ಶುಕ್ರವಾರ, ನವೆಂಬರ್ 22, 2019
22 °C

ಅನ್ಯಗ್ರಹಗಳಲ್ಲಿ ಜೀವಿಗಳು?

Published:
Updated:

ವಾಷಿಂಗ್ಟನ್ (ಪಿಟಿಐ): ನಾಸಾದ ಜೇಮ್ಸ ವೆಬ್ ಸ್ಪೇಸ್ ಟೆಲಿಸ್ಕೋಪ್ ನಶಿಸಿದ ನಕ್ಷತ್ರಗಳ ಸುತ್ತ ಸುತ್ತುವ ಕೆಲವು ಗ್ರಹಗಳಲ್ಲಿ ಜೀವದ ಕುರುಹುಗಳನ್ನು ಪತ್ತೆ ಹಚ್ಚಿದೆ.

ಶಕ್ತಿಯ ಮೂಲ ಇಲ್ಲದ ಕಾರಣ ನಶಿಸಿದ ನಕ್ಷತ್ರಗಳ ಕಕ್ಷೆಯಲ್ಲಿರುವ ಗ್ರಹಗಳಲ್ಲಿ ಮೇಲ್ನೋಟಕ್ಕೆ ಕಂಡುಬಂದಿರುವ ಪರಿಸರದಿಂದ ಒಂದು ಕಾಲಕ್ಕೆ ಅಲ್ಲಿ ಜೀವಿಗಳಿದ್ದರಬಹುದು ಎಂಬ ವಿಷಯವನ್ನು ಈ ಯಂತ್ರ ಕಂಡುಹಿಡಿದಿದೆ ಎಂದು ನಾಸಾ ವಿಜ್ಞಾನಿಗಳು ಹೇಳಿದ್ದಾರೆ.

ನಾಸಾ 2018ರಲ್ಲಿ ಈ ಶಕ್ತಿಶಾಲಿ ದೂರದರ್ಶಕ ಯಂತ್ರವನ್ನು ಬಾಹ್ಯಾಕಾಶಕ್ಕೆ ಕಳಿಸಲಿದೆ ಎಂದು ಟೆಲ್ ಅವಿವ್ ವಿಶ್ವವಿದ್ಯಾಲಯದ ಖಗೋಳ ಭೌತವಿಜ್ಞಾನ ವಿಭಾಗದ ಪ್ರಾಧ್ಯಾಪಕ ಡಾನ್ ಮಾವೋಜ್ ಹೇಳಿದ್ದಾರೆ.

ಪ್ರತಿಕ್ರಿಯಿಸಿ (+)