ಬುಧವಾರ, ಮೇ 12, 2021
22 °C

ಅಪಘಾತ: ಆರು ಮಂದಿ ಸಾವು

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ವಿಜಾಪುರ: ನಗರದ ಹೊರವಲಯದಲ್ಲಿರುವ ಸಿಂದಗಿ ರಸ್ತೆಯಲ್ಲಿ ಐನಾಪುರ - ಮಹಾಲ ಹತ್ತಿರ ಭಾನುವಾರ ಬೆಳಗಿನ ಜಾವ ಸಂಭವಿಸಿದ ಅಪಘಾತದಲ್ಲಿ ಒಂದೇ ಕುಟುಂಬದ ಐವರು ಸೇರಿ 6 ಜನರು ಸ್ಥಳದಲ್ಲೇ ಮೃತಪಟ್ಟು, ಐವರು ಗಂಭೀರವಾಗಿ ಗಾಯ

ಗೊಂಡಿದ್ದಾರೆ.ಗುಲ್ಬರ್ಗದಿಂದ ಬರುತ್ತಿದ್ದ ಪ್ರಯಾಣಿಕರ ಕ್ರೂಜರ್ ಜೀಪ್ ಮತ್ತು ವಿಜಾಪುರದಿಂದ ಗುಲ್ಬರ್ಗ ಕಡೆಗೆ ಹೊರಟಿದ್ದ ಟ್ರಕ್ ನಡುವೆ ಡಿಕ್ಕಿಯಾಗಿ ಕ್ರೂಜರ್‌ನಲ್ಲಿದ್ದವರು ಸಾವಿಗೀಡಾಗಿದ್ದಾರೆ.ಗುಲ್ಬರ್ಗದ ಬಸವ ನಗರ ನಿವಾಸಿಗಳಾದ ಸಿದ್ರಾಮ ನಾಗಪ್ಪ ಬನಪಟ್ಟಿ (60), ರತನ್‌ಕುಮಾರ ಸಿದ್ರಾಮ ಬನಪಟ್ಟಿ(25), ಶಾಂತಕುಮಾರ ಶರಣು ಬನಪಟ್ಟಿ(4), ಗಂಗಾಪುರದ ಪಾರ್ವತಿ ಶಂಕರ ಬನಪಟ್ಟಿ(45) ಆಳಂದ ತಾಲ್ಲೂಕಿನ ಮಾದನಹಿಪ್ಪರಗಾದ ಶಾಂತಾಬಾಯಿ ನಿಂಗಪ್ಪ ಧೋತ್ರೆ(65) ಹಾಗೂ ಪುತಳಾಬಾಯಿ ರಾಜು ಸಾಳುಂಕೆ (60) ಮೃತಪಟ್ಟಿದ್ದಾರೆ.ಮಹಾದೇವಿ ಶರಣು ಬನಪಟ್ಟಿ, ರೇಣುಕಾ ಸಿದ್ರಾಮ ಬನಪಟ್ಟಿ, ನಾಗರಾಜ ಆನಂದ ಸಾಳುಂಕೆ, ಶರಣು ಸಿದ್ರಾಮ ಬನಪಟ್ಟಿ ಹಾಗೂ ಕ್ರೂಜರ್ ಚಾಲಕ ಆನಂದ ನೀಲಕಂಠ ಜಮಾದಾರ (25) ಗಂಭೀರವಾಗಿ ಗಾಯಗೊಂಡಿದ್ದಾರೆ. ಗಾಯಾಳುಗಳಲ್ಲಿ ಇಬ್ಬರನ್ನು ಇಲ್ಲಿಯ ಅಲ್‌ಅಮೀನ್ ಆಸ್ಪತ್ರೆಗೆ ಮತ್ತು ಮೂವರನ್ನು ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ.ಕಾರಹುಣ್ಣಿಮೆ ನಿಮಿತ್ತ ಸವದತ್ತಿಯ ಯಲ್ಲಮ್ಮ ದೇವಿಯ ದರ್ಶನಕ್ಕಾಗಿ ಇವರೆಲ್ಲರೂ ಶನಿವಾರ ಮಧ್ಯರಾತ್ರಿ 12 ಗಂಟೆ ಸುಮಾರಿಗೆ ಗುಲ್ಬರ್ಗದಿಂದ ಪ್ರಯಾಣ ಆರಂಭಿಸಿದ್ದರು. ವಿಜಾಪುರ ಇನ್ನೂ ಏಳೆಂಟು ಕಿ.ಮೀ. ದೂರ ಇರುವಾಗಲೇ ಈ ಅಪಘಾತ ಸಂಭವಿಸಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.