ಅಪಘಾತ: ಖಾಸಗಿ ಕಂಪೆನಿ ಉದ್ಯೋಗಿ ಸಾವು

7

ಅಪಘಾತ: ಖಾಸಗಿ ಕಂಪೆನಿ ಉದ್ಯೋಗಿ ಸಾವು

Published:
Updated:

ಬೆಂಗಳೂರು: ತುಮಕೂರು ರಸ್ತೆಯ ಎಂಟನೇ ಮೈಲಿ ಬಳಿ ಬುಧವಾರ ಬೈಕ್‌ಗಳ ನಡುವೆ ಸಂಭವಿಸಿದ ಅಪಘಾತದಲ್ಲಿ ಖಾಸಗಿ ಕಂಪೆನಿ­ಯೊಂದರ ಉದ್ಯೋಗಿ ಮೃತಪಟ್ಟಿದ್ದು, ಮತ್ತಿಬ್ಬರು ಗಾಯಗೊಂಡಿದ್ದಾರೆ.ಬ್ಯಾಡರಹಳ್ಳಿ ಸಮೀಪದ ಬಿಇಎಲ್‌ ಲೇಔಟ್‌ ನಿವಾಸಿ ರಮೇಶ್ (23) ಮೃತ­ಪಟ್ಟವರು. ತಮಿಳುನಾಡು ಮೂಲದ ರಮೇಶ್, ಪೀಣ್ಯ ಎರಡನೇ ಹಂತದಲ್ಲಿರುವ ಆದರ್ಶ ಕಂಪೆನಿಯಲ್ಲಿ ಉದ್ಯೋಗಿಯಾಗಿದ್ದರು. ಸ್ನೇಹಿತ ಗಜೇಂದ್ರ ಅವರ ಜತೆ ಬೆಂಗಳೂರು ಅಂತರರಾಷ್ಟ್ರೀಯ ವಸ್ತು ಪ್ರದರ್ಶನ ಆವರಣದಲ್ಲಿ ನಡೆಯುತ್ತಿರುವ ಮೇಳಕ್ಕೆ ಬೈಕ್‌ನಲ್ಲಿ ಹೋಗುತ್ತಿದ್ದಾಗ ಈ ದುರ್ಘಟನೆ ನಡೆದಿದೆ ಎಂದು ಪೊಲೀಸರು ಹೇಳಿದ್ದಾರೆ.ಪೀಣ್ಯ ಎಂಟನೇ ಮೈಲಿ ಬಳಿ ಎದುರಿನಿಂದ ಬೈಕ್‌ ಓಡಿಸಿಕೊಂಡು ಬಂದ ಉಮೇಶ್,  ರಮೇಶ್‌ರ ಬೈಕ್‌ಗೆ ವಾಹನ ಗುದ್ದಿಸಿದ್ದಾರೆ. ಈ ವೇಳೆ ರಸ್ತೆ ವಿಭಜಕದ ಮೇಲೆ ಬಿದ್ದ ರಮೇಶ್‌ರ ತಲೆ ಹಾಗೂ ಎದೆ ಭಾಗಕ್ಕೆ ತೀವ್ರ ಸ್ವರೂಪದ ಪೆಟ್ಟು ಬಿದ್ದಿದೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry