ಬುಧವಾರ, ಅಕ್ಟೋಬರ್ 16, 2019
22 °C

ಅಪಘಾತ: 2 ವಿದ್ಯಾರ್ಥಿಗಳ ಸಾವು

Published:
Updated:

ಗೋಕಾಕ (ಬೆಳಗಾವಿ ಜಿಲ್ಲೆ): ನಗರದ ಹೊರ ವಲಯದಲ್ಲಿ ಭಾನುವಾರ ಬೆಳಗಿನ ಜಾವ ನಿಂತ ಟ್ರ್ಯಾಕ್ಟರ್‌ಗೆ ಬೈಕ್ ಡಿಕ್ಕಿ ಹೊಡೆದು, ಬೈಕ್‌ನಲ್ಲಿದ್ದ ಇಬ್ಬರು ಎಂಜಿನಿಯರಿಂಗ್ ವಿದ್ಯಾರ್ಥಿಗಳು ಸಾವಿಗೀಡಾದ ಘಟನೆ ಸಂಭವಿಸಿದೆ.ಮೃತರನ್ನು ಗೋಕಾಕದ ಬಣಗಾರ ಗಲ್ಲಿಯ ನಿವಾಸಿಗಳಾದ ಅಮಿತ ಮಹೇಶ ಅಂದಾನಿ (21) ಮತ್ತು ಪ್ರಭು ಮಹೇಶ ಗುಲ್ಲ (21) ಎಂದು ಗುರುತಿಸಲಾಗಿದೆ. ಅಮಿತ್ ಹುಬ್ಬಳ್ಳಿಯ ಗೋಕುಲದಲ್ಲಿರುವ ಕೆ.ಎಲ್.ಇ. ಎಂಜಿನಿಯರಿಂಗ್ ಕಾಲೇಜಿನಲ್ಲಿ 3ನೇ ಸೆಮೆಸ್ಟರ್ ಓದುತ್ತಿದ್ದ. ಪ್ರಭು ಬೆಳಗಾವಿಯ ಗೋಗಟೆ ಇನ್‌ಸ್ಟಿಟ್ಯೂಟ್ ಆಫ್ ಟೆಕ್ನಾಲಾಜಿ ಕಾಲೇಜಿನ ವಿದ್ಯಾರ್ಥಿಯಾಗಿದ್ದ.ಇವರು ಮಮದಾಪುರ ಕ್ರಾಸ್ ಬಳಿ ಧಾಬಾವೊಂದರಲ್ಲಿ ಏರ್ಪಡಿಸಿದ್ದ ಹೊಸ ವರ್ಷದ ಆಚರಣೆಯಲ್ಲಿ ಪಾಲ್ಗೊಂಡು ದ್ವಿಚಕ್ರ ವಾಹನಲ್ಲಿಗೋಕಾಕಕ್ಕೆ ವಾಪಸು ಹೋಗುತ್ತಿದ್ದಾಗ ಈ ದುರ್ಘಟನೆ ನಡೆದಿದೆ.

 

Post Comments (+)