ಶನಿವಾರ, ಜೂನ್ 19, 2021
24 °C

ಅನೈತಿಕ ಸಂಬಂಧ ಬಹಿರಂಗ: ಉಸಿರುಗಟ್ಟಿಸಿ ಪತಿಯ ಕೊಲೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಕನಕಪುರ: ಹಾರೋಹಳ್ಳಿ ಪೊಲೀಸ್ ಠಾಣೆ ವ್ಯಾಪ್ತಿಯ ಸಿಡಿದೇವರ ಹಳ್ಳಿಯಲ್ಲಿ ಬುಧವಾರ ರಾತ್ರಿ ಮಹಿಳೆಯೊಬ್ಬಳು ತನ್ನ ಪ್ರಿಯಕರನ ಜೊತೆಗೂಡಿ ಗಂಡನನ್ನು ಕೊಲೆ ಮಾಡಿದ್ದಾಳೆ.‘ತನ್ನ ಅನೈತಿಕ ಸಂಬಂಧ ಪತಿಗೆ ಗೊತ್ತಾ ಯಿತು ಎಂಬ ಹಿನ್ನೆಲೆಯಲ್ಲಿ ಮಹಿಳೆ ಈ ಕೃತ್ಯ ಎಸಗಿದ್ದಾಳೆ’ ಎಂದು ಕನಕಪುರ ಪೊಲೀಸರು ತಿಳಿಸಿದ್ದಾರೆ.ತಾಲ್ಲೂಕಿನ ಮರಳವಾಡಿ ಹೋಬಳಿ ಸಿಡಿದೇವರ ಹಳ್ಳಿಯ ಎ.ಜೆ. ಕಾಲೋನಿ ನಿವಾಸಿ ಮಂಟೇಲಿಂಗಯ್ಯ ಅಲಿಯಾಸ್ ಚಿಕ್ಕೋನು ಉರುಫ್ ಪಿಂಗ (43) ಕೊಲೆ ಯಾದ ದುರ್ದೈವಿ. ಮಂಟೇಲಿಂಗಯ್ಯ ಮತ್ತು ಲಕ್ಷ್ಮೀ ವಿವಾಹವಾಗಿ 16 ವರ್ಷ ಕಳೆದಿವೆ. ದಂಪತಿಗೆ ಒಂದು ಹೆಣ್ಣು ಮತ್ತು ಒಂದು ಗಂಡು ಮಗುವಿದೆ.ಇಬ್ಬರೂ ಇಲ್ಲಿನ ಪಟೇಲ ರದೊಡ್ಡಿ ಬಳಿ ಇರುವ ಅಶ್ವತ್ಥ ನಾರಾ ಯಣ ಎಂಬುವವರ ತೋಟದಲ್ಲಿ ಹಲವು ವರ್ಷಗಳಿಂದ ಕೂಲಿ ಮಾಡಿ ಜೀವನ ಸಾಗಿಸುತ್ತಿದ್ದರು.‘ಸಿಡಿದೇವರ ಹಳ್ಳಿಯ ದಾಸಯ್ಯನ ಮಗ ಚಂದ್ರ ಎಂಬುವವನ ಜೊತೆ ಲಕ್ಷ್ಮಿ 10 ವರ್ಷಗಳಿಂದ ಅನೈತಿಕ ಸಂಬಂಧ ಹೊಂದಿದ್ದಳು. ಬುಧವಾರ ಇವರ ಅಕ್ರಮ ಸಂಬಂಧ ಮಂಟೇಲಿಂಗಯ್ಯನಿಗೆ ಗೊತ್ತಾಗಿದೆ. ಇದೇ ಕಾರಣಕ್ಕಾಗಿ ಚಂದ್ರ ಮತ್ತು ಲಕ್ಷ್ಮೀ ಬುಧವಾರ ರಾತ್ರಿಯೇ ಮಂಟೇಲಿಂ ಗಯ್ಯನ ಕುತ್ತಿಗೆಗೆ ಟವೆಲ್ ಬಿಗಿದು ಉಸಿರುಗಟ್ಟಿಸಿ ಕೊಲೆ ಮಾಡಿದ್ದಾರೆ.  ಲಕ್ಷ್ಮೀ ತಪ್ಪೊಪ್ಪಿಕೊಂಡಿದ್ದಾಳೆ’ ಎಂದು ಪೊಲೀಸರು ವಿವರಿಸಿದ್ದಾರೆ.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.