ಅಪಪ್ರಚಾರ: ಶಾಸಕ ಶ್ರೀನಿವಾಸ್ ಆರೋಪ

7

ಅಪಪ್ರಚಾರ: ಶಾಸಕ ಶ್ರೀನಿವಾಸ್ ಆರೋಪ

Published:
Updated:

ರಾಜರಾಜೇಶ್ವರಿನಗರ:  ರಾಜ ರಾಜೇಶ್ವರಿನಗರ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯಲ್ಲಿ ನಾನು ಮಾಡಿರುವಂತಹ ಅಭಿವೃದ್ಧಿ ಕಾರ್ಯಗಳನ್ನು ಸಹಿಸದೆ ತಮ್ಮ ಪಕ್ಷದ ಇಬ್ಬರು ಮುಖಂಡರೇ ಅಪ ಪ್ರಚಾರ ಮಾಡುತ್ತಿದ್ದಾರೆ ಎಂದು ಶಾಸಕ ಎಂ. ಶ್ರೀನಿವಾಸ್ ಆರೋಪಿಸಿದ್ದಾರೆ.ಇಲ್ಲಿನ ಬಯಲು ರಂಗ ಮಂದಿರದಲ್ಲಿ ನಡೆದ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ಕಾರ್ಯಕರ್ತರು ಮತ್ತು ಮುಖಂಡರ ಸಭೆಯಲ್ಲಿ ಭಾಗವಹಿಸಿ ಅವರು ಮಾತನಾಡಿದರು.`ಹಲವೆಡೆ ಸರ್ಕಾರಿ ಜಮೀನು ಗುರುತಿಸಿ ಕಡು ಬಡವರಿಗೆ ಹಕ್ಕು ಪತ್ರ ನೀಡಲು ಮುಂದಾದರೆ ಸವಲತ್ತುಗಳನ್ನು ತಪ್ಪಿಸಲು ಮತ್ತು ಶಾಸಕರಿಗೆ ಒಳ್ಳೆಯ ಹೆಸರು ಬರುತ್ತದೆ ಎಂಬ ಭಾವನೆಯಿಂದ ಕೆಲವರು ತಪ್ಪು ಸಂದೇಶ ನೀಡಲು ಹೊರಟಿದ್ದಾರೆ. ಆದರೆ, ಕಾರ್ಯಕರ್ತರು ಈ ಮುಖಂಡರ ಯಾವುದೇ ರೀತಿಯ ಅಪಪ್ರಚಾರಕ್ಕೆ ಕಿವಿಗೊಡಬಾರದು~ ಎಂದು ಮನವಿ ಮಾಡಿದರು.ಪಾಲಿಕೆ ಸದಸ್ಯರಾದ ತಿಮ್ಮರಾಜು, ಎಸ್. ವೆಂಕಟೇಶ್‌ಬಾಬು, ಜಿ.ಎಚ್.ರಾಮಚಂದ್ರ, ಲಕ್ಷ್ಮೀಕಾಂತರೆಡ್ಡಿ, ಮಹಿಳಾ ಮೋರ್ಚಾ ಅಧ್ಯಕ್ಷೆ ರಶ್ಮಿ ಡಿಸೋಜ, ಬಿಜೆಪಿ ಕ್ಷೇತ್ರ ಘಟಕದ ಅಧ್ಯಕ್ಷ ಎಂ.ಮಂಜು, ಎಸ್.ಸಿ. ಮೋರ್ಚಾ ಅಧ್ಯಕ್ಷ ಎಂ.ಮಂಜುನಾಥ್, ನಗರಸಭೆ ಮಾಜಿ ಅಧ್ಯಕ್ಷೆ ಶಾರದಮ್ಮ, ಮಾಜಿ ಉಪಾಧ್ಯಕ್ಷ ಮುನಿವೆಂಕಟಪ್ಪ, ಮಾಜಿ ಸದಸ್ಯೆ ಸುಮಿತ್ರಮ್ಮ, ಮುಖಂಡರಾದ ಆರ್.ಎಸ್.ಎಸ್.ಮಂಜು, ಶಿವಣ್ಣಗೌಡ ಮತ್ತಿತರರು ಉಪಸ್ಥಿತರಿದ್ದರು.

 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry