ಅನ್ಯ ಧರ್ಮ ಸೇರ್ಪಡೆ: ಶಾಪ ನಿಶ್ಚಿತ

7

ಅನ್ಯ ಧರ್ಮ ಸೇರ್ಪಡೆ: ಶಾಪ ನಿಶ್ಚಿತ

Published:
Updated:

ಶಿವಮೊಗ್ಗ: ನಗರದ ಮಾರ್ನಮಿಬೈಲಿನ ದಲಿತರ ಕೇರಿ (ತೆಲುಗರ ಕೇರಿ)ಯಲ್ಲಿ ಮಂಗಳವಾರ ಸಂಜೆ ಪಾದಯಾತ್ರೆ ನಡೆಸಿ, ನಂತರ ಸಮುದಾಯ ಭವನದಲ್ಲಿ ಅವರು ಮಾತನಾಡಿದರು. ನಮ್ಮ ಪರಂಪರೆ-ಸಂಸ್ಕೃತಿಯನ್ನು ಬಿಡಬಾರದು; ಹಿಂದೂ ಧರ್ಮವನ್ನು ಮರೆಯಬಾರದು. ಒಂದು ವೇಳೆ ಅನ್ಯ ಧರ್ಮಗಳತ್ತ ಹೋದರೆ ಗ್ರಾಮದೇವತೆಗಳು ಸೇರಿದಂತೆ ಹಿರಿಯರ ಮುನಿಸಿಗೆ ಗುರಿಯಾಗಬೇಕಾಗುತ್ತದೆ ಎಂದು ಸ್ವಾಮೀಜಿ ಎಚ್ಚರಿಸಿದರು.ಯಾರನ್ನೂ ನಿಕೃಷ್ಟವಾಗಿ ಕಾಣುವ ಅಧಿಕಾರ ಅಥವಾ ಹಕ್ಕು ಯಾರಿಗೂ ಇಲ್ಲ. ಹಿಂದೂ ಧರ್ಮದಲ್ಲಿ ಅಸ್ಪಶ್ಯತೆ ಇದ್ದರೆ ಅದು ಹಿಂದೂ ಧರ್ಮಕ್ಕೇ ಅವಮಾನ. ದಲಿತರಿಗಷ್ಟೇ ಅಲ್ಲ ಹಿಂದೂಗಳಲ್ಲಿಯೂ ಈ ಬಗ್ಗೆ ಅರಿವು ಮೂಡಿಸಬೇಕಾಗಿದೆ ಎಂದರು.ನಂತರ ಸಾರ್ವಜನಿಕರೊಂದಿಗೆ ಸಂವಾದ ನಡೆಸಿದ ಸ್ವಾಮೀಜಿ, ‘ಗೋಮಾಂಸ ತಿನ್ನಬೇಡಿ, ಮದ್ಯಪಾನ ಬಿಡಲು ಪ್ರಯತ್ನಪಡಿ’ ಎಂದು ಸಲಹೆ ಮಾಡಿದರು.      ‘ನಿಮಗೆ ಯಾವುದೇ ರೀತಿಯ ತೊಂದರೆಗಳಿವೆಯೇ? ಬಾವಿ, ಹೋಟೆಲ್, ದೇವಸ್ಥಾನಗಳಲ್ಲಿ ಪ್ರವೇಶ ನಿರಾಕರಿಸಲಾಗಿದೆಯೇ?’ ಎಂದು ಪ್ರಶ್ನಿಸಿದರು. ಅದಕ್ಕೆ ಕೇರಿಯ ಒಬ್ಬರು, ‘ಇಲ್ಲೊಂದು ಆರೆಸ್ಸೆಸ್ ಶಾಖೆ ಬೇಕು’ ಎಂದು ಬೇಡಿಕೆ ಇಟ್ಟರು.ಸ್ವಾಮೀಜಿ ಉತ್ತರಕ್ಕೂ ಮೊದಲು ಆರೆಸ್ಸೆಸ್ ಪ್ರಮುಖ ಸಹಸಂಚಾಲಕ ಪಟ್ಟಾಭಿರಾಮ್ ಉಪಸ್ಥಿತರಿದ್ದರು. ದಲಿತರ ಕೇರಿ ಮುಖಂಡ ಪಂಚಾಲಯ್ಯ ಸ್ವಾಗತಿಸಿದರು. ಆರೆಸ್ಸೆಸ್ ಮುಖಂಡ ಮೈಲಾರಿ ನಿರೂಪಿಸಿದರು. ಮಹಿಳಾ ಸಂಘದ ಅಧ್ಯಕ್ಷೆ ಅಕ್ಕಮಹಾದೇವಿ         ವಂದಿಸಿದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry