ಶನಿವಾರ, ಮೇ 8, 2021
26 °C

ಅಪಘಾತ: ಮೂವರು ಸಾವು

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ನೆಲಮಂಗಲ: ಸ್ಕಾರ್ಪಿಯೊ ಕಾರೊಂದು ಮುಂದೆ ಚಲಿಸುತ್ತಿದ್ದ ಆಲ್ಟೊ ಕಾರಿಗೆ ಡಿಕ್ಕಿ ಹೊಡೆದು ನಾಲ್ಕಾರು ಪಲ್ಟಿ ಹೊಡೆದ ಪರಿಣಾಮ ಅದರಲ್ಲಿ ಪ್ರಯಾಣಿಸುತ್ತಿದ್ದ ಪೊಲೀಸ್ ಪೇದೆ ಸೇರಿದಂತೆ ಮೂವರು ಸ್ಥಳದಲ್ಲಿಯೇ ಸತ್ತು ಐವರಿಗೆ ತೀವ್ರ ಸ್ವರೂಪದ ಗಾಯಗಳಾಗಿವೆ. ಆಲ್ಟೊ ಕಾರಿನಲ್ಲಿ ಪ್ರಯಾಣಿಸುತ್ತಿದ್ದ ನಾಲ್ವರಲ್ಲಿ ಇಬ್ಬರಿಗೆ ಗಾಯಗಳಾಗಿವೆ. ಮೃತರನ್ನು ಶಿವಗಂಗೆ ಸಮೀಪದ ಮೂಲತಃ ಸಿರಿಗಿರಿಪುರ ಮೂಲದ, ಬೆಂಗಳೂರಿನ ಮೂಡಲಪಾಳ್ಯ ನಿವಾಸಿ ಪೊಲೀಸ್ ಪೇದೆ ಹುಚ್ಚಹನುಮಯ್ಯ (55) ಅವರ ಪತ್ನಿ ಗಾಯಿತ್ರಿ (50) ಹಾಗೂ ಅಡುಗೆ ಸಹಾಯಕ ರಾಮಣ್ಣ ಎಂದು ಗುರುತಿಸಲಾಗಿದೆ.ಗಾಯಗೊಂಡವರನ್ನು ಸುಗಂಧರಾಜ (ಚಾಲಕ), ಚಂದ್ರಮ್ಮ, ಕೃಷ್ಣಾದಾಸ್, ಮುದ್ದಪ್ಪ, ರಾವ್ ಎಂದು ಗುರುತಿಸಲಾಗಿದೆ. ಆಲ್ಟೊ ಕಾರಿನಲ್ಲಿದ್ದ ಸಚ್ಚಿದಾನಂದ, ಶಕುಂತಲಾ, ರುಕ್ಮಿಣಿ ಮತ್ತು ಪ್ರದೀಪ್ ಎಂಬುವವರು ತುಮಕೂರು ಬಳಿಯ ಕಡಬದಿಂದ ಬೆಂಗಳೂರಿಗೆ ಪ್ರಯಾಣಿಸುತ್ತಿದ್ದರು. ಗಾಯಗೊಂಡ ಅವರನ್ನು ಪಟ್ಟಣದ ಖಾಸಗಿ ಆಸ್ಪತ್ರೆಗೆ ಸೇರಿಸಲಾಗಿದೆ.ಹುಚ್ಚಹನುಮಯ್ಯ ಕುಟುಂಬ ಪ್ರತಿ ವರ್ಷ ರಾಮನವಮಿಯಂದು ಸ್ವಗ್ರಾಮ ಸಿರಿಗಿರಿಪುರ ಸಮೀಪದ ವೀರಸಾಗರದ ಪ್ರಸಿದ್ಧ ಬೈಲಾಂಜನೇಯ ಸ್ವಾಮಿಗೆ ವಿಶೇಷ ಪೂಜೆ ಸಲ್ಲಿಸಿ ಭಕ್ತಾದಿಗಳಿಗೆ ಪಾನಕ ಪ್ರಸಾದ, ದಾಸೋಹ ಸೇವೆಯನ್ನು ನಡೆಸಿಕೊಂಡು ಬರುತ್ತಿತ್ತು.ಅಂತೆಯೇ, ಈ ವರ್ಷವೂ ರಾಮನವಮಿಯ ಸೇವಾ ಕಾರ್ಯ ಪೂರೈಸಿ ಸಂಜೆ 4 ಗಂಟೆ ಸಮಯದಲ್ಲಿ ನೆಲಮಂಗಲ ಮಾರ್ಗವಾಗಿ ಬೆಂಗಳೂರಿಗೆ ತಮ್ಮ ಸ್ಕಾರ್ಪಿಯೊ ಕಾರಿನಲ್ಲಿ ವಾಪಸಾಗುತ್ತಿದ್ದಾಗ ಈ ಅವಘಡ ಸಂಭವಿಸಿದೆ ಎಂದು ಗ್ರಾಮಾಂತರ ಪೊಲೀಸ್ ಠಾಣೆಯ ಸಬ್ ಇನ್ಸ್‌ಪೆಕ್ಟರ್ ಬಿ.ಮಾರುತಿ ತಿಳಿಸಿದ್ದಾರೆ.

ಸುದ್ದಿ ತಿಳಿದ ತಕ್ಷಣ ಡಿವೈಎಸ್ಪಿ ಚಿನ್ನಸ್ವಾಮಿ ಸಿಬ್ಬಂದಿಯೊಂದಿಗೆ ಸ್ಥಳಕ್ಕೆ ಆಗಮಿಸಿ ತುರ್ತು ಕ್ರಮ ಕೈಗೊಂಡಿದ್ದಾರೆ.

ತಂದೆ ತಾಯಿ ಇಬ್ಬರನ್ನೂ ಕಳೆದುಕೊಂಡ ಎಂಜಿನಿಯರಿಂಗ್ ಕಾಲೇಜೊಂದರ ಉಪನ್ಯಾಸಕ ಗಿರೀಶ್, ಖಾಸಗಿ ಸುದ್ದಿ ವಾಹಿನಿಯ ನೌಕರ ಯತೀಶ್ ಮತ್ತು ಕುಟುಂಬದವರ ಆಕ್ರಂದನ ಮನ ಕಲುಕುವಂತಿತ್ತು.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.