ಶನಿವಾರ, ಜೂನ್ 12, 2021
28 °C

ಅಪಪ್ರಚಾರಕ್ಕೆ ಕಿವಿಗೊಡದಿರಲು ಜನರಿಗೆ ಮನವಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬಸವನಬಾಗೇವಾಡಿ: ದೇಶದಲ್ಲಿ ಯುಪಿಎ ಸರ್ಕಾರ ಉತ್ತಮ ಆಡಳಿತ ನೀಡಿದೆ. ವಿರೋಧಿಗಳ ಅಪಪ್ರಚಾರಕ್ಕೆ ಕಿವಿಗೊಡದೇ ಕಾಂಗ್ರೆಸ್ ಪಕ್ಷಕ್ಕೆ ಮತದಾರರು ಮತ ನೀಡಬೇಕೆಂದು ವಿಜಾಪುರ ಲೋಕಸಭಾ ಮತಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಪ್ರಕಾಶ ರಾಠೋಡ ಹೇಳಿದರು.ತಾಲ್ಲೂಕಿನ ಯರನಾಳ ವಿರಕ್ತಮಠ ದಲ್ಲಿ ಬುಧವಾರ ಸಂಜೆ ಭಾರತ ನಿರ್ಮಾಣದ ಪಾದಯಾತ್ರೆಯ ಅಂಗ ವಾಗಿ ಹಮ್ಮಿಕೊಂಡಿದ್ದ ಕಾಂಗ್ರೆಸ್ ಕಾರ್ಯಕರ್ತರನ್ನು ಉದ್ದೇಶಿಸಿ ಮಾತ ನಾಡಿದ ಅವರು, ಕಾಂಗ್ರೆಸ್ ಸರ್ಕಾರ ದೇಶದಲ್ಲಿ ಮಾಡಿರುವ ಸಾಧನೆಯನ್ನು ಮುಂದಿಟ್ಟುಕೊಂಡು ಕಾಂಗ್ರೆಸ್ ಕಾರ್ಯಕರ್ತರು ಈ ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷವನ್ನು ಗೆಲ್ಲಿಸಬೇಕಿದೆ. ಬಿಜೆಪಿ ಮುಖಂಡರು ವಿನಾ ಕಾರಣ ಪಕ್ಷದ ಮೇಲೆ ಆರೋಪ ಮಾಡುತ್ತಿದ್ದಾರೆ. ಇದನ್ನು ಕಿವಿ ಹಾಕಿಕೊಳ್ಳದೇ ಕಾಂಗ್ರೆಸ್ ಪಕ್ಷಕ್ಕೆ ತಮ್ಮ ಅಮೂಲ್ಯವಾದ ಮತ ನೀಡಬೇಕೆಂದ ಅವರು, ದೇಶದ ಪ್ರಧಾನಿಗಳಾಗಿದ್ದ ದಿವಂಗತ ಇಂದಿರಾಗಾಂಧಿ, ದಿವಂಗತ ರಾಜೀವಗಾಂಧಿ ಅವರನ್ನು ಗುಂಡಕ್ಕಿ ಹತ್ಯೆ ಮಾಡಿದ್ದಾರೆ. ಇಂತಹ ಮನೆತನ ದಲ್ಲಿದ್ದ ಸೋನಿಯಾ ಗಾಂಧಿ ಅವರು ಪ್ರಧಾನಿ ಹುದ್ದೆಯನ್ನು ತ್ಯಾಗ ಮಾಡಿ ಈ ಸ್ಥಾನದಲ್ಲಿ ಆರ್ಥಿಕ ತಜ್ಞರಾದ ಮನಮೋಹನ ಸಿಂಗ್ ಅವರನ್ನು ಆಯ್ಕೆ ಮಾಡಿದ್ದಾರೆ. ಇಂತಹ ಇತಿಹಾಸವನ್ನು ಹೊಂದಿರುವ ಪಕ್ಷಕ್ಕೆ ತಾವೆಲ್ಲರೂ ಮತ ನೀಡಬೇಕು ಎಂದರು.ಶಾಸಕ ಶಿವಾನಂದ ಪಾಟೀಲ ಮಾತನಾಡಿ, ಕಾಂಗ್ರೆಸ್ ಸರ್ಕಾರವನ್ನು ದೇಶದಲ್ಲಿ ಅಧಿಕಾರಕ್ಕೆ ತರಬೇಕೆನ್ನುವ ಉದ್ದೇಶ ದಿಂದ ಚುನಾವಣಾ ಪ್ರಚಾರದ ಅಂಗವಾಗಿ ಭಾರತ ನಿರ್ಮಾಣ ಪಾದಯಾತ್ರೆ ಹಮ್ಮಿಕೊಂಡಿದೆ. ಮೋದಿ ಚುನಾವಣಾ ಪ್ರಚಾರಕ್ಕಾಗಿ ₨ 400 ಕೋಟಿ ಹಣ ಖರ್ಚು ಮಾಡಲಾಗು ತ್ತಿದ್ದಾರೆ ಎಂದು ಮಾಧ್ಯಮಗಳಿಂದ ತಿಳಿದು ಬಂದಿದೆ. ಇಷ್ಟೊಂದು ಹಣ ಎಲ್ಲಿಂದ ಬರುತ್ತದೆ ಎಂದು ಅವರು ಪ್ರಶ್ನಿಸಿದರು.ಮಾಜಿ ಸಚಿವ ಶ್ರೀರಾಮುಲು ವಿಷಯದಲ್ಲಿ ಬಿಜೆಪಿಯ ಹಿರಿಯ ನಾಯಕರಾದ ಅರುಣ ಜೇಟ್ಲಿ, ಸುಷ್ಮಾ ಸ್ವರಾಜ್ ಭಿನ್ನಾಭಿಪ್ರಾಯ ಹೊಂದಿರು ವುದು ಪಕ್ಷದ ನೈತಿಕತೆ ಕುಸಿದಿರುವುದನ್ನು ತೋರಿಸುತ್ತದೆ ಎಂದರು.ಜಿಲ್ಲಾ ಪಂಚಾಯಿತಿ ಮಾಜಿ ಸದಸ್ಯ ಮಲ್ಲಿಕಾರ್ಜುನ ನಾಯಕ, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಐ.ಸಿ. ಪಟ್ಟಣಶೆಟ್ಟಿ, ಎಂ.ಎ. ಪಾಟೀಲ, ಕೖಷ್ಣಾ ನಾಯಕ ಸಭೆಯಲ್ಲಿ ಮಾತನಾಡಿದರು.ಧುರೀಣರಾದ ಕಲ್ಲು ದೇಸಾಯಿ, ಮೋಹನಗೌಡ ಪಾಟೀಲ, ಕಲ್ಲು ಸೊನ್ನದ, ಬಂದೇನವಾಜ ಡೋಲಜಿ, ಶೇಖರ ದಳವಾಯಿ, ಸಂಗಮೇಶ ಓಲೇಕಾರ, ಸುರೇಶ ಹಾರಿವಾಳ, ವೈಜನಾಥ ಕರ್ಪೂರಮಠ, ವಿನೀತ ದೇಸಾಯಿ, ರುಕ್ಮಿಣಿ ರಾಠೋಡ, ರಾಹುಲ ಕುಬಕಡ್ಡಿ, ಚಂದ್ರಶೇಖರ ಪಾಟೀಲ, ಬಸವರಾಜ ಕೊಕಟನೂರ, ಶಂಕರಗೌಡ ಪಾಟೀಲ, ಉಸ್ಮಾನ್‌ ಪಟೇಲ, ಪುರಸಭೆ ಅಧ್ಯಕ್ಷೆ ಶ್ರೀದೇವಿ ಲಮಾಣಿ, ಪುರಸಭೆ ಉಪಾಧ್ಯಕ್ಷ ಸಂಗನಬಸು ಪೂಜಾರಿ ಸಭೆಯಲ್ಲಿದ್ದರು.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.