕ ಕಾಂಪ್ಲೆಕ್ಸ್ ನಿರ್ಮಿಸಿ: ಜಿಲ್ಲಾ ಪಂಚಾಯಿತಿಯ ಹೊಸ ಸಭಾಂಗಣದಲ್ಲಿ ಸಭೆ ನಡೆಸಿದರೆ ಅಧಿಕಾರ ಕಳೆದುಕೊಳ್ಳಲಾಗುತ್ತದೆ ಎಂದು ಅಲ್ಲಿ ಸಭೆಗಳು ನಡೆಯುತ್ತಿಲ್ಲ. ಆದ್ದರಿಂದ ನಗರದ ಹೊರವಲಯದಲ್ಲಿ ಜಿಲ್ಲಾ ಪಂಚಾಯಿತಿಗೆ ಸಂಬಂಧಿಸಿದಂತೆ ಒಂದು ಹೊಸ ಕಾಂಪ್ಲೆಕ್ಸ್ ನಿರ್ಮಾಣ ಮಾಡಿಕೊಳ್ಳಬೇಕು. ೫೦ ಎಕರೆ ಜಮೀನು ಸ್ವಾಧೀನಪಡಿಸಿಕೊಂಡು ಅಲ್ಲಿ ಹೊಸ ಸಂಕೀರ್ಣ ನಿರ್ಮಿಸಿ, ಅಲ್ಲಿ  ಸುಸಜ್ಜಿತ ಸಭಾಂಗಣ, ಸಮಾಜ ಕಲ್ಯಾಣ ಇಲಾಖೆ, ಇಂಜಿನಿಯರಿಂಗ್ ಮುಂತಾದ ಇಲಾಖೆಗಳಿಗೆ ಅದರಲ್ಲೆ ಸ್ಥಳಾವಕಾಶ ಮಾಡಬೇಕು ಎಂದರು.ಆಳಂದ:ಮಿನಿವಿಧಾನಸೌಧ ನಿರ್ಮಿಸಿ: ಜಿಲ್ಲೆಯ ಆಳಂದದಲ್ಲಿ ಮಿನಿವಿಧಾನಸೌಧ ನಿರ್ಮಾಣಕ್ಕೆ ಇರುವ ಸ್ಥಳದ ಸಮಸ್ಯೆ ನಿವಾರಿಸ ಬೇಕು  ಎಂದು ಸಚಿವ ಖರ್ಗೆ ಜಿಲ್ಲಾಧಿಕಾರಿಗೆ ಹೇಳಿದರು. ಮಿನಿವಿಧಾನಸೌಧ ನಿರ್ಮಾಣಕ್ಕೆ ಸ್ಥಳದ ಅಭಾವವಿದೆ ಎಂದು ಆಳಂದ ಶಾಸಕ ಬಿ.ಆರ್. ಪಾಟೀಲ್ ಸಭೆಯ ಗಮನ ಸೆಳೆದರು.ಜೆಸ್ಕಾಂ ಅಧಿಕಾರಿಗಳ ಪ್ರತ್ಯೇಕ ಸಭೆ: ಜಿಲ್ಲೆ ಯಲ್ಲಿನ ಸರ್ಕಾರಿ ಯೋಜನೆಗಳು ಸೇರಿದಂತೆ ವಿದ್ಯುತ್ ಸಮಸ್ಯೆ ಕುರಿತು ಪರಿಹಾರೋಪಾಯ ಕ್ರಮಗಳನ್ನು ಕೈಗೊಳ್ಳಲು ಜಿಲ್ಲಾಧಿಕಾರಿ ಅಧ್ಯಕ್ಷತೆ ಯಲ್ಲಿ ಜೆಸ್ಕಾಂ ಹಾಗೂ ಸಂಬಂಧಿಸಿದ ಅಧಿಕಾರಿ ಗಳ ಪ್ರತ್ಯೇಕ ಸಭೆಯನ್ನು ನಡೆಸಿ ವರದಿ ಕಳುಹಿ ಸಬೇಕು ಎಂದು ಸಚಿವ ಖರ್ಗೆ ಸೂಚಿಸಿದರು.ಅಧಿಕಾರಿ ವಿರುದ್ಧ ದೂರು: ಕುಡಿಯುವ ನೀರಿನ ಯೋಜನೆಯಲ್ಲಿ ಅಕ್ರಮ ಮಾಡಿದ ಜಿಲ್ಲಾ ಪಂಚಾಯಿತಿ ಎಂಜಿನಿಯರಿಂಗ್ ವಿಭಾಗದ ಕಾರ್ಯನಿರ್ವಾಹಕ ಎಂಜಿನಿಯರ್‌ ವಿರುದ್ಧ ಹೆಚ್ಚುವರಿ ದೂರನ್ನು ಸಲ್ಲಿಸುವ ಕುರಿತು ನಿರ್ಧರಿಸಬೇಕು ಎಂದು ಖರ್ಗೆ ತಿಳಿಸಿದರು.ಸಚಿವ ಡಾ. ಶರಣಪ್ರಕಾಶ್ ಪಾಟೀಲ್ ಅವರು ಮಾತನಾಡಿ, ಭ್ರಷ್ಟ ಅಧಿಕಾರಿ ವಿರುದ್ಧ ದೂರು ಸಲ್ಲಿಸುವಾಗ ‘ಭ್ರಷ್ಟಾಚಾರ ನಡೆದಿರಬ ಹುದು’ ಎಂದು ಜಿಲ್ಲಾ ಪಂಚಾಯಿತಿ ಮುಖ್ಯಕಾರ್ಯ ನಿರ್ವಹಣಾಧಿಕಾರಿ ಅವರು ಬರೆದ ಕಾರಣ ಭ್ರಷ್ಟ ಅಧಿಕಾರಿಗೆ ಜಾಮೀನು ದೊರಕಿದೆ. ಮತ್ತೆ ನಿಖರವಾಗಿ ಹೆಚ್ಚುವರಿ ದೂರು ಸಲ್ಲಿಸಬೇಕು ಎಂದು ಸೂಚಿಸಿದರು.ಬಳಕೆಯಾಗದ ಅನುದಾನ: ಆರೋಗ್ಯ ಕವಚ 108 ಅಂಬ್ಯುಲೆನ್ಸ್‌ಗೆ ಸಮಾನಾಂತರವಾಗಿ ಹೆಚ್ಚುವರಿ ಅಂಬ್ಯುಲೆನ್ಸ್‌ ಖರೀದಿಸಲು ಬಿಆರ್‌ಜಿಎಫ್‌ ಯೋಜನೆ ಅಡಿಯಲ್ಲಿ ₨50 ಲಕ್ಷ ಒದಗಿಸಲಾಗಿದೆ. ವಾಹನ ಖರೀದಿಗೆ ಎಂಆರ್‌ಇಐ ಹಣ ನೀಡಲಾಗಿದೆ. ಒಂದು ವರ್ಷ ವಾದರೂ ಅಂಬ್ಯುಲೆನ್ಸ್‌ ಖರೀದಿಸಿಲ್ಲ; ಅನುದಾನ ವನ್ನು ವಾಪಸ್‌ ನೀಡುತ್ತಿಲ್ಲ ಎಂದು ಜಿಲ್ಲಾ ಆರೋಗ್ಯಾಧಿಕಾರಿ ಡಾ.ಶಿವರಾಜ್‌ ಸಜ್ಜನಶೆಟ್ಟಿ ಸಭೆಯಲ್ಲಿ ಅಸಹಾಯಕತೆ ವ್ಯಕ್ತಪಡಿಸಿದರು.ವಿಜಾಪುರದಿಂದ ಜೇವರ್ಗಿವರೆಗಿನ ರಾಷ್ಟ್ರೀಯ ಹೆದ್ದಾರಿಯನ್ನು ಉತ್ತಮ ಗುಣಮಟ್ಟದಲ್ಲಿ ಇರಿಸಲು ₨೭.೭ ಕೋಟಿ ಹಾಗೂ ಜೇವರ್ಗಿ ಯಿಂದ ಗುಲ್ಬರ್ಗ ರಾಷ್ಟ್ರೀಯ ಹೆದ್ದಾರಿಯನ್ನು ಗುಣಮಟ್ಟದಲ್ಲಿ ಇಡಲು ಸುಮಾರು ರೂ.೧೮ ಕೋಟಿ ಟೆಂಡರ್ ಕರೆಯಲಾಗಿದೆ. ಕಾಮಗಾರಿ ಆರಂಭವಾಗಿದೆ ಎಂದು ರಾಷ್ಟ್ರೀಯ ಹೆದ್ದಾರಿ ಅಭಿವೃದ್ಧಿ ಇಲಾಖೆ ವಿಜಾಪುರದ ಕಾರ್ಯ ನಿರ್ವಾಹಕ ಎಂಜಿನಿಯರ್‌ ಎಸ್.ಎಸ್. ಬಿರಾದಾರ್ ವಿವರಿಸಿದರು.ಕುಡಿಯುವ ನೀರಿನ ಅವ್ಯವಹಾರ ಬಗ್ಗೆ ಜಿಲ್ಲಾ ಪಂಚಾಯಿತಿ ಇಂಜಿನಿಯರಿಂಗ್ ವಿಭಾಗದ ಅಧಿಕಾರಿ ಮಾತನಾಡಿ, ‘ಈಗಾಗಲೇ ಮಂಗಳೂರು ಹಾಗೂ ಬೆಳಗಾವಿಯಿಂದ ಬಂದ ಅಧಿಕಾರಿಗಳ ತಂಡಗಳೆರಡೂ ಹಿಂದೆ ನಡೆದಿದ್ದ ಅವ್ಯವಹಾರದ ತನಿಖೆ ಕೈಗೊಂಡು ರಾಜ್ಯ ಸರ್ಕಾರಕ್ಕೆ ವರದಿ ಸಲ್ಲಿಸಿವೆ. ಎರಡೂ ತಂಡಗಳು ಸಲ್ಲಿಸಿದ ವರದಿಯ ವಿವರ ಇನ್ನೂ ಗೊತ್ತಾಗಿಲ್ಲ. ಆದರೆ, ಬೆಳಗಾವಿ ತಂಡದವರು ತನಿಖಾ ವರದಿಯ ಒಂದು ಪ್ರತಿಯನ್ನು ನನಗೆ ಕೊಟ್ಟಿದ್ದು, ಅದರಲ್ಲಿ 3 ತಾಲ್ಲೂಕುಗಳಲ್ಲಿ ₨ ೩.೬ ಕೋಟಿ ದುರ್ಬಳಕೆಯಾಗಿದೆ. ಸಂಪೂರ್ಣ ತನಿಖಾ ವರದಿ ರಾಜ್ಯ ಸರ್ಕಾರದ ಪ್ರಧಾನ ಕಾರ್ಯದರ್ಶಿ ಅವರಿಂದ ಗೊತ್ತಾಗುತ್ತದೆ’ ಎಂದರು.ಜಿಲ್ಲಾಧಿಕಾರಿ ಡಾ. ಎನ್.ವಿ. ಪ್ರಸಾದ್, ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯ ನಿರ್ವಾಹಕ ಅಧಿಕಾರಿ ಟಿ.ಎಂ.ಎಚ್. ಕುಮಾರ್, ಯಾದಗಿರಿ ಜಿಲ್ಲಾಧಿಕಾರಿ ಎಫ್.ಎಂ. ಜಮಾದಾರ್, ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಜಿಲಾನಿ ಇದ್ದರು.ಶಾಸಕರಾದ ಬಿ.ಆರ್. ಪಾಟೀಲ್, ಜಿ. ರಾಮಕೃಷ್ಣ, ಡಾ. ಉಮೇಶ ಜಾಧವ ರಾಜ್ಯ ವಿಧಾನ ಪರಿಷತ್ ಸದಸ್ಯ ಅಲ್ಲಮಪ್ರಭು ಪಾಟೀಲ್, ಮಲ್ಲಿನಾಥ್ ಪಾಟೀಲ್ ಸೊಂತ್, ಭೀಮಣ್ಣ ಸಾಲಿ ಇತರರು ಸಭೆಯಲ್ಲಿ ಇದ್ದರು.‘ಪರವಾನಗಿ ಇಲ್ಲದ ಕೀಟನಾಶಕ ಮಾರಾಟ ನಿಲ್ಲಿಸಿ’

ಗುಲ್ಬರ್ಗ: ಜಿಲ್ಲೆಯಲ್ಲಿ ಬಯೋ ಪೆಸ್ಟಿಸೈಡ್‌ ಹೆಸರಿನಲ್ಲಿ ಪರವಾನಗಿ ಇಲ್ಲದೆ ಕೀಟನಾಶಕ ಮಾರಾಟ ಮಾಡುತ್ತಿರುವುದನ್ನು ಸ್ಥಗಿತಗೊಳಿಸಲು ಜಂಟಿ ಕೃಷಿ ನಿರ್ದೇಶಕರು ಕೂಡಲೇ ಕ್ರಮ ಕೈಗೊಳ್ಳಬೇಕು ಎಂದು ವೈದ್ಯಕೀಯ ಶಿಕ್ಷಣ ಸಚಿವ ಡಾ. ಶರಣಪ್ರಕಾಶ್ ಪಾಟೀಲ್ ಅವರು ಸೂಚಿಸಿದರು.

ಜಿಲ್ಲಾಧಿಕಾರಿ ಸಭಾಂಗಣದಲ್ಲಿ ರೈಲ್ವೆ ಖಾತೆಯ ಸಚಿವ ಡಾ.ಮಲ್ಲಿಕಾರ್ಜುನ ಖರ್ಗೆಯವರ ಅಧ್ಯಕ್ಷತೆಯಲ್ಲಿ ಭಾನುವಾರ ಜರುಗಿದ ಜಿಲ್ಲಾ ಮಟ್ಟದ ಜಾಗೃತ ಮತ್ತು ಉಸ್ತುವಾರಿ ಸಮಿತಿಯಿಂದ ಕೇಂದ್ರದ ಯೋಜನೆಗಳ ಪರಿಶೀಲನಾ ಸಭೆಯಲ್ಲಿ ಪಾಲ್ಗೊಂಡು ಮಾತನಾಡಿದ ಮಾತನಾಡಿದರು.ಕಳಪೆ ಮಟ್ಟದ ರಸಗೊಬ್ಬರ ಹಾಗೂ ಕೀಟನಾಶಕಗಳ ಮಾರಾಟದ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕು. ಸರಿಯಾಗಿ ಪ್ರಮಾಣೀಕೃತವಾಗಿ, ಪ್ರಯೋಗವಾಗಿ ಬಿಡುಗಡೆಯಾದ ಕೀಟನಾಶಕ ಮಾತ್ರ ಮಾರಾಟವಾಗಬೇಕು. ಅಗ್ಗದಲ್ಲಿ ಕೀಟನಾಶಕ ಸಿಗುತ್ತದೆ ಎಂದು ರೈತರು ಸಂಕಷ್ಟಕ್ಕೀಡಾಗುವುದನ್ನು ಅಧಿಕಾರಿಗಳು ತಪ್ಪಿಸಬೇಕು. ಕೃಷಿ ಇಲಾಖೆಯಲ್ಲಿ ಯಾವುದೇ ಅಧಿಕಾರಿ ತಪ್ಪು ಮಾಡಿದರೂ, ಅದಕ್ಕೆ ಜಂಟಿ ಕೃಷಿ ನಿರ್ದೇಶಕರೆ ಹೊಣೆ ಎಂದರು.ಜಂಟಿ ಕೃಷಿ ನಿರ್ದೇಶಕ ಜೀಲಾನಿ ಮೋಕಾಶಿ ಮಾತನಾಡಿ, ‘ಈಗಾಗಲೇ ೧೨ ಲೈಸೆನ್ಸ್‌್ ರದ್ದುಪಡಿಸಲಾಗಿದೆ ಎಂದರು.

ಪ್ರತಿಕ್ರಿಯಿಸಿ (+)