ಅಪಘಾತ: ಎಸ್‌ಬಿಐ ವ್ಯವಸ್ಥಾಪಕ ಸಾವು

7

ಅಪಘಾತ: ಎಸ್‌ಬಿಐ ವ್ಯವಸ್ಥಾಪಕ ಸಾವು

Published:
Updated:

ಹೊಸಕೋಟೆ: ಭಾರತೀಯ ಸ್ಟೇಟ್ ಬ್ಯಾಂಕ್‌ನ ಕಾಡುಗೋಡಿ ಶಾಖೆ ವ್ಯವಸ್ಥಾಪಕ ಹೊಸಕೋಟೆ ಸಿ.ಚಂದ್ರಮೋಹನ್ (56) ಅವರು ಭಟ್ಟರಹಳ್ಳಿ ಬಳಿ ನಡೆದ ರಸ್ತೆ ಅಪಘಾತದಲ್ಲಿ ಮೃತಪಟ್ಟಿದ್ದಾರೆ.ಬ್ಯಾಂಕ್‌ನ ಕರ್ತವ್ಯ ಮುಗಿಸಿಕೊಂಡು ಇಂದಿರಾನಗರದಲ್ಲಿನ ತಮ್ಮ ಮನೆಗೆ ಬೈಕ್‌ನಲ್ಲಿ ಹೋಗುತ್ತಿದ್ದಾಗ ವೇಗ ಬಂದ ಸರಕು ಸಾಗಣೆ ಆಟೋ ಡಿಕ್ಕಿ ಹೊಡೆಯಿತು. ಆಗ ಅವರ ತಲೆಗೆ ತೀವ್ರ ಪೆಟ್ಟಾಗಿ ಸ್ಥಳದಲ್ಲೇ ಮೃತಪಟ್ಟರು.

 

ಹಿಂಬದಿ ಕುಳಿತಿದ್ದ ಬ್ಯಾಂಕ್‌ನ ಸಹದ್ಯೋಗಿ ಸಿಬ್ಬಂದಿ ಬಾಬುರಾವ್ ಅವರಾಧೆ ಅವರಿಗೆ ಸಣ್ಣಪುಟ್ಟ ಗಾಯಗಳಾಗಿವೆ. ಅಪಘಾತದ ನಂತರ ಆಟೋ ನಿಲ್ಲಿಸದೆ ಪರಾರಿಯಾಗಿದೆ. ಆವಲಹಳ್ಳಿ ಪೊಲೀಸರು ಪ್ರಕರಣ ದಾಖಲಿಸಿದ್ದಾರೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry