ಅನ್ನ, ಅಕ್ಷರ ಮನುಷ್ಯನಿಗೆ ಮುಖ್ಯ

7

ಅನ್ನ, ಅಕ್ಷರ ಮನುಷ್ಯನಿಗೆ ಮುಖ್ಯ

Published:
Updated:ಶಿವಮೊಗ್ಗ: ಅನ್ನ ಮತ್ತು ಅಕ್ಷರ, ಮನುಷ್ಯನ ಬದುಕಿನಲ್ಲಿ ಬಹು ಮುಖ್ಯ ಪಾತ್ರ ವಹಿಸುವ ಅಂಶಗಳು. ಅನ್ನ ದೈಹಿಕ ಬೆಳವಣಿಗೆಗೆ ಸಹಕರಿಸಿದರೆ, ಅಕ್ಷರ, ಜ್ಞಾನ ಪಕ್ವವಾಗಿಸುತ್ತದೆ ಎಂದು ಚಿತ್ರ ನಿರ್ದೇಶಕ ಕೆ.ಎಸ್.ಎಲ್.ಸ್ವಾಮಿ (ರವಿ) ತಿಳಿಸಿದರು. ನಗರದ ಕುವೆಂಪು ರಂಗಮಂದಿರದಲ್ಲಿ ದೇಸಿ ವಿದ್ಯಾಶಾಲಾ ಪದವಿ ಪೂರ್ವ (ಸ್ವತಂತ್ರ) ಕಾಲೇಜು ಗುರುವಾರ ಹಮ್ಮಿಕೊಂಡಿದ್ದ ಕಾಲೇಜು ವಾರ್ಷಿಕೋತ್ಸವ ಸಮಾರಂಭ ಉದ್ಘಾಟಿಸಿ ಮಾತನಾಡಿದರು. ವಿದ್ಯಾರ್ಥಿಗಳು ತಾವು ಪಡೆದ ಅಕ್ಷರ ಜ್ಞಾನ, ಮಾರ್ಗದರ್ಶನ, ಅನುಭವಗಳನ್ನು ಗ್ರಾಮೀಣ ಭಾಗದ ಜನರಿಗೆ ಹಂಚುವ ಕೆಲಸ ಮಾಡಬೇಕು ಎಂದು ಹೇಳಿದರು.  ಇದೇ ಸಂದರ್ಭದಲ್ಲಿ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ವಿತರಿಸಲಾಯಿತು. ಸಂಸ್ಥೆ ಆಡಳಿತಾಧಿಕಾರಿಯೂ ಆದ ಉಪ ವಿಭಾಗಾಧಿಕಾರಿ ಎಂ.ಎಲ್. ವೈಶಾಲಿ ಉಪಸ್ಥಿತರಿದ್ದರು. ಕಾಲೇಜು ಪ್ರಾಂಶುಪಾಲ ಪಿ. ಸುಧಾಕರ ರಾವ್ ಅಧ್ಯಕ್ಷತೆ ವಹಿಸಿದ್ದರು. ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry