ಶನಿವಾರ, ನವೆಂಬರ್ 23, 2019
17 °C

ಅಪಘಾತ: ಬೈಕ್ ಸವಾರ ಸಾವು

Published:
Updated:

ಹೊಸಕೋಟೆ: ಹೆದ್ದಾರಿಯ ಕೋಲಾರ ರಸ್ತೆಯಲ್ಲಿ ಬೈಕ್ ಹಾಗೂ ಟಾಟಾ ಸುಮೊ ನಡುವೆ ಸಂಭವಿಸಿದ ರಸ್ತೆ ಅಪಘಾತದಲ್ಲಿ ವ್ಯಕ್ತಿಯೊಬ್ಬರು ಸ್ಥಳದಲ್ಲೇ ಮೃತಪಟ್ಟ ಘಟನೆ ಶನಿವಾರ ರಾತ್ರಿ ನಡೆದಿದೆ.ತಾಲ್ಲೂಕಿನ ಕಂಬಳೀಪುರ ಗ್ರಾಮದ ಕೃಷ್ಣಪ್ಪ (35) ಮೃತಪಟ್ಟ ವ್ಯಕ್ತಿ.ಹೊಸಕೋಟೆಯಿಂದ ಬೈಕ್‌ನಲ್ಲಿ ಹೋಗುತ್ತಿದ್ದ ಅವರು ಎಂವಿಜೆ ಆಸ್ಪತ್ರೆ ಬಳಿ ತಿರುವು ತೆಗೆದುಕೊಳ್ಳುತ್ತಿದ್ದಾಗ ಎದುರುಗಡೆಯಿಂದ ಬಂದ ಟಾಟಾಸುಮೊ ಡಿಕ್ಕಿ ಹೊಡೆದಿದೆ.  ಪೊಲೀಸರು ಪ್ರಕರಣ ದಾಖಲಿಸಿದ್ದಾರೆ.

ಪ್ರತಿಕ್ರಿಯಿಸಿ (+)