ಅಪಘಾತ ಕಾರಿನಿಂದ ಗಾಂಜಾ ಪತ್ತೆ

7

ಅಪಘಾತ ಕಾರಿನಿಂದ ಗಾಂಜಾ ಪತ್ತೆ

Published:
Updated:

ಬೆಂಗಳೂರು: ಹೊಸಕೋಟೆ ಸಮೀಪ ಸೋಮವಾರ ಸಂಭವಿಸಿದ ರಸ್ತೆ ಅಪಘಾತದ ತನಿಖೆ ನಡೆಯುತ್ತಿದ್ದು ವಿದ್ಯಾರ್ಥಿಗಳ ಕಾರಿನಲ್ಲಿ ಗಾಂಜಾ ಪತ್ತೆಯಾಗಿದೆ ಎಂದು ಪೊಲೀಸರು ತಿಳಿಸಿದರು.`ಯುವಕರು ಮಾದಕ ವಸ್ತು ಸೇವನೆ ಮಾಡಿದ್ದರೆಂದು ಖಚಿತಾವಾಗಿ ಹೇಳಲು ಸಾಧ್ಯವಿಲ್ಲ. ಮರಣೋತ್ತರ ಪರೀಕ್ಷೆ ಹಾಗೂ ಪ್ರಯೋಗಾಲಯದ ವರದಿಗಳನ್ನು ಪರಿಶೀಲಿಸಿ ಕ್ರಮ ಕೈಗೊಳ್ಳಲಾಗುತ್ತದೆ. ಯುವಕರು ಹೆದ್ದಾರಿ ರಸ್ತೆಗಳಲ್ಲಿ ಅಪಘಾತಕ್ಕೊಳಗಾಗುವ ಸಾಕಷ್ಟು  ಪ್ರಕರಣಗಳನ್ನು ನಾನು ನೋಡಿದ್ದೇನೆ. ಹೆಚ್ಚಾಗಿ ಶ್ರೀಮಂತರ ಮಕ್ಕಳು ಇಂತಹ ಘಟನೆಗಳಲ್ಲಿ ಭಾಗಿಯಾಗುತ್ತಾರೆ~ ಎಂದು ನಗರ ಜಿಲ್ಲಾ ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ಆರ್. ಕುಮಾರಸ್ವಾಮಿ ತಿಳಿಸಿದರು.ಕೆಟ್ಟ ನಿಂತಿದ್ದ ಲಾರಿಗೆ ಹಿಂದಿನಿಂದ ಡಿಕ್ಕಿ ಹೊಡೆದಿದ್ದಾರೆ ಎಂದು ಪ್ರಾಥಮಿಕ ವರದಿಯಿಂದ ತಿಳಿದು ಬಂದಿದೆ. ಆದರೆ ಲಾರಿ ಚಾಲಕ ಕಾರನ್ನು ನಿಲ್ಲಿಸುವಂತೆ ಸೂಚಿಸಿದ್ದಾನೆ ಆದರೆ ವೇಗದ ಚಾಲನೆಯಿಂದ  ನಿಯಂತ್ರಣ ಕಳೆದುಕೊಂಡು ಈ ದುರ್ಘಟನೆ ನಡೆದಿದೆ. ದಾಖಲೆಗಳನ್ನು ಪರಿಶೀಲಿಸಿದಾಗ ಕಾರು ಚಾಲಕನ ಬಳಿ ವಾಹನ ಪರವಾನಿಗೆ ಇತ್ತು ಎಂದು ಮಾಹಿತಿ ನೀಡಿದರು.ಘಟನೆಯಲ್ಲಿ ಬದುಕುಳಿದ ರಾಹುಲ್ ಪೀಟರ್ ಸ್ಥಿತಿ ಇನ್ನೂ ಗಂಭೀರವಾಗಿದೆ. ಅವರ ತಂದೆ ಪೀಟರ್ ಮಾತನಾಡಿ ` ನಾನು ಏನನ್ನು ಹೇಳುವ ಸ್ಥಿತಿಯಲ್ಲಿ ಇಲ್ಲ. ಚೇತರಿಸಕೊಳ್ಳಲಿದ್ದಾನೆ ಎಂದು ವೈದ್ಯರು ಹೇಳಿದ್ದಾರೆ ಅದೇ ಭರವಸೆಯಲ್ಲಿ ಕಾಯುತ್ತಿದ್ದೇವೆ. ಅವನಿಗೆ ಇನ್ನೂ ಪ್ರಜ್ಞೆ ಬಂದಿಲ್ಲ~ ಎಂದರು.ಘಟನೆಯಲ್ಲಿ ಸಾವನ್ನಪ್ಪಿದ ಕಿರಣ್ ಪ್ರತಿಭಾವಂತ ವಿದ್ಯಾರ್ಥಿಯಾಗಿದ್ದ ಎಂದು ಕಾಲೇಜಿನ ಉಪನ್ಯಾಸಕರು ಹಾಗೂ ಅವನ ಸ್ನೇಹಿತರು ಹೇಳಿದರು. ಕ್ರೈಸ್ಟ್ ಕಾಲೇಜಿನ ಫಾದರ್ ಬಿಜು ಅವರು ಮಾತನಾಡಿ `ಕಿರಣ್ ಸಾವು ನಂಬಲು ಸಾಧ್ಯವಾಗುತ್ತಿಲ್ಲ. ವಾಣಿಜ್ಯ ವಿದ್ಯಾರ್ಥಿಯಾಗಿದ್ದ ಅವನಿಗೆ ಒಳ್ಳೆಯ ಭವಿಷ್ಯವಿತ್ತು. ಕಿರಣ್ ಆತ್ಮಕ್ಕೆ ಶಾಂತಿ ಕೋರಿ ಶ್ರದ್ದಾಂಜಲಿ ಸಭೆ ನಡೆಸಲಾಯಿತು~ ಎಂದು ತಿಳಿಸಿದರು.`ಕಿರಣ್ ಜೊತೆ ಅಮೂಲ್ಯವಾದ ಕ್ಷಣಗಳನ್ನು ಕಳೆದಿದ್ದೇನೆ. ಅವನ ಭವಿಷ್ಯದ ಬಗ್ಗೆ ಹಲವಾರು ಕನಸುಗಳನ್ನು ಕಟ್ಟಿಕೊಂಡಿದ್ದ, ಈ ರೀತಿಯಾಗುತ್ತದೆ ಎಂದು ಊಹಿಸಿರಲಿಲ್ಲ~ ಎಂದು ಕಿರಣ್ ಸ್ನೇಹಿತರಾದ ಅದಿತಿ ಬಾವುಕರಾದರು.ಅನುಮತಿ ಪಡೆದಿದ್ದರು:  ಮನೆಯಿಂದ ಹೊರಟ ಎಲ್ಲಾ ವಿದ್ಯಾರ್ಥಿಗಳು ಪೋಷಕರ ಅನುಮತಿ ಪಡೆದಿದ್ದಾರೆ. ಘಟನೆ ನಮಗೆ ಆಘಾತ ತಂದಿದೆ ಆದರೆ ಕಿರಣ್ ಸೇರಿದಂತೆ ಅವನ ಸ್ನೇಹಿತರು ಕಾರಿನಲ್ಲಿ ಹೋಗುವ ಮೊದಲು ಪೋಷಕರ ಬಳಿ ಅನುಮತಿ ಪಡೆದಿದ್ದರು ಎಂದು ಕಿರಣ್ ಸಂಬಂದಿಕರು ತಿಳಿಸಿದರು.ಕಾರು ಚಾಲನೆ ಮಾಡುತ್ತಿದ್ದ ಅಸ್ಲಾನ್ ಬಳಿ ಪರವಾನಿಗೆ ಇದೆ. ಲಾರಿ ಚಾಲಕ ರಸ್ತೆ ನಿಯಮಗಳನ್ನು ಪಾಲಿಸದೇ ವಾಹನ ನಿಲುಗಡೆ ಮಾಡಿದ್ದು ಘಟನೆಗೆ ಕಾರಣ ಎಂದು ದೂರಿದರು`ನಮ್ಮ ಕುಟುಂಬದಲ್ಲಿ ಕಿರಣ್ ಎಲ್ಲರ ಪ್ರೀತಿ ಸಂಪಾದಿಸಿದ್ದ. ಅವನು ಫುಟ್‌ಬಾಲ್ ಆಟವನ್ನು ಪ್ರೀತಿಸುತ್ತಿದ್ದ ಹಾಗೂ ವಿದ್ಯಾಬ್ಯಾಸದಲ್ಲೂ ಹಿಂದೆ ಬಿದ್ದವನಲ್ಲ. ಅವನು ಎಂಜಿನಿಯರ್ ಆಗಬೇಕೆಂಬ ಕನಸು ಕಂಡಿದ್ದ~ ಎಂದು ಕಿರಣ್ ಸಂಬಂಧಿಕರು ತಿಳಿಸಿದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry