ಶನಿವಾರ, ಆಗಸ್ಟ್ 24, 2019
28 °C

ಅಪಘಾತ: ದೀಪಕ ಹೊನ್ನಾವರ ಸಾವು

Published:
Updated:
ಅಪಘಾತ: ದೀಪಕ ಹೊನ್ನಾವರ ಸಾವು

ಅಂಕೋಲಾ (ಉ.ಕ.ಜಿಲ್ಲೆ): ಇಲ್ಲಿಗೆ ಸಮೀಪದ ಬಳಲೆ ಬಳಿ ಹೆದ್ದಾರಿಯಲ್ಲಿ ಭಾನುವಾರ ಸಂಭವಿಸಿದ ರಸ್ತೆ ಅಪಘಾತದಲ್ಲಿ ಕಾಂಗ್ರೆಸ್ ಮುಖಂಡ ದೀಪಕ ರಾಮದಾಸ ಹೊನ್ನಾವರ (50) ಮೃತಪಟ್ಟಿದ್ದಾರೆ.ಕಾರಿನಲ್ಲಿದ್ದ ಶಿರಸಿ ತಾಲ್ಲೂಕಿನ ಜಾನ್ಮನೆ ಆರ್‌ಎಫ್‌ಒ ಹಿಮವತಿ ಭಟ್ಟ ಗಾಯಗೊಂಡಿದ್ದಾರೆ.ಶಿರಸಿಯಿಂದ ಕಾರವಾರಕ್ಕೆ ಕಾರಿನಲ್ಲಿ ಹೋಗುತ್ತಿದ್ದಾಗ ರಸ್ತೆ ತಿರುವಿನಲ್ಲಿ ಬಂಡೆಗಲ್ಲಿಗೆ ಕಾರ್ ಅಪ್ಪಳಿಸಿದ್ದರಿಂದ ಕಂದಕಕ್ಕೆ ಕಾರ್ ಉರುಳಿ ದೀಪಕ ಸ್ಥಳದಲ್ಲಿಯೇ ಸಾವಿಗೀಡಾಗಿದ್ದಾರೆ. ಳೆದ ವಿಧಾನಸಭಾ ಚುನಾವಣೆಯಲ್ಲಿ ಶಿರಸಿ-ಸಿದ್ದಾಪುರ ಕ್ಷೇತ್ರದಿಂದ ಕಾಂಗ್ರೆಸ್ ಅಭ್ಯರ್ಥಿಯಾಗಿ ಸ್ಪರ್ಧಿಸಿದ್ದರು.

Post Comments (+)