ಮಂಗಳವಾರ, ಮೇ 18, 2021
28 °C

ಅಪಘಾತ: ಮಹಿಳೆ ಸಾವು

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು: ಎಂಇಎಸ್ ವರ್ತುಲ ರಸ್ತೆಯ ಕುವೆಂಪು ವೃತ್ತದ ಬಳಿ ಸೋಮವಾರ ರಾತ್ರಿ ಲಾರಿ ಮತ್ತು ಬೈಕ್ ನಡುವೆ ಸಂಭವಿಸಿದ ಅಪಘಾತದಲ್ಲಿ ಲತಾ (39) ಎಂಬುವರು ಸಾವನ್ನಪ್ಪಿದ್ದಾರೆ.ಸಹಕಾರನಗರ ನಿವಾಸಿಯಾದ ಲತಾ ಅವರು ಉಲ್ಲಾಳ ಉಪನಗರದಲ್ಲಿರುವ ಸ್ನೇಹಿತೆಯನ್ನು ಭೇಟಿಯಾಗಿ ಬೈಕ್‌ನಲ್ಲಿ ಮನೆಗೆ ವಾಪಸ್ ಹೋಗುತ್ತಿದ್ದಾಗ ಈ ಅಪಘಾತ ಸಂಭವಿಸಿದೆ. ಜಾಲಹಳ್ಳಿ ಸಂಚಾರ ಠಾಣೆ ಪೊಲೀಸರು ಲಾರಿ ಚಾಲಕನನ್ನು ಬಂಧಿಸಿ ವಾಹನವನ್ನು ವಶಕ್ಕೆ ತೆಗೆದುಕೊಂಡಿದ್ದಾರೆ.ಬಂಧನ

ನಗರದ ಕೇಂದ್ರ ಅಪರಾಧ ವಿಭಾಗ ಮತ್ತು ಹುಳಿಮಾವು ಪೊಲೀಸರು ಕನ್ನಕಳವು ಪ್ರಕರಣದ ಆರೋಪಿಗಳನ್ನು ಬಂಧಿಸಿ ಸುಮಾರು ್ಙ 38 ಲಕ್ಷ ಮೌಲ್ಯದ ಚಿನ್ನಾಭರಣ ವಶಪಡಿಸಿಕೊಂಡಿದ್ದಾರೆ.ನಾಯಂಡಹಳ್ಳಿಯ ಸೈಯದ್ ಇಜಾಜ್ ಖಾನ್ (19), ರಾಮನಗರದ ಸೈಯದ್ ಖಾಲಿದ್ (22), ಸೈಯದ್ ಮುನ್ನಾ ಖಾನ್ (19), ಮೋಹನ್‌ಕುಮಾರ್ (20), ಕೋಣನಕುಂಟೆ ಕ್ರಾಸ್ ಬಳಿಯ ನಾಯ್ಡುಲೇಔಟ್‌ನ ಪ್ರಕಾಶ್ (28), ಗಣಪತಿಪುರದ ರವಿ (29), ಬಿಳೇಕಹಳ್ಳಿಯ ಇಮ್ರೋನ್ (26) ಮತ್ತು ಹೊಸೂರು ರಸ್ತೆಯ ಮುರುಗ (28) ಬಂಧಿತರು.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.