ಶನಿವಾರ, ಜುಲೈ 24, 2021
28 °C

ಅನೈತಿಕ ಚಟುವಟಿಕೆಗಳಿಗೆ ಆಶ್ರಯ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಶಹಾಬಾದ: ಪಟ್ಟಣ ಹೊರವಲಯದ ಮರಗೋಳ ಕಾಲೇಜು ಬಳಿ ಎರಡು ದಶಕಗಳ ಹಿಂದೆ  ನಿರ್ಮಿಸಿದ ನೂರಾರು ಆಶ್ರಯ ಮನೆಗಳು ಹಾಳು ಬಿದ್ದಿದ್ದು, ಈ ಮನೆಗಳು ಅನೈತಿಕಚಟುವಟಿಕೆಗಳ ಕೇಂದ್ರಗಳಾಗಿವೆ.ಸರ್ಕಾರ 1992-93 ರಲ್ಲಿ ನಿರ್ಮಿಸಿರುವ ನೂರು ಮನೆಗಳು ಬಡ ಫಲಾನುಭವಿಗಳ ಪಾಲಿಗೆ ವರವಾಗುವ ಬದಲು ಶಾಪವಾಗಿ ಪರಿಣಮಿಸಿವೆ.ಉತ್ತಮ ಶಹಾಬಾದ ಕಲ್ಲು, ಸಿಮೆಂಟ್‌ನಿಂದ ಕಟ್ಟಿದ ಈ ಮನೆಗಳಲ್ಲಿ ಕೆಲವನ್ನು ಬಿಟ್ಟರೆ ಉಳಿದವುಗಳಿಗೆ ಬಾಗಿಲು ಕಿಟಕಿಗಳಿಲ್ಲ. ಮೇಲ್ಛಾವಣಿ ಇದೆ, ಸಂಪರ್ಕ ರಸ್ತೆ ಇಲ್ಲ. ನಗರಸಭೆ ಮನಸು ಮಾಡಿದರೆ, ರಸ್ತೆಯನ್ನೂ ನಿರ್ಮಿಸಬಹುದು. ಪಕ್ಕದಲ್ಲೇ ದೊಡ್ಡ ನೀರಿನ ಟ್ಯಾಂಕ್‌ ಇದೆ. 11 ಕೆ.ವಿ. ವಿದ್ಯುತ್‌ ಲೈನ್‌ ಇಲ್ಲಿಂದಲೇ ಹಾಯ್ದು ಹೋಗುತ್ತದೆ.ಆದರೆ ಸೂಕ್ತ ನಿರ್ವಹಣೆ ಇಲ್ಲದೇ ಮನೆಗಳು ದುಸ್ಥಿತಿಯಲ್ಲಿವೆ. ಇನ್ನೂ ಕೆಲ ಮನೆಗಳ ಬಾಗಿಲು, ಕಿಟಕಿಗಳನ್ನು ದುಷ್ಕರ್ಮಿಗಳು ಕಳ್ಳತನ ಮಾಡಿದ್ದಾರೆ. ಮತ್ತೂ ಕೆಲ ಮನೆಗಳು ಅಪೂರ್ಣ ಸ್ಥಿತಿಯಲ್ಲಿದ್ದು ಗೋಡೆ ಮಾತ್ರ ನಿರ್ಮಾಣಗೊಂಡು ಹಾಗೆ ಉಳಿದಿವೆ.ಜನಸಂಪರ್ಕವೇ ಇಲ್ಲದ ಈ ನಿರ್ಜನ ಪ್ರದೇಶ ಜೂಜು, ಕುಡಿತ, ಮತ್ತಿತರ ಅನೈತಿಕ ಚಟುವಟಿಕೆಗಳ ಕೇಂದ್ರವಾಗಿದೆ. ಕೂಡಲೆ ನಗರಸಭೆ ಮೂಲಭೂತ ಸೌಕರ್ಯ ಕಲ್ಪಿಸಿ ಬಡ ಫಲಾನುಭವಿಗಳಿಗೆ ಈ

ಆಶ್ರಯ ಮನೆಗಳನ್ನು ವಿತರಿಸುವ ವ್ಯವಸ್ಥೆ ಮಾಡಬೇಕೆಂದು ಹತ್ತಿರದ ಬಸವೇಶ್ವರ ನಗರ ನಿವಾಸಿ ಪರಶುರಾಮ ಮತ್ತಿತರ ಗ್ರಾಮಸ್ಥರು ಆಗ್ರಹಿಸುತ್ತಾರೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.