ಅಪಘಾತ: ಬೈಕ್ ಸವಾರ ಸಾವು

7

ಅಪಘಾತ: ಬೈಕ್ ಸವಾರ ಸಾವು

Published:
Updated:

ಕನಕಪುರ: ದ್ವಿಚಕ್ರ ವಾಹನದಲ್ಲಿ ಬರುತ್ತಿದ್ದ ಬೈಕ್ ಸವಾರರು ಮೈಲಿಗಲ್ಲಿಗೆ ಡಿಕ್ಕಿಹೊಡೆದ ಪರಿಣಾಮ ಒಬ್ಬರು ಸಾವನಪ್ಪಿ ಮತ್ತೊಬ್ಬರು ಗಂಭೀರವಾಗಿ ಗಾಯಗೊಂಡ ಘಟನೆ ಗ್ರಾಮಾಂತರ ಪೋಲಿಸ್ ಠಾಣೆಯ ಗಾಣಾಳು ಬಳಿ ಬುಧವಾರ ನಡೆದಿದೆ.ರವಿಶಂಕರ್ (22) ಮತ್ತು ಹೇಶ (22) ಎಂಬವರು ತಮ್ಮ ದ್ವಿಚಕ್ರ ವಾಹನದಲ್ಲಿ ರಾಮನಗರದಿಂದ ಕನಕಪುರದ ಕಡೆಗೆ ಬರುತ್ತಿದ್ದರು. ಈ ವೇಳೆ ಗಾಣಾಳು ಮತ್ತು ಅಳ್ಳಿಮಾರನ ಹಳ್ಳಿಯ ಕುಂತಿಕಲ್ ಗೇಟ್ ಬಳಿ ಆಯತಪ್ಪಿ ರಸ್ತೆಬದಿಯ ಮೈಲಿಗಲ್ಲಿಗೆ ಡಿಕ್ಕಿಹೊಡೆದಿದ್ದಾರೆ.ಅಪಘಾತದಲ್ಲಿ ತೀವ್ರಪೆಟ್ಟಾಗಿ ಅತಿಯಾದ ರಕ್ತಸ್ರಾವಕ್ಕೆ ಒಳಗಾದ ರವಿಶಂಕರ್ ಅವರನ್ನು ಬೆಂಗಳೂರಿನ ನಿಮ್ಹೋನ್ಸ್‌ಗೆ ಸಾಗಿಸುವಾಗ ಮಾರ್ಗಮಧ್ಯದಲ್ಲಿ ಅವರು ಸಾವನ್ನಪ್ಪಿದ್ದಾರೆ. ಮಾದೇಶ್ ಸಹಾ ಗಂಭೀರವಾಗಿ ಗಾಯಗೊಂಡಿದ್ದು ನಿಮ್ಹೋನ್ಸ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.ರವಿಶಂಕರ್ ಏರ್‌ಟೆಲ್ ಉದ್ಯೋಗಿಯಾಗಿದ್ದರೆ ಮಹೇಶ್ ಸೆಕ್ಯೂರಿಟಿ ಉದ್ಯೋಗಿಯಾಗಿದ್ದು ಇಬ್ಬರೂ ಬೆಂಗಳೂರಿನ ಗಂಗಾನಗರದ ನಿವಾಸಿಗಳೆಂದು ತಿಳಿದುಬಂದಿದೆ. ಗ್ರಾಮಾಂತರ ಠಾಣೆ ಪೋಲಿಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry