ಅನ್ವೇಷಣೆಯತ್ತ ಆಸಕ್ತಿ: ಕಲಾಂ ಸಲಹೆ

ಬುಧವಾರ, ಜೂಲೈ 17, 2019
27 °C

ಅನ್ವೇಷಣೆಯತ್ತ ಆಸಕ್ತಿ: ಕಲಾಂ ಸಲಹೆ

Published:
Updated:

ಬೆಂಗಳೂರು: `ಭಾರತ ದೇಶವು 2020ರ ವೇಳೆಗೆ ಶಕ್ತಿಯುತ ರಾಷ್ಟ್ರವಾಗಲಿದೆ. ಈ ಅವಕಾಶವನ್ನು ಬಳಸಿಕೊಳ್ಳಲು ವಿದ್ಯಾರ್ಥಿಗಳು ಹೆಚ್ಚು ಕ್ರಿಯಾಶೀಲರಾಗಬೇಕು' ಎಂದು ಮಾಜಿ ರಾಷ್ಟ್ರಪತಿ ಡಾ.ಎ.ಪಿ.ಜೆ ಅಬ್ದುಲ್ ಕಲಾಂ ಕರೆ ನೀಡಿದರು.ಬಿಎನ್‌ಎಂ ತಾಂತ್ರಿಕ ಸಂಸ್ಥೆಯು ಇತ್ತೀಚೆಗೆ ನಗರದಲ್ಲಿ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಭಾಗವಹಿಸಿ ಅವರು ಮಾತನಾಡಿದರು. `ವಿದ್ಯಾರ್ಥಿಗಳು ಸಂಶೋಧನೆಗೆ ಹೆಚ್ಚಿನ ಮಹತ್ವವನ್ನು ನೀಡಿ ಆಧುನಿಕ ಅನ್ವೇಷಣೆಗಳ ಕಡೆಗೆ ಹೆಜ್ಜೆ ಹಾಕಬೇಕು. ಹೆಚ್ಚು ಪರಿಶ್ರಮ ಪಡಬೇಕು. ಆಗ ದೇಶ ಆರ್ಥಿಕ ಹಾಗೂ ಸಾಮಾಜಿಕವಾಗಿ ಅಭಿವೃದ್ಧಿ ಹೊಂದುತ್ತದೆ' ಎಂದು ಅವರು ಅಭಿಪ್ರಾಯಪಟ್ಟರು.`ತಂತ್ರಜ್ಞಾನ ಜನೋಪಯೋಗಿಯಾಗುವಂತೆ ಮಾಡಬೇಕು. ಮಾಹಿತಿ ಮತ್ತು ಸಂಪರ್ಕ ತಂತ್ರಜ್ಞಾನವು ಅಭಿವೃದ್ಧಿಯಲ್ಲಿ ಪ್ರಧಾನ ಪಾತ್ರ ವಹಿಸುತ್ತದೆ. ಆರೋಗ್ಯ ಮತ್ತು ಕೃಷಿ ಕ್ಷೇತ್ರಗಳಲ್ಲಿ ನ್ಯಾನೊ ರೊಬೊಗಳು ಮುಂದೆ ಪ್ರಧಾನ ಪಾತ್ರವನ್ನು ವಹಿಸಲಿವೆ' ಎಂದು ಹೇಳಿದರು.`ಸಂಸ್ಥೆಗಳು ಹಳ್ಳಿಗಳನ್ನು ದತ್ತು ಪಡೆದು ಅವುಗಳನ್ನು `ಪುರ'ಗಳಂತೆ ಅಭಿವೃದ್ಧಿಪಡಿಸಬೇಕು. ಬಿಎನ್‌ಎಂಐಟಿ ತನ್ನದೇ ಆದ `ಬಿಎನ್‌ಎಂಐಟಿ ಪುರ'ವನ್ನು ಅಭಿವೃದ್ಧಿಪಡಿಸಬೇಕು' ಎಂದರು.`ವಿದ್ಯಾರ್ಥಿಗಳು ಕೆಲಸ ಹುಡುಕಿಕೊಂಡು ಹೋಗುವುದರ ಬದಲು ಅವರೇ ಬೇರೆಯವರಿಗೆ ಕೆಲಸ ನೀಡುವ ಮಟ್ಟಕ್ಕೆ ಬೆಳೆಯಬೇಕು. ಆಗ, ದೇಶದ ಸಂಪತ್ತು ಬೆಳೆಯುತ್ತದೆ; ಸರ್ವಾಂಗೀಣ ಅಭಿವೃದ್ಧಿಯನ್ನು ಹೊಂದುತ್ತದೆ' ಎಂದು ಅವರು ವಿದ್ಯಾರ್ಥಿಗಳಿಗೆ ಕಿವಿ ಮಾತು ಹೇಳಿದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry