ಶನಿವಾರ, ಏಪ್ರಿಲ್ 17, 2021
30 °C

ಅಪಘಾತ: ಒಂದೇ ಕುಟುಂಬದ ಐವರ ಸಾವು

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಮಂಡ್ಯ: ನಗರ ಹಾಗೂ ನಗರದ ಹೊರ ವಲಯದಲ್ಲಿ ಮಂಗಳವಾರ ಮಧ್ಯರಾತ್ರಿ  ನಡೆದ ಪ್ರತ್ಯೇಕ ಅಪಘಾತ ಪ್ರಕರಣಗಳಲ್ಲಿ ಒಟ್ಟು ಏಳು ಜನರು ಸಾವನ್ನಪ್ಪಿದ್ದಾರೆ.



ನಗರದ ಸರ್ಕಾರಿ ಪದವಿಪೂರ್ವ ಕಾಲೇಜಿನ ಬಳಿ ಮಂಗಳವಾರ ಮಧ್ಯರಾತ್ರಿ ಇನೋವಾ ಕಾರು ಮರಕ್ಕೆ ಡಿಕ್ಕಿ ಹೊಡೆದ ಪರಿಣಾಮ ಒಂದೇ ಕುಟುಂಬದ ಐವರು ಸಾವನ್ನಪ್ಪಿದ್ದಾರೆ. ಮೈಸೂರು- ಬೆಂಗಳೂರು ರಾಜ್ಯ ಹೆದ್ದಾರಿಯಲ್ಲಿ ಅಪಘಾತ ನಡೆದಿದೆ. ನಾಲ್ವರು ಗಾಯಗೊಂಡಿದ್ದಾರೆ.



ಕೇರಳದ ನೀಲಂಪುರ ತಾಲ್ಲೂಕಿನ ಎಡಕರ್ ನಿವಾಸಿ ಅಬ್ಬಾಸ್ (44), ಅವರ ತಾಯಿ ಆಯೇಷಾ (60), ಪತ್ನಿ ಬೇಬಿ ಷರೀಜಾ (38), ಪುತ್ರ ಜಬೀರ್ (18) ಹಾಗೂ ಸಹೋದರ ಜಾಫರ್ (25) ಸಾವನ್ನಪ್ಪಿದ್ದಾರೆ. ಇವರಲ್ಲಿ ಬೇಬಿ ಷರೀಜಾ, ಜಬೀರ್ ಹಾಗೂ ಜಾಫರ್ ಸ್ಥಳದಲ್ಲಿಯೇ ಸಾವನ್ನಪ್ಪಿದ್ದರೆ, ಆಯೇಷಾ ಹಾಗೂ ಅಬ್ಬಾಸ್ ಬೆಂಗಳೂರಿನ ನಿಮ್ಹಾನ್ಸ್ ಆಸ್ಪತ್ರೆಯಲ್ಲಿ ಮೃತರಾದರು.



ಗಾಯಗೊಂಡಿರುವ ಅಮನ್ ಬೆಂಗಳೂರಿನ ನಿಮ್ಹಾನ್ಸ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರೆ, ಆಸೀಫ್, ನೈನಾ, ಅಖಿಲ್ ಅವರನ್ನು ಚಿಕಿತ್ಸೆಗಾಗಿ ಮೈಸೂರಿನ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ.



ಡಿಕ್ಕಿ- ಇಬ್ಬರು ಸಾವು: ಇನ್ನೊಂದು ಪ್ರಕರಣದಲ್ಲಿ ನಗರದ ಹೊರವಲಯದ ಗ್ರೀನ್ ಪ್ಯಾಲೇಸ್ ಬಳಿ ಟಾಟಾ ಗೂಡ್ಸ್ ವಾಹನ ಹಾಗೂ ಲಾರಿ ನಡುವೆ ಡಿಕ್ಕಿ ಸಂಭವಿಸಿ  ಇಬ್ಬರು ಸಾವನ್ನಪ್ಪಿದ್ದಾರೆ.



ಮದ್ದೂರು ತಾಲ್ಲೂಕಿನ ಉಪ್ಪಾರದೊಡ್ಡಿಯ ಸಂತೋಷ್ (26)  ಹಾಗೂ ರಾಜೇಶ್ (28) ಎಂಬುವವರೇ ಮೃತರು. ಇವರು ಟಾಟಾ ಗೂಡ್ಸ್ ವಾಹನದಲ್ಲಿ ಎಳನೀರು ತರಲು ಕೆ.ಆರ್. ಪೇಟೆಗೆ ಹೊರಟಿದ್ದರು.

 

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.