ಬುಧವಾರ, ಜನವರಿ 29, 2020
27 °C
ಎಲ್‌ಪಿಜಿ ನೇರ ಸಬ್ಸಿಡಿ

ಅನುಷ್ಠಾನ ಸಮಿತಿ ರಚನೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಅನುಷ್ಠಾನ ಸಮಿತಿ ರಚನೆ

ವಿಜಾಪುರ: ಅಡುಗೆ ಅನಿಲ ಸಿಲಿಂಡರ್‌ ಗ್ರಾಹಕರಿಗೆ ನೇರವಾಗಿ ಸಬ್ಸಿಡಿ ನೀಡುವ ಕೇಂದ್ರ ಸರ್ಕಾರದ ಯೋಜ ನೆಯ ಸಮರ್ಪಕ ಅನುಷ್ಠಾನಕ್ಕೆ ಜಿಲ್ಲಾ ಮಟ್ಟದ ಸಮಿತಿ ರಚನೆಯಾಗಿದೆ.‘ಪ್ರಜಾವಾಣಿ’ ಪತ್ರಿಕೆಯಲ್ಲಿ ಗುರು ವಾರ ಪ್ರಕಟವಾದ ವರದಿಯ ಹಿನ್ನೆಲೆ ಯಲ್ಲಿ ಶುಕ್ರವಾರ ಅಧಿಕಾರಿಗಳು ಹಾಗೂ ಅಡುಗೆ ಅನಿಲ ವಿತರಕರ ತುರ್ತು ಸಭೆ ನಡೆಸಿದ ಜಿಲ್ಲಾಧಿಕಾರಿ ರಿತ್ವಿಕ್‌ ರಂಜನ್‌ ಪಾಂಡೆ, ಯೋಜ ನೆಯ ಸಮರ್ಪಕ ಅನುಷ್ಠಾನಕ್ಕೆ ಸೂಚಿಸಿದರು.ಜಿಲ್ಲೆಯಲ್ಲಿ ಶೇ.65 ರಷ್ಟು ಜನ ಮಾತ್ರ ಆಧಾರ್‌ ಯೋಜನೆಯಡಿ ನೋಂದಣಿ ಮಾಡಿಸಿಕೊಂಡಿದ್ದು, ಅವ ರಲ್ಲಿ ಕೇವಲ ಶೇ.30 ರಷ್ಟು ಜನರಿಗೆ ಮಾತ್ರ ಆಧಾರ್‌ ಕಾರ್ಡ್‌್‌ಗಳು ತಲುಪಿವೆ. ಆಧಾರ್‌ ನೋಂದಣಿ ಕೇಂದ್ರಗಳ ಬಗೆಗೆ ಜನತೆಗೆ ಮಾಹಿತಿ ಇಲ್ಲ. ಜಿಲ್ಲೆಯಲ್ಲಿರುವ ಎಲ್‌ಪಿಜಿ ವಿತರ ಕರ ಕಚೇರಿಗಳಲ್ಲಿಯೇ ಆಧಾರ್‌ ನೋಂದಣಿ ಕೇಂದ್ರ ಪ್ರಾರಂಭಿಸಬೇಕು. ಇತರೆಡೆಯೂ ನೋಂದಣಿ ಚುರುಕು ಗೊಳಿಸಬೇಕು ಎಂದು ಜಿಲ್ಲಾಧಿಕಾರಿ ಗಳು ಅಧಿಕಾರಿಗಳಿಗೆ ನಿರ್ದೇಶನ ನೀಡಿದರು.ಆಧಾರ್‌ ಸಂಖ್ಯೆಯನ್ನು ಬ್ಯಾಂಕ್ ಖಾತೆಗೆ ಜೋಡಣೆ ಮಾಡಿಕೊಳ್ಳಲು ಫೆಬ್ರುವರಿ ಕೊನೆಯವರೆಗೆ ಅವಕಾಶ ವಿದೆ. ಎಲ್‌ಪಿಜಿ ಬಳಕೆ ದಾರರು ತಮ್ಮ ಆಧಾರ್‌ ಸಂಖ್ಯೆ ಯನ್ನು ಜೋಡಣೆ ಮಾಡಿ ಸೌಲಭ್ಯ ಪಡೆದುಕೊಳ್ಳಬೇಕು ಎಂದು ಕೋರಿದರು.ಗ್ರಾಹಕರ ಆಧಾರ್‌ ಸಂಖ್ಯೆಯನ್ನು ಬ್ಯಾಂಕ್ ಖಾತೆಗೆ ಜೋಡಿಸುವಾಗ ಯಾವುದೇ ಸಮಸ್ಯೆ ಬಾರದಂತೆ ಕ್ರಮ ಕೈಗೊಳ್ಳಲು ಜಿಲ್ಲಾ ಲೀಡ್ ಬಾಂಕ್ ವ್ಯವಸ್ಥಾಪಕರಿಗೆ ಸೂಚಿಸಿದರು.ಎಲ್‌ಪಿಜಿ ಬಳಕೆದಾರರ ಆಧಾರ್‌ ಸಂಖ್ಯೆಯನ್ನು ಅವರ ಖಾತೆಗಳಿಗೆ ಜೋಡಿಸುವ ಕಾರ್ಯವನ್ನು ಆದ್ಯ ತೆಯ ಮೇರೆಗೆ ಕೈಗೆತ್ತಿಕೊಳ್ಳುವಂತೆ ಎಲ್ಲ ಬ್ಯಾಂಕ್‌ಗಳ ವ್ಯವಸ್ಥಾಪಕರಿಗೆ ಸೂಚಿಸಿದ್ದಾಗಿ ಲೀಡ್‌ ಬ್ಯಾಂಕ್‌ ವ್ಯವಸ್ಥಾಪಕರು ಮಾಹಿತಿ ನೀಡಿದರು.ಆಹಾರ ಮತ್ತು ನಾಗರೀಕ ಸರಬರಾಜು ಇಲಾಖೆಯ ಉಪ ನಿರ್ದೇಶಕ ಸೋಮಲಿಂಗ ಗೆಣ್ಣೂರ ಇತರರು ಸಭೆಯಲ್ಲಿದ್ದರು.

ಪ್ರತಿಕ್ರಿಯಿಸಿ (+)