ಅಪಘಾತ: ನ್ಯಾಯಮೂರ್ತಿ ಸಾವು

7

ಅಪಘಾತ: ನ್ಯಾಯಮೂರ್ತಿ ಸಾವು

Published:
Updated:
ಅಪಘಾತ: ನ್ಯಾಯಮೂರ್ತಿ ಸಾವು

ಬೆಂಗಳೂರು: ಆಂಧ್ರಪ್ರದೇಶದ ಅನಂತಪುರ ಸಮೀಪ ಶನಿವಾರ ಸಂಭವಿಸಿದ ರಸ್ತೆ ಅಪಘಾತದಲ್ಲಿ ರಾಜ್ಯ ಹೈಕೋರ್ಟ್‌ನ ಹೆಚ್ಚುವರಿ ನ್ಯಾಯಮೂರ್ತಿ ಗೋವಿಂದರಾಜುಲು (56) ಅವರು ಮೃತಪಟ್ಟಿದ್ದಾರೆ.ಘಟನೆಯಲ್ಲಿ ಪತ್ನಿ ರಾಜಲಕ್ಷೀ, ಮಕ್ಕಳಾದ ಅಭಿ, ಅಖಿಲ್ ಹಾಗೂ ಕಾರು ಚಾಲಕ ಗಾಯಗೊಂಡಿದ್ದು, ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. ರಾಜಲಕ್ಷ್ಮೀ ಅವರ ಸ್ಥಿತಿ ಗಂಭೀರವಾಗಿದೆ.ಮೂಲತಃ ಬಳ್ಳಾರಿಯ ಗೋವಿಂದರಾಜುಲು ಅವರು, ಕುಟುಂಬ ಸದಸ್ಯರೊಂದಿಗೆ ಬೆಂಗಳೂರಿನ ಜಯನಗರ ನಾಲ್ಕನೇ ಬ್ಲಾಕ್‌ನಲ್ಲಿ ವಾಸಿಸುತ್ತಿದ್ದರು. `ಕಡಪದಲ್ಲಿರುವ ರಾಜಲಕ್ಷ್ಮೀ ಅವರ ತವರು ಮನೆಗೆ ಹೋಗಲು ಬೆಳಿಗ್ಗೆ 6.30ಕ್ಕೆ ಮನೆಯಿಂದ ಕಾರಿನಲ್ಲಿ ಹೊರಟರು. 11.30ಕ್ಕೆ ಅಪಘಾತ ಸಂಭವಿಸಿರುವ ಬಗ್ಗೆ ಮಾಹಿತಿ ಬಂತು~ ಎಂದು ಅವರ ಮನೆಯ ಭದ್ರತಾ ಸಿಬ್ಬಂದಿ ತಿಳಿಸಿದರು.ಸಂತಾಪ:  `ರಾಜ್ಯ ಹೈಕೋರ್ಟ್‌ನ ಹೆಚ್ಚುವರಿ ನ್ಯಾಯಮೂರ್ತಿ ಗೋವಿಂದರಾಜುಲು ಉತ್ತಮವಾಗಿ ಕಾರ್ಯ ನಿರ್ವಹಿಸುತ್ತಿದ್ದರು. ಅವರ ಸಾವು ದುರದೃಷ್ಟಕರ~ ಎಂದು ಮುಖ್ಯಮಂತ್ರಿ ಡಿ.ವಿ.ಸದಾನಂದಗೌಡ ಅವರು ಗೋವಿಂದರಾಜುಲು ಅವರ ನಿಧನಕ್ಕೆ ಸಂತಾಪ ಸೂಚಿಸಿದ್ದಾರೆ.

 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry