ಅಪಘಾತ: ಸನತ್ ಜಯಸೂರ್ಯ ಪಾರು

7

ಅಪಘಾತ: ಸನತ್ ಜಯಸೂರ್ಯ ಪಾರು

Published:
Updated:

ಕೊಲಂಬೊ (ಪಿಟಿಐ): ಶ್ರೀಲಂಕಾ ಕ್ರಿಕೆಟಿಗ ಸನತ್ ಜಯಸೂರ್ಯ ಅವರು ಇಲ್ಲಿನ ದಕ್ಷಿಣ ಕೊಲಂಬೊದಿಂದ 160 ಕಿ.ಮೀ ದೂರದಲ್ಲಿರುವ ಮತಾರ ಎಂಬಲ್ಲಿ ಭಾನುವಾರ ನಡೆದ ರಸ್ತೆ ಅಪಘಾತದಲ್ಲಿ ಯಾವುದೇ ಗಾಯವಿಲ್ಲದೆ ಪಾರಾಗಿದ್ದಾರೆ.

ಆದರೆ ಈ ಅಪಘಾತದಲ್ಲಿ ಮೂವರು ಸೈನಿಕರು ಗಾಯಗೊಂಡಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ, ಜಯಸೂರ್ಯ ಪ್ರಯಾಣಿಸುತ್ತಿದ್ದ ವಾಹನವು ಮೋಟಾರ್ ಸೈಕಲ್‌ಗೆ ಡಿಕ್ಕಿ ಹೊಡೆದು ಅಪಘಾತ ಸಂಭವಿಸಿದೆ. ಜಯಸೂರ್ಯ ಅವರಿಗೆ ಯಾವುದೇ ಗಾಯವಾಗಿಲ್ಲ ಎಂದು ಪೊಲೀಸರು ಸ್ಪಷ್ಟಪಡಿಸಿದ್ದಾರೆ. ಜಯಸೂರ್ಯ ಮತಾರ ಕ್ಷೇತ್ರದ ಆಡಳಿತ ಪಕ್ಷದ ಸಂಸತ್ ಸದಸ್ಯರೂ ಸಹ ಆಗಿದ್ದಾರೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry