ಅಪಘಾತ: ರೂ.1.17 ಕೋಟಿ ಪರಿಹಾರ

7

ಅಪಘಾತ: ರೂ.1.17 ಕೋಟಿ ಪರಿಹಾರ

Published:
Updated:

ನವದೆಹಲಿ (ಪಿಟಿಐ): ಅಪಘಾತವೊಂದರಲ್ಲಿ ಮೃತಪಟ್ಟ ಭಾರತೀಯ ತೈಲ ನಿಗಮದ ಉದ್ಯೋಗಿ ಕುಟುಂಬಕ್ಕೆ ಮೋಟಾರು ಅಪಘಾತ ಪರಿಹಾರ ಪ್ರಾಧಿಕಾರ ರೂ. 1.17 ಕೋಟಿ ಪರಿಹಾರ ನೀಡಲು ಸೂಚಿಸಿದೆ.ಮುಖೇಶ್‌ ಖುರಾನ (46) ಅವರು ಭಾರತೀಯ ತೈಲ ನಿಗಮದಲ್ಲಿ ಮುಖ್ಯ ಯೋಜನಾ ವ್ಯವಸ್ಥಾಪಕರಾಗಿ ಕೆಲಸ ನಿವರ್ಹಿಸುತ್ತಿದ್ದರು.  ಅಪಘಾತ­ಕ್ಕೀಡಾದ ವಾಹನಕ್ಕೆ ವಿಮೆ ಇದ್ದು, ಸೂಕ್ತ ಪರಿಹಾರ ನೀಡುವಂತೆ ನ್ಯಾಷನಲ್‌ ಇನ್ಷೂರೆನ್ಸ್‌ ಕಂಪೆನಿ ಲಿಮಿಟೆಡ್‌ಗೆ ಪ್ರಾಧಿಕಾರ ಸೂಚಿಸಿದೆ.ಅಪಘಾತಕ್ಕೀಡಾದ ವ್ಯಕ್ತಿಯು ಗಜಿಂದರ್‌ ಸಿಂಗ್‌ ಎಂಬುವವರೊಂದಿಗೆ 2009ರ ಸೆಪ್ಟೆಂಬರ್‌ 10ರಂದು ವಿಮಾನ ನಿಲ್ದಾಣಕ್ಕೆ ಕಾರಿನಲ್ಲಿ ಹೋಗುತ್ತಿದ್ದಾಗ ಘಟನೆ ನಡೆದಿತ್ತು. ಈ ಸಂಬಂಧ ಅಪಘಾತದಲ್ಲಿ ಮೃತಪಟ್ಟ ಮುಖೇಶ್‌ ಖುರಾನ ಕುಟುಂಬವು ಪ್ರಾಧಿಕಾರಕ್ಕೆ ದೂರು ಸಲ್ಲಿಸಿತ್ತು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry