ಅಪಘಾತ: ಅಪ್ಪ-ಮಗ ಸಾವು

7
ಒಂಬತ್ತು ಮಂದಿಗೆ ಗಾಯ

ಅಪಘಾತ: ಅಪ್ಪ-ಮಗ ಸಾವು

Published:
Updated:

ನಿಪ್ಪಾಣಿ: ಇಲ್ಲಿನ ರಾಷ್ಟ್ರೀಯ ಹೆದ್ದಾರಿ-4ರ ಮೇಲೆ ಚಿಕ್ಕೋಡಿ ತಾಲ್ಲೂಕಿನ ಕುರ್ಲಿಗ್ರಾಮದ ಸಮೀಪ ನಿಂತ ಲಾರಿಗೆ ಟೆಂಪೋ ಡಿಕ್ಕಿ ಹೊಡೆದ ಪರಿಣಾಮ ಇಬ್ಬರು ಮೃತಪಟ್ಟು, 9 ಮಂದಿ ಗಾಯಗೊಂಡಿರುವ ಘಟನೆ ಬುಧವಾರ ಸಂಭವಿಸಿದೆ.ಬೆಂಗಳೂರಿನ ನೆಲಮಂಗಲದಿಂದ ಶಿರಡಿಗೆ ಹೊರಟ ಟೆಂಪೋ ಟ್ರಾವಲರ್ ನಿಂತ ಲಾರಿಗೆ ಡಿಕ್ಕಿ ಹೊಡೆದ ಪರಿಣಾಮ  ರಾಮರಾವ್ ರಾಜರಾವ್(50) ಮತ್ತು ಅವರ ಮಗ ವಿನೋದ ರಾಮರಾವ್(27) ಸ್ಥಳದಲ್ಲೇ ಮತಪಟ್ಟಿದ್ದಾರೆ. ಗಂಭೀರವಾಗಿ ಗಾಯಗೊಂಡ ನಾಲ್ವರನ್ನು ಬೆಳಗಾವಿಯ ಆಸ್ಪತ್ರೆಗೆ ದಾಖಲು ಮಾಡಲಾಗಿದೆ. ಐವರು  ನಿಪ್ಪಾಣಿಯ  ಗಾಂಧೀ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.ನಿಪ್ಪಾಣಿ ಗ್ರಾಮೀಣ ಪೋಲಿಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry