ಅಪಘಾತ: ಐಶ್ವರ್ಯ ರೈ ಚಿಕ್ಕಪ್ಪ ಸಾವು, ನಾಲ್ವರಿಗೆ ಗಾಯ

6

ಅಪಘಾತ: ಐಶ್ವರ್ಯ ರೈ ಚಿಕ್ಕಪ್ಪ ಸಾವು, ನಾಲ್ವರಿಗೆ ಗಾಯ

Published:
Updated:

ಅಂಕೋಲಾ (ಉ.ಕ. ಜಿಲ್ಲೆ): ಕಾರು ಮತ್ತು ಟ್ಯಾಂಕರ್ ನಡುವೆ ಸಂಭವಿಸಿದ ಅಪಘಾತದಲ್ಲಿ  ಕಾರಿನಲ್ಲಿದ್ದ ಒಬ್ಬರು ಸತ್ತು, ಚಾಲಕ ಸೇರಿದಂತೆ ನಾಲ್ವರು ಗಾಯಗೊಂಡ ಘಟನೆ ತಾಲ್ಲೂಕಿನ ಕಂಚಿನಬಾಗಿಲು ಸಮೀಪ ಗುರುವಾರ ನಡೆದಿದೆ.ಮೃತರನ್ನು ಬಾಲಿವುಡ್ ತಾರೆ ಐಶ್ವರ್ಯ ರೈ ತಾಯಿಯ ತಂಗಿ ಪತಿ, ಉಡುಪಿ ಜಿಲ್ಲೆಯ ಕಾರ್ಕಳ ಸಮೀಪ ಬೈಲೂರು ಗ್ರಾಮದ ರವಿ ರಾಜು ಶೆಟ್ಟಿ (60) ಎಂದು ಗುರುತಿಸಲಾಗಿದೆ.ಗಾಯಗೊಂಡ ಜಯಾ ಶೆಟ್ಟಿ, ಕನಕ ಶೆಟ್ಟಿ, ಸುಲತಾ ಶೆಟ್ಟಿ ಮತ್ತು ಚಾಲಕ ರೆಹಮತ್‌ಉಲ್ಲಾ ಫಕೀರಸಾಬ್ ಅವರನ್ನು ಹೆಚ್ಚಿನ ಚಿಕಿತ್ಸೆಗಾಗಿ ಮಣಿಪಾಲದ ಕೆಎಂಸಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಕಾರಿನಲ್ಲಿದ್ದವರು ಪುಣೆಗೆ ತೆರಳುತ್ತಿದ್ದರು. ಅಂಕೋಲಾ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry