ಅನುಭವದ ಅಭಿವ್ಯಕ್ತಿಯಿಂದ ಸಾಹಿತ್ಯ ಸೃಷ್ಟಿ
ಮುಂಡಗೋಡ: ಜಿಲ್ಲೆಯಲ್ಲಿ 60 ಸಾವಿರ ಕುಟುಂಬಗಳು ಅರಣ್ಯ ಜಾಗದಲ್ಲಿ ವಾಸಿಸುತ್ತಿದ್ದು, ಕಾನೂನಿನ ಅಡಿಯಲ್ಲಿ ಅವರನ್ನು ಒಕ್ಕಲೆಬ್ಬಿಸಲು ಮುಂದಾದರೆ ಉತ್ತರ ಕನ್ನಡವು ನಿರಾಶ್ರಿತರ ಜಿಲ್ಲೆಯಾಗಲಿದೆ ಎಂದು ಜಿಲ್ಲಾ ಅತಿಕ್ರಮಣಕಾರರ ಹೋರಾಟಗಾರ ವೇದಿಕೆಯ ಅಧ್ಯಕ್ಷ ರವೀಂದ್ರ ನಾಯ್ಕ ಹೇಳಿದರು. ಅವರು ಇಲ್ಲಿಯ ಪ್ರವಾಸಿ ಮಂದಿರದಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ಸರ್ಕಾರದ ವಿವಿಧ ಯೋಜನೆಗಳಿಂದ ಈಗಾಗಲೇ 20 ಸಾವಿರ ಕುಟುಂಬಗಳು ನಿರಾಶ್ರಿತರಾಗಿವೆ. ಗೋಮಾಳ, ಗಾಂವಠಾಣ ಜಾಗದಲ್ಲಿ 8ಸಾವಿರ ಕುಟುಂಬಗಳು ವಾಸಿಸುತ್ತಿವೆ.
ಶೇ.80ರಷ್ಟು ಅರಣ್ಯದಲ್ಲಿ ವಾಸಕ್ಕಾಗಿ, ಉಳುಮೆಗಾಗಿ ಒತ್ತುವರಿ ಮಾಡಿರುವದು ನಿಜವಾದರೂ ಇದು ಅನಿವಾರ್ಯವಾಗಿದೆ. ಕೇಂದ್ರ ಅರಣ್ಯ ಹಕ್ಕು ಕಾಯ್ದೆ ಜಾರಿಯಲ್ಲಿದ್ದು ಅರ್ಜಿ ಮಂಜೂರಿಯ ಕೊನೆಯ ಹಂತದವರೆಗೆ ಒತ್ತುವರಿದಾರರನ್ನು ಒಕ್ಕಲೆಬ್ಬಿಸುವದು ಸಾಧ್ಯವಿಲ್ಲ. ಅವೈಜ್ಞಾನಿಕವಾಗಿ ಒತ್ತುವರಿದಾರರನ್ನು ಒಕ್ಕೆಲೆಬ್ಬಿಸುವ ಪ್ರಯತ್ನ ನಡೆಯುತ್ತಿದ್ದು ಇದನ್ನು ಕಾನೂನಿನ ಮೂಲಕ ಹಾಗೂ ಬಹಿರಂಗವಾಗಿ ಹೋರಾಟ ಮಾಡುತ್ತೇವೆ ಎಂದರು.
ಅತಿಕ್ರಮಣದಾರರ ಸಮಸ್ಯೆಗಳನ್ನು ಬಗೆಹರಿಸಲು ಇದುವರೆಗೂ ಯಾವುದೇ ಸಮಿತಿಯನ್ನು ರಚಿಸದೇ ಕೇವಲ ಒಕ್ಕಲೆಬ್ಬಿಸಲು ಕಾರ್ಯಪಡೆಯನ್ನು ರಚಿಸಲಾಗುತ್ತಿದೆ. ಅತಿಕ್ರಮಣ ತೆರವುಗೊಳಿಸುವಂತೆ ಜಿಲ್ಲಾಡಳಿತ ಬಡಜನರಿಗೆ ನೋಟಿಸ್ ನೀಡಿದರೂ ಯಾವೊಬ್ಬ ಜನಪ್ರತಿನಿಧಿಯು ಈ ಬಗ್ಗೆ ಪ್ರಶ್ನಿಸಿಲ್ಲ ಎಂದು ಆರೋಪಿಸಿದರು.ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ರವಿಗೌಡ ಪಾಟೀಲ, ಎಚ್.ಎಂ. ನಾಯ್ಕ, ರಾಮಣ್ಣ ಪಾಲೇಕರ, ಕೃಷ್ಣ ಹಿರೇಹಳ್ಳಿ, ರಫೀಕ ಇನಾಂದಾರ, ಎಚ್.ಎಚ್.ನಾಗರೊಳ್ಳಿ, ಶಾರದಾಬಾಯಿ ರಾಠೋಡ, ಎಸ್.ಎಂ. ಮೈದು ಉಪಸ್ಥಿತರಿದ್ದರು.
ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್ಬುಕ್ ಪುಟವನ್ನುಫಾಲೋ ಮಾಡಿ.