ಮಂಗಳವಾರ, ಅಕ್ಟೋಬರ್ 22, 2019
26 °C

ಅನೂಕ್ಯಗೆ ಎಂಜಿನಿಯರ್ ಆಗುವ ಹಂಬಲ

Published:
Updated:

ಬೆಂಗಳೂರಿನ ಪ್ರತಿಷ್ಠಿತ ಫ್ಯಾಷನ್ ಶೋಗಳಲ್ಲಿ `ಮಿಸ್ ಬೆಂಗಳೂರು~ ಸ್ಪರ್ಧೆಯೂ ಒಂದು. ರ‌್ಯಾಂಪ್ ಮೇಲೆ ನಡೆಯದ, ಸಾಂಪ್ರದಾಯಿಕ ಕುಟುಂಬದಿಂದ ಬಂದ ಹದಿನಾರು ವರ್ಷದ ಅನೂಕ್ಯ ಸುರೇಶ್ ಈ ವರ್ಷದ ಮಿಸ್ ಬೆಂಗಳೂರು ಜೊತೆಗೆ `ಮಿಸ್ ಫೋಟೊಜೆನಿಕ್~ ಮತ್ತು `ಮಿಸ್ ಬ್ಯೂಟಿಫುಲ್ ಹೇರ್~ ಕಿರೀಟ ತೊಟ್ಟು ಫ್ಯಾಷನ್ ಪ್ರಿಯರ ಹುಬ್ಬೇರುವಂತೆ ಮಾಡಿದರು. ಮಿಸ್ ಬೆಂಗಳೂರು ಆದ ಅನುಭವ, ಮುಂದಿನ ಯೋಜನೆಗಳನ್ನು ಅವರು `ಮೆಟ್ರೊ~ ಜೊತೆ ಹಂಚಿಕೊಂಡಿದ್ದು ಹೀಗೆ..ಮಿಸ್ ಬೆಂಗಳೂರು ಸ್ಪರ್ಧೆಗೆ ಆಯ್ಕೆಯಾಗಿದ್ದು ಹೇಗೆ?

ನಾನು ಸ್ಪರ್ಧೆಗೆ ಹೆಚ್ಚೇನೂ ತಯಾರಿ ಮಾಡಿಕೊಂಡಿರಲಿಲ್ಲ. ಕಾಲೇಜಿಗೆ `ಮ್ಯಾಕ್ಸ್~ ಮಿಸ್ ಬೆಂಗಳೂರು ತಂಡದವರು ಬಂದಿದ್ದರು. ಗೆಳತಿಯರೆಲ್ಲಾ ಏಕೆ ಆಡಿಷನ್‌ನಲ್ಲಿ ಭಾಗವಹಿಸಬಾರದು ಎಂದಾಗ ಆಡಿಷನ್ ಹೇಗೆ ಇರುತ್ತದೆ ಅನ್ನುವ ಕುತೂಹಲದಿಂದ ಭಾಗವಹಿಸಿದೆ ಅಷ್ಟೆ.ಈ ಸ್ಪರ್ಧೆಯಲ್ಲಿ ಎಷ್ಟು ಹುಡುಗಿಯರು ಭಾಗವಹಿಸಿದ್ದರು?

ಒಟ್ಟು 14 ಮಂದಿ ಭಾಗವಹಿಸಿದ್ದರು.ನಿಮಗೆ ಯಾವ ರೀತಿ ಗ್ರೂಮಿಂಗ್ ಮಾಡಿದರು?

ರ‌್ಯಾಂಪ್ ಮೇಲೆ ಹೇಗೆ ನಡೆಯಬೇಕು, ಹೇಗೆ ಮಾತನಾಡಬೇಕು ಎಂಬುದರ ಬಗ್ಗೆ ಫ್ಯಾಷನ್ ಕೋರಿಯೊಗ್ರಾಫರ್ ಶ್ರೀಧರ್ ಎಂ.ಎಸ್. ಹೇಳಿಕೊಟ್ಟಿದ್ದರು.ಮೊದಲ ಬಾರಿ ರ‌್ಯಾಂಪ್ ಮೇಲೆ ನಡೆದ ಅನುಭವ?

ತುಂಬಾ ಚೆನ್ನಾಗಿತ್ತು, ಮೊದಲು ಸ್ವಲ್ಪ ಭಯ ಅನಿಸಿದರು ಎಲ್ಲಿಯೂ ತೋರಿಸಿಕೊಳ್ಳಲಿಲ್ಲ ಆತ್ಮವಿಶ್ವಾಸದಿಂದಲೇ ರ‌್ಯಾಂಪ್ ಮೇಲೆ ನಡೆದೆ.ತೀರ್ಪುಗಾರರು ಕೇಳಿದ ಪ್ರಶ್ನೆ ಏನು ಇತ್ತು?

ಗ್ಲಾಮರ್ ಎಂದರೆ ಏನು ಅಂತ? ನಟಿ ರಾಗಿಣಿ ನನಗೆ ಪ್ರಶ್ನೆ ಕೇಳಿದರು. ಗ್ಲಾಮರ್ ಅನ್ನುವುದು ನೋಡುವವರ ಕಣ್ಣಿನಲ್ಲಿ ಇರುತ್ತದೆ. ಕೆಲವರಿಗೆ ಸಾಂಪ್ರದಾಯಿಕ ವಿನ್ಯಾಸ ಚೆನ್ನಾಗಿ ಕಂಡರೆ, ಮತ್ತೆ ಕೆಲವರಿಗೆ ಪಾಶ್ಚತ್ಯ ಉಡುಪು ಮುದ್ದಾಗಿ ಕಾಣುತ್ತದೆ.  ನಮ್ಮನ್ನ ನಾವು ಎಷ್ಟು ಚೆನ್ನಾಗಿ ಬೇರೆಯವರ ಮುಂದೆ ಪ್ರೆಸೆಂಟ್ ಮಾಡಿಕೊಳ್ಳುತ್ತೀವಿ ಅನ್ನುವುದರ ಮೇಲೆ ನಮ್ಮ ಗ್ಲಾಮರ್ ಅವಲಂಬಿತವಾಗಿರುತ್ತದೆ. ಗ್ಲಾಮರ್ ಅಂದರೆ ಎಕ್ಸಪೋಸ್ ಅಂತ ಅಲ್ಲವೇ ಅಲ್ಲ.ಯಾವ ರೀತಿಯ ಉಡುಗೆ ತೊಟ್ಟಿದ್ದಿರಿ?

ನಾನು ರಮೇಶ್ ಡೆಪ್ಲಾ ಅವರ ಕಡು ನೀಲಿ ಬಣ್ಣದ ನೈಟ್ ಗೌನ್ ಧರಿಸಿದ್ದೆ.

ಮಿಸ್ ಬೆಂಗಳೂರಿಗೂ ಮುಂಚೆ ಮತ್ತು ನಂತರದ ಅನುಭವ?

ಮಿಸ್ ಬೆಂಗಳೂರು ಆಗುವ ಮುಂಚೆ ತುಂಬಾ ಸಮಯ ಇತ್ತು. ಈಗ ಸಮಯವಿಲ್ಲದಷ್ಟು  ಶೆಡ್ಯೂಲ್ ಆಗಿದೆ.ಇಲ್ಲಿಯವರಗೆ ಎಷ್ಟು ಶೋಗಳಿಗೆ ನೀವು ಒಪ್ಪಿದ್ದಿರಾ?

ನಾನು ಈ ಬಾರಿ ದ್ವಿತೀಯ ಪಿಯುಸಿಯಲ್ಲಿ ಇರುವುದರಿಂದ ಅಷ್ಟೊಂದು ಶೋಗಳಿಗೆ ಒಪ್ಪಲಿಲ್ಲ, ರಮೇಶ್ ಡೆಪ್ಲಾ ಅವರ ವಿನ್ಯಾಸಕ್ಕೆ ಮತ್ತು ಸಂಸ್ಕೃತಿ ಸಿಲ್ಕ್‌ಗೆ ಶೋ ನೀಡಿದ್ದಿನಿ.ಕುಟುಂಬದ ಬಗ್ಗೆ  ಹೇಳಿ?

ಅಪ್ಪ ಹರೀಶ್ ಉದ್ಯಮಿ ಮತ್ತು ತಾಯಿ ಗೀತಾ ಗೃಹಿಣಿ. ತಂಗಿ ಅದೂರ್ಯ ಎಂಟನೇ ತರಗತಿಯಲ್ಲಿ ಓದುತ್ತಿದ್ದಾಳೆ.ವಿದ್ಯಾಭ್ಯಾಸದ ಬಗ್ಗೆ ಹೇಳಿ?


ನಾನು ಮೌಂಟ್ ಕಾರ್ಮೆಲ್ ಕಾಲೇಜಿನಲ್ಲಿ ದ್ವಿತೀಯ ಪಿಯುಸಿಯಲ್ಲಿ ಕಲಿಯುತ್ತಿದ್ದಿನಿ.ಮುಂದೆ ಏನು ಆಗಬೇಕು ಎಂದು ಕೊಂಡಿದ್ದಿರಾ?

ನನಗೆ ಚೆನ್ನಾಗಿ ಓದಿ ಎಂಜಿನಿಯರ್ ಆಗಬೇಕು. ಜೊತೆಯಲ್ಲಿಯೇ ಖ್ಯಾತ ಮಾಡೆಲ್ ಕೂಡ ಆಗಬೇಕೆಂಬ ಹಂಬಲವಿದೆ. ಮಾಡೆಲಿಂಗ್‌ನಲ್ಲಿ  ಅನಿಶ್ಚಿತತೆ ಕಾಡುತ್ತದೆ. ಆದ್ದರಿಂದ ಬ್ಯಾಕ್ ಆಪ್ ಆಗಿ ಒಂದು ಒಳ್ಳೆಯ ವೃತ್ತಿ ಇರಲೇಬೇಕು ಎಂಬುದು ನನ್ನ ನಿಲುವು.ಬಿಡುವಿನ ಸಮಯ ಹೇಗೆ ಕಳೆಯುತ್ತಿರಾ?

ನೃತ್ಯ ಮಾಡುತ್ತಾ...ಇಲ್ಲಿಯವರೆಗೆ ನಿಮಗೆ ಸಿಕ್ಕಿರುವ ಬೆಸ್ಟ್ ಕಾಂಪ್ಲಿಮೆಂಟ್ಸ್?

ಯು ಆರ್ ದ ಮೋಸ್ಟ್ ಬ್ಯೂಟಿಪುಲ್ ಎನ್ನುವುದು ನನಗೆ ಇಲ್ಲಿಯವರಗೆ ಬಂದಿರುವ ಬೆಸ್ಟ್ ಕಾಂಪ್ಲಿಮೆಂಟ್.ಮುಂದೆ ಮಿಸ್ ಇಂಡಿಯಾ ಮತ್ತು ಸಿನಿಮಾದಲ್ಲಿ ನಟಿಸುವ ಆಸೆ ಇದೆಯಾ? ಖಂಡಿತವಾಗಿಯೂ ಇದೆ. 

ಚುನಾವಣಾ ಫಲಿತಾಂಶ 2019 | ಹರಿಯಾಣ ಮತ್ತು ಮಹಾರಾಷ್ಟ್ರ ವಿಧಾನಸಭೆ 2019 ಚುನಾವಣೆಗೆ ಸಂಬಂಧಿಸಿದ ಸಮಗ್ರ ಸುದ್ದಿ, ಮಾಹಿತಿ, ವಿಶ್ಲೇಷಣೆ ಇಲ್ಲಿ ಲಭ್ಯ.

ಮಹಾರಾಷ್ಟ್ರ ವಿಧಾನಸಭೆಯ ಫಲಿತಾಂಶಕ್ಕಾಗಿ ಇಲ್ಲಿ ಕ್ಲಿಕ್ ಮಾಡಿ

ಹರಿಯಾಣ ವಿಧಾನಸಭೆಯ ಫಲಿತಾಂಶಕ್ಕಾಗಿ ಇಲ್ಲಿ ಕ್ಲಿಕ್ ಮಾಡಿ

Post Comments (+)