ಅನ್ಯಗ್ರಹ ಜೀವಿಗಳ ಮುಖಾಮುಖಿ

ಗುರುವಾರ , ಜೂಲೈ 18, 2019
24 °C

ಅನ್ಯಗ್ರಹ ಜೀವಿಗಳ ಮುಖಾಮುಖಿ

Published:
Updated:

ಲಂಡನ್ (ಪಿಟಿಐ): ಭೂಮಂಡಲದ ನೈಸರ್ಗಿಕ ಸಂಪನ್ಮೂಲಗಳನ್ನು ಅನ್ಯಗ್ರಹ ಜೀವಿಗಳು ಕೊಳ್ಳೆ ಹೊಡೆಯಲಿವೆ ಎಂದು ಖ್ಯಾತ ಭೌತವಿಜ್ಞಾನಿ ಸ್ಟೀಫನ್ ಹಾಕಿಂಗ್ಸ್ ಎಚ್ಚರಿಕೆಯ ಬೆನ್ನಲ್ಲೇ  ಆಕ್ಸಫರ್ಡ್ ವಿಜ್ಞಾನಿಗಳು `ಮುಂದಿನ 100 ವರ್ಷಗಳಲ್ಲಿ ಅನ್ಯಗ್ರಹ ಜೀವಿಗಳೊಂದಿಗೆ ಮಾನವ ಮುಖಾಮುಖಿಯಾಗುತ್ತಾನೆ~ ಎಂದು ಭವಿಷ್ಯ ನುಡಿದಿದ್ದಾರೆ.ಮುಂದಿನ ನೂರು ವರ್ಷಗಳ ಒಳಗಾಗಿ ಅನ್ಯ ಗ್ರಹಗಳಲ್ಲಿರುವ ಜೀವಿಗಳನ್ನು ಸಂಧಿಸುವ ಐತಿಹಾಸಿಕ ಗಳಿಗೆಗಾಗಿ ಸರ್ಕಾರಗಳು ಇಂದಿನಿಂದಲೇ ಸಿದ್ಧತೆ ಆರಂಭಿಸಬೇಕು ಎಂದು ಬ್ರಿಟನ್ ಭೌತವಿಜ್ಞಾನಿಗಳು ಸಲಹೆ ಮಾಡಿದ್ದಾರೆ ಎಂದು ಪತ್ರಿಕೆಯೊಂದು ವರದಿ ಮಾಡಿದೆ. `ಭೂಮಿಯ ಆಚೆಗೂ ನಮಗಿಂತಲೂ ಅತ್ಯಂತ ಚಾಣಾಕ್ಷ ಜೀವಿಗಳು ವಾಸಿಸುತ್ತಿದ್ದಾರೆ ಎನ್ನುವ ವಾಸ್ತವಾಂಶ ಶತಮಾನದ ಒಳಗಾಗಿ ನಮಗೆ ಗೋಚರಿಸಲಿದೆ ~ ಎಂದು ಡಬ್ಲಿನ್‌ನಲ್ಲಿ ನಡೆದ ಯುರೋಪ್ ವಿಜ್ಞಾನ ಸಮ್ಮೇಳನದಲ್ಲಿ ಮತ್ತೊಬ್ಬ ವಿಜ್ಞಾನಿ ಜೊಸೆಲಿನ್ ಬೆಲ್ ಬರ್ನೆಲ್ ಖಚಿತ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.ಅನ್ಯಗ್ರಹಗಳ ಜೀವಿಗಳ ಮುಖಾಮುಖಿಗೆ ನಾವು ಹೇಗೆ ಸಿದ್ಧರಾಗಿದ್ದೇವೆ ಮತ್ತು ಅವುಗಳನ್ನು ನಾವು ಹೇಗೆ ಸಂಧಿಸಬೇಕು ಎಂಬ ಬಗ್ಗೆ ಯೋಚಿಸಬೇಕಿದೆ ಎಂದು ಅವರು ಹೇಳಿದ್ದಾರೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry