ಭಾನುವಾರ, ಏಪ್ರಿಲ್ 18, 2021
30 °C

ಅಪಘಾತ: ಸಚಿವರು ಪಾರು, 6 ಜನರಿಗೆ ಗಾಯ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಚಿತ್ರದುರ್ಗ: ತಾಲ್ಲೂಕಿನ ದಂಡಿನಕುರುಬರ ಹಟ್ಟಿ ಕ್ರಾಸ್ ಬಳಿಯ ಚಳ್ಳಕೆರೆ ರಸ್ತೆಯಲ್ಲಿ ಸೋಮವಾರ ಸಂಭವಿಸಿದ ಅಪಘಾತದಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಬಿ.ಜೆ. ಪುಟ್ಟಸ್ವಾಮಿ ಅಪಾಯದಿಂದ ಪಾರಾಗಿದ್ದಾರೆ. ಆದರೆ ಅವರ ಬೆಂಗಾವಲು ವಾಹನದ ಐವರು ಮತ್ತು ಒಬ್ಬ ಲಾರಿ ಚಾಲಕ ಗಾಯಗೊಂಡಿದ್ದಾರೆ.ಬೆಂಗಾವಲು ವಾಹನದಲ್ಲಿದ್ದ ಚಾಲಕ ಲೋಕೇಶ, ಎಎಸ್‌ಐ ಮಾಯಾಗಪ್ಪ, ಕಾನ್‌ಸ್ಟೇಬಲ್ ಮನೋಹರ, ಲೋಕೇಶಪ್ಪ ಮತ್ತು ಲಾರಿ ಚಾಲಕ ರಾಜು ಗಾಯಗೊಂಡವರು.ಚಳ್ಳಕೆರೆಯಿಂದ ಚಿತ್ರದುರ್ಗಕ್ಕೆ ಆಗಮಿಸುತ್ತಿದ್ದ ಸಚಿವರ ಕಾರಿನ ಮುಂದೆ ಬೆಂಗಾವಲು ವಾಹನ, ಡಿವೈಎಸ್ಪಿ ವಾಹನಗಳು ಸಂಚರಿಸುತ್ತಿದ್ದವು.

 

ಇದೇ ಸಂದರ್ಭದಲ್ಲಿ ಚಳ್ಳಕೆರೆಯತ್ತ ಸಂಚರಿಸುತ್ತಿದ್ದ ಎರಡು ಅದಿರು ಲಾರಿಗಳು ಒಂದನ್ನೊಂದು ಹಿಂದಿಕ್ಕುವ ಪ್ರಯತ್ನದಲ್ಲಿದ್ದವು. ಒಂದು ಲಾರಿಯನ್ನು ಇನ್ನೊಂದು ಹಿಂದಿಕ್ಕುವ ಸಂದರ್ಭದಲ್ಲಿಯೇ ಸಚಿವರಿದ್ದ ವಾಹನ ಮತ್ತು ಪೊಲೀಸ್ ಹಾಗೂ ಬೆಂಗಾವಲು ವಾಹನಗಳು ಎದುರಿಗೆ ಆಗಮಿಸಿದವು. ಈ ವಾಹನಗಳಿಗೆ ಡಿಕ್ಕಿ ಹೊಡೆಯುವುದನ್ನು ತಪ್ಪಿಸಲು ಪ್ರಯತ್ನಿಸಿದಾಗ ರಸ್ತೆ ಪಕ್ಕದಲ್ಲಿದ್ದ ಗಿಡಗಳಿಗೆ ಲಾರಿಗಳು ಡಿಕ್ಕಿ ಹೊಡೆದಿವೆ.

 

ಒಂದು ಲಾರಿ ಎಡಕ್ಕೆ, ಮತ್ತೊಂದು ಲಾರಿ ಬಲಕ್ಕಿರುವ ಮರಗಳಿಗೆ ಡಿಕ್ಕಿ ಹೊಡೆದಿವೆ. ವೇಗದಲ್ಲಿದ್ದ ಬೆಂಗಾವಲು ವಾಹನ ಬಲಕ್ಕಿದ್ದ ಲಾರಿಗೆ ಡಿಕ್ಕಿ ಹೊಡೆದಿದೆ. ಸಚಿವರು ಕೂದಲೆಳೆಯ ಅಂತರದಲ್ಲಿ  ಪಾರಾಗಿದ್ದಾರೆ.

 

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.