ಅನುಮತಿ ನಿರೀಕ್ಷೆಯಲ್ಲಿ ‘ಪೊಲೀಸ್‌ ಹಾರ್ಟ್‌’

7

ಅನುಮತಿ ನಿರೀಕ್ಷೆಯಲ್ಲಿ ‘ಪೊಲೀಸ್‌ ಹಾರ್ಟ್‌’

Published:
Updated:

ಬೆಂಗಳೂರು: ಮಹಿಳೆಯರ ರಕ್ಷಣೆಗೆಂದು ನಗರದ ಕಾಲೇಜು ವಿದ್ಯಾರ್ಥಿಗಳು ವಿನೂತನ ಸೇವೆಯನ್ನು ನಗರದಲ್ಲಿ ಪರಿಚಯಿಸಲು ಮುಂದಾಗಿದ್ದು, ಈ ಸೇವೆ ಜಾರಿಗೆ ಸರ್ಕಾ­ರದ ಅನುಮತಿ ಗಾಗಿ ಕಾಯಲಾಗುತ್ತಿದೆ.ಕೆಎಲ್‌ಇ ಕಾಲೇಜಿನ  ಬಿಸಿಎ ವಿಭಾ­ಗದ  ವಿದ್ಯಾರ್ಥಿಗಳು ಹಾಗೂ ಸ್ಪಂದನ ಸಂಘಟನೆ ಜಂಟಿಯಾಗಿ ‘ಪೊಲೀಸ್‌ ಹಾರ್ಟ್‌’ ಹೆಸರಿನ ಸೇವೆ ಸಿದ್ಧಪಡಿಸಿವೆ. ಹೊಸ ಸಹಾಯವಾಣಿಯ ಮೂಲಕ ಮಹಿಳೆಯರ ನೆರವಿಗೆ ಬರುವ ಯೋಜನೆ ಇದಾಗಿದ್ದು, ಈ ಸೇವೆ ಈಗಾಗಲೇ ಅಹಮದಾಬಾದ್‌ನಲ್ಲಿ ಜಾರಿಯಲ್ಲಿದೆ.ನಗರದಲ್ಲಿ ಶನಿವಾರ ನಡೆದ ಪತ್ರಿಕಾ­ಗೋಷ್ಠಿಯಲ್ಲಿ ಕೆಎಲ್‌ಇ ಕಾಲೇಜಿನ  ಬಿಸಿಎ ವಿಭಾಗದ  ವಿದ್ಯಾರ್ಥಿ­ಗಳು ಹಾಗೂ ಸ್ಪಂದನ ಸಂಘಟನೆ ಸದಸ್ಯರು ಈ ನೂತನ ಸೇವೆಯ ಬಗ್ಗೆ ಮಾಹಿತಿ ನೀಡಿದರು.ವಿದ್ಯಾರ್ಥಿನಿ ಎಸ್‌.ದೀಪಾ, ‘ಮಹಿಳೆ­ಯರ ಮೇಲೆ ನಡೆಯುತ್ತಿರುವ ದೌರ್ಜನ್ಯ, ಅತ್ಯಾಚಾರ, ಕಿರುಕುಳಗಳನ್ನು ಹತೋಟಿಗೆ ತಂದು ತುರ್ತುಪರಿಸ್ಥಿತಿಯಲ್ಲಿ ಅವರಿಗೆ ಸಹಾಯವನ್ನು  ಒದಗಿಸಬೇಕಾದ ಅಗತ್ಯವಿದೆ. ಇದರಿಂದ ಗುಜರಾತ್‌ನ ಅಹಮದಾಬಾದ್‌ ನಗರದ ಮಾದರಿಯಲ್ಲಿ ರಾಜ್ಯದಲ್ಲಿಯೂ ಮಹಿಳೆಯರ ರಕ್ಷಣೆಗಾಗಿ ‘ಪೊಲೀಸ್‌ ಹಾರ್ಟ್‌ ಸೇವೆ’ ಯನ್ನು ಜಾರಿಗೆ

ತರಲು ಸಿದ್ಧತೆ ನಡೆಸಿದ್ದೇವೆ’ ಎಂದು ತಿಳಿಸಿದರು.‘ಇದಕ್ಕಾಗಿ ಪ್ರತ್ಯೇಕವಾದ ಸಹಾಯ ವಾಣಿ ಅಂಕಿ ಅಂಶಗಳನ್ನು ಈ ಸೇವೆಯು ಹೊಂದಿರುತ್ತದೆ. ಪೊಲೀಸ್‌ ಇಲಾಖೆಯ ‘100’ ಮತ್ತು ಆಂಬುಲೆನ್ಸ್‌ ಸೇವೆಯ ‘108’ ಕಾರ್ಯನಿರ್ವಹಿಸುವಂತೆ ಈ ಸೇವೆ ಕಾರ್ಯನಿರ್ವಹಿಸುತ್ತದೆ’ ಎಂದರು.‘ಈ ಸೇವೆಯು ಪೊಲೀಸ್‌ ಇಲಾಖೆ, ಗೃಹ ಇಲಾಖೆ, ಗುಪ್ತದಳ ಇಲಾಖೆ ಯಡಿ ಮತ್ತು ಅವುಗಳ ಸಹಕಾರದಿಂದ ಕಾರ್ಯನಿರ್ವಹಿಸಲು ಸಾಧ್ಯವಾಗು ತ್ತದೆ. ಇದರ ಕಾರ್ಯನಿರ್ವಹಣೆಗೆ ಸರ್ಕಾರದ ಅನುಮತಿ ಬೇಕು. ಇದು ಅಹಮದಾಬಾದ್‌ನಲ್ಲಿ ಈಗಾಗಲೇ ಜಾರಿಗೆ ಬಂದಿದೆ. ಅಲ್ಲಿನ ಪೊಲೀಸ್‌ ಇಲಾಖೆ ಪ್ರತ್ಯೇಕವಾಗಿ ಸಹಾಯವಾಣಿ ಅಂಕಿಯನ್ನು ನೀಡಿದೆ’ ಎಂದರು.‘ಮಹಿಳೆಯರು ಈ ಸೇವೆಗೆ ತಮ್ಮ ಮೊಬೈಲ್‌ ಸಂಖ್ಯೆ, ವಿಳಾಸ ಮತ್ತು ಹತ್ತಿರದ ಸಂಬಂಧಿಗಳ ಮೊಬೈಲ್‌ ಸಂಖ್ಯೆಯನ್ನು ನೀಡಿ ಹೆಸರು ನೋಂದಾಯಿಸಿಕೊಳ್ಳಬೇಕು. ಕಿರುಕುಳ, ಅತ್ಯಾಚಾರ ಅಥವಾ ದೌರ್ಜನ್ಯಕ್ಕೊಳಗಾಗುವ ಸಂದರ್ಭದಲ್ಲಿ ಪೊಲೀಸ್‌ ಹಾರ್ಟ್‌ ಸಹಾಯವಾಣಿಗೆ ಮಿಸ್‌ ಕಾಲ್‌ ಅಥವಾ ಖಾಲಿ ಸಂದೇಶವನ್ನು ರವಾನಿಸಬೇಕು. ಅದಕ್ಕೆ ಯಾವುದೇ ನೆಟ್‌ವರ್ಕ್್ ಅಗತ್ಯವಿಲ್ಲ. ಸೆಟ್‌ಲೈಟ್‌ ಮೂಲಕ ಸರ್ವರ್‌ ತಲುಪುತ್ತದೆ. ಆಗ ಘಟನೆ ನಡೆದ ಸ್ಥಳದ ಪತ್ತೆ ಹಚ್ಚಿ ಹತ್ತಿರದ ಪೊಲೀಸ್‌ ಠಾಣೆಗೆ ತಿಳಿಸಿ ಸಹಾಯ ಒದಗಿಸಲಾಗುತ್ತದೆ’ ಎಂದು ವಿವರಿಸಿದರು.ಸ್ಪಂದನ ಜನಪರ ಸಂಘಟನೆಯ ಅಧ್ಯಕ್ಷೆ ವೀಣಾ ಕೆ.ಟಿ, ‘ನಗರದಲ್ಲಿ ಪೊಲೀಸ್‌ ಸೇವೆಯನ್ನು ಜಾರಿಗೆ ತರಲು ಕಾಲೇಜು ವಿದ್ಯಾರ್ಥಿಗಳು, ನಿವೃತ್ತ ಪೊಲೀಸ್‌ ಅಧಿಕಾರಿಗಳು ಬೆಂಬಲ ವ್ಯಕ್ತಪಡಿಸಿದ್ದಾರೆ. ಇದಕ್ಕೆ ಸರ್ಕಾರ ಮತ್ತು ಪೊಲೀಸ್‌ ಇಲಾಖೆಯ ಸಹಕಾರ ಅಗತ್ಯವಾಗಿದೆ’ ಎಂದು ಹೇಳಿದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry