ಅಪಘಾತ: ಮೂರು ಸಾವು

ಮಂಗಳವಾರ, ಜೂಲೈ 23, 2019
27 °C

ಅಪಘಾತ: ಮೂರು ಸಾವು

Published:
Updated:

ಹುಣಸೂರು: ತಾಲ್ಲೂಕಿನ ಬಿಳಿಕೆರೆ ಹೋಬಳಿ ರಾಮೇನಹಳ್ಳಿ ಬಳಿ ಬುಧವಾರ ಬೆಳಗಿನ ಜಾವ ಜೀಪೊಂದು ಸೇತುವೆಯ ತಡೆಗೋಡೆಗೆ ಡಿಕ್ಕಿ ಹೊಡೆದು ಇಬ್ಬರು ಸ್ಥಳದಲ್ಲಿಯೇ ಮೃತಪಟ್ಟಿದ್ದು ಮತ್ತೊಬ್ಬರು ಆಸ್ಪತ್ರೆಯಲ್ಲಿ ಸಾವಿಗೀಡಾಗಿದ್ದಾರೆ. ಇನ್ನೂ 6 ಮಂದಿ ಗಂಭೀರವಾಗಿ ಗಾಯಗೊಂಡಿದ್ದಾರೆ.

ಅಪಘಾತದಲ್ಲಿ ಮಡಿದವರು ಮತ್ತು ಗಾಯಗೊಂಡವರು ಕೆ.ಆರ್.ನಗರ ತಾಲ್ಲೂಕಿನ ಸಾಲಿಗ್ರಾಮದ ನಿವಾಸಿಗಳು. ಬುಧವಾರ ಹುಣ್ಣಿಮೆಯ ದಿನವಾಗಿದ್ದರಿಂದ ನಂಜನಗೂಡಿನ ಶ್ರೀಕಂಠೇಶ್ವರನ ದರ್ಶನ ಪಡೆಯಲು ತೆರಳುತ್ತಿದ್ದರು.

ಜೀಪ್ ರಾಮೇನಹಳ್ಳಿ ಬಳಿ ಲಕ್ಷ್ಮಣತೀರ್ಥ ನದಿಗೆ ಕಟ್ಟಿರುವ ಸೇತುವೆ ದಾಟುತ್ತಿದ್ದಂತೆ, ರಸ್ತೆಗೆ  ಬಂದ ವ್ಯಕ್ತಿಗೆ ಡಿಕ್ಕಿ ಹೊಡೆಯುವುದನ್ನು ತಪ್ಪಿಸಲು ಪ್ರಯತ್ನಿಸಿದಾಗ ಅಪಘಾತ ಸಂಭವಿಸಿತು.

ಡಿಕ್ಕಿ ಹೊಡೆದ ರಭಸಕ್ಕೆ ವಾಹನದಲ್ಲಿ ಪ್ರಯಾಣಿಸುತ್ತಿದ್ದ ಇಬ್ಬರ ದೇಹ ನಾಲೆ ಏರಿ ಮೇಲೆ ಮತ್ತೊಂದು ದೇಹ ಕಾಲುವೆಯೊಳಗೆ ಬಿತ್ತು.  ಬಿತ್ತು ಎನ್ನಲಾಗಿದೆ.. ಸಾಲಿಗ್ರಾಮದ ನಿವಾಸಿ ವೀಣಾ (30), ಅಧ್ಯಾಪಕ ರೇವಣ್ಣ ಎಂಬುವವರ ಪತ್ನಿ ಮತ್ತು ವೀಣಾ ಅವರ ತಾಯಿ ಮೈಸೂರಿನ  ವಿಜಯನಗರ ನಿವಾಸಿ ಲಿಂಗಮ್ಮ (55) ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ. ಮಿರ್ಲೆ ನಿವಾಸಿ ಸಿದ್ದಮ್ಮ (75) ಅವರು ಮೈಸೂರಿನ ಆಸ್ಪತ್ರೆಯಲ್ಲಿ ಮೃತಪಟ್ಟರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry