ಅಪಘಾತ: ಮೂವರ ಸಾವು

7

ಅಪಘಾತ: ಮೂವರ ಸಾವು

Published:
Updated:

ರಾಣೆಬೆನ್ನೂರು: ತಾಲ್ಲೂಕಿನ ಹೂಲಿಹಳ್ಳಿ ಕ್ರಾಸ್ ಬಳಿ ರಾಷ್ಟ್ರೀಯ ಹೆದ್ದಾರಿಯಲ್ಲಿ ಭಾನುವಾರ ಸಂಭವಿಸಿದ ರಸ್ತೆ ಅಪಘಾತದಲ್ಲಿ ಮೂವರು ಸಾವಿಗೀಡಾಗಿದ್ದು, ಹತ್ತಕ್ಕೂ ಹೆಚ್ಚು ಜನರು ಗಾಯಗೊಂಡಿದ್ದಾರೆ.ಗೂಡ್ಸ್ ಲಾರಿ ಮತ್ತು ಆಟೋ ಮಧ್ಯೆ ಡಿಕ್ಕಿ ಸಂಭವಿಸಿದೆ. ಆಟೊದಲ್ಲಿದ್ದ ಕಾಕೋಳದ ಕೃಷ್ಣಪ್ಪ ಸೋಮಪ್ಪ ಲಮಾಣಿ (37), ಬ್ಯಾಡಗಿ ತಾಲ್ಲೂಕು ಬುಡಪನಹಳ್ಳಿ ಗ್ರಾಮದ ವೀರಪ್ಪ ಚನ್ನಬಸಪ್ಪ ಅಂಗಡಿ (57) ಮತ್ತು ಹಲವಾಗಲ ಗ್ರಾಮದ ವೀರಮ್ಮ ಮೌನೇಶಪ್ಪ ಅರ್ಕಾಚಾರಿ (38) ಮೃತಪಟ್ಟಿದ್ದಾರೆ. ಗಾಯಾಳುಗಳನ್ನು ದಾವಣಗೆರೆ ಆಸ್ಪತ್ರೆಗೆ ದಾಖಲಿಸಲಾಗಿದೆ. ಗ್ರಾಮೀಣ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry