ಬುಧವಾರ, ಜನವರಿ 29, 2020
28 °C

ಅಪಘಾತ: ಕಾರಿನ ಚಾಲಕನಿಂದ ಹಲ್ಲೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು:  ಬೈಕ್ ಹಾಗೂ ಕಾರಿನ ನಡುವೆ ಡಿಕ್ಕಿ ಸಂಭವಿಸಿದ್ದರಿಂದ ಕಾರಿನ ಚಾಲಕ ಹಾಗೂ ಆತನ ಸ್ನೇಹಿತರು, ಬೈಕ್‌ನಲ್ಲಿದ್ದ ಇಬ್ಬರಿಗೆ ಚಾಕುವಿನಿಂದ ಇರಿದ ಘಟನೆ ತಿಲಕ್‌ನಗರ ವ್ಯಾಪ್ತಿಯ ಅರಸು ಕಾಲೋನಿಯಲ್ಲಿ ರಾತ್ರಿ ನಡೆದಿದೆ.ಅರಸು ಕಾಲೋನಿಯ ರಘು ಹಾಗೂ ಕಾರ್ಪೋರೇಶನ್ ಕಾಲೋನಿಯ ಮಂಜುನಾಥ್ ಅವರು ಹಲ್ಲೆಗೊಳಗಾದವರು.  ಈ ಇಬ್ಬರು ಶುಕ್ರವಾರ ಬೈಕ್‌ನಲ್ಲಿ ಹೋಗುತ್ತಿದ್ದರು. ಹಿಂದಿನಿಂದ ಬಂದ ಕಾರು ಇವರ ಬೈಕ್‌ಗೆ ಡಿಕ್ಕಿ ಹೊಡೆದಿದೆ. ಘಟನೆಯಿಂದ ಚಾಲಕರ ನಡುವೆ ಮಾತಿನ ಚಕಮಕಿ ನಡೆದಿದ್ದು, ಕಾರಿನಲ್ಲಿದ್ದ ನಾಲ್ಕೈದು ಜನ ರಘು ಹಾಗೂ ಮಂಜುನಾಥ್ ಅವರಿಗೆ ಚಾಕುವಿನಿಂದ ಇರಿದು ಪರಾರಿಯಾಗಿದ್ದಾರೆ ಎಂದು ಪೊಲೀಸರು ತಿಳಿಸಿದರು.

ಪ್ರತಿಕ್ರಿಯಿಸಿ (+)