ಅಪಘಾತ ಬಾಲಕಿ ಸಾವು

7

ಅಪಘಾತ ಬಾಲಕಿ ಸಾವು

Published:
Updated:

 ನರಸಿಂಹರಾಜಪುರ: ತಾಲೂಕಿನ ವರಕಟ್ಟೆ ಗ್ರಾಮದ ವ್ಯಾಪ್ತಿಯಲ್ಲಿ ಬುಧವಾರ ಬೆಳಿಗ್ಗೆ ನಡೆದ ಸರಕು ಸಾಗಣೆ ಆಟೋ ಹಾಗೂ ಪ್ರಯಾಣಿಕರ ಆಟೋ ರಿಕ್ಷಾ ಮುಖಾಮುಖಿ ಡಿಕ್ಕಿ ಹೊಡೆದ ಪರಿಣಾಮವಾಗಿ ಬಾಲಕಿಯೊರ್ವಳು ಸ್ಥಳದಲ್ಲಿಯೇ ಮೃತಳಾದ ಘಟನೆ ನಡೆದಿದೆ.ವರಕಟ್ಟೆ ಕಾಲೊನಿ ನಿವಾಸಿ ರೇಷ್ಮಾ (15) ಮೃತಪಟ್ಟ ದುರ್ದೈವಿ. ಇವರು ಮೋರಿ ಮಠ ಗ್ರಾಮಕ್ಕೆ ಕೂಲಿ ಕೆಲಸಕ್ಕೆ ಆಟೋ ರಿಕ್ಷಾದಲ್ಲಿ ಹೋಗುತ್ತಿದ್ದಾಗ ಎದುರುಗಡೆಯಿಂದ ಬಂದ ಸರಕು ಸಾಗಾಣಿಕೆ ಆಟೋ ಡಿಕ್ಕಿ ಹೊಡೆಯಿತು. ರೇಷ್ಮಾ ಸ್ಥಳದಲ್ಲಿಯೇ ಮೃತರಾದರೆ, ರುಕ್ಮಿಣಿ ಎಂಬುವವರಿಗೆ ತರಚಿದ ಗಾಯಗಳಾದವು.

ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry