ಶನಿವಾರ, ನವೆಂಬರ್ 23, 2019
17 °C

ಅಪರಾಧ ಕೃತ್ಯಗಳಿಂದ ದೂರವಿರಿ: ಸಲಹೆ

Published:
Updated:

ಗದಗ: ಅಪರಾಧ ಕೃತ್ಯಗಳಿಂದ  ವಿದ್ಯಾರ್ಥಿಗಳು ದೂರ ಉಳಿಯಬೇಕು ಎಂದು ಕೊಪ್ಪಳ ಜಿಲ್ಲಾ ಪೋಲಿಸ್ ವರಿಷ್ಠಾಧಿಕಾರಿ ಎಮ್.ಕೆ.ಅಣ್ಣಿಗೇರಿ ಹೇಳಿದರು.ಸ್ಥಳೀಯ ಆದರ್ಶ ಶಿಕ್ಷಣ ಸಮಿತಿ ಮಹಾವಿದ್ಯಾಲಯದಲ್ಲಿ ಏರ್ಪಡಿಸಿದ್ದ ಆದರ್ಶ ಉತ್ಸವದಲ್ಲಿ ಮಾತನಾಡಿದ ಅವರು, ಸ್ಪರ್ಧಾತ್ಮಕ ಯುಗದಲ್ಲಿ ವಿದ್ಯಾರ್ಥಿಗಳಿಗೆ ಸಾಕಷ್ಟು ಅವಕಾಶ ಗಳಿದ್ದರೂ ಉಪಯೋಗಿಸಿಕೊಳ್ಳುವ ಸಾಮರ್ಥ್ಯ ಕುಂಠಿತವಾಗುತ್ತಿದೆ ಎಂದು ಆತಂಕ ವ್ತಕ್ತಪಡಿಸಿದರು. ಶಿಕ್ಷಣ ವ್ಯವಸ್ಥೆಯಲ್ಲಿ ಸಮಗ್ರ ಬದಲಾವಣೆ ಆಗಬೇಕು ಎಂದು ಪ್ರತಿಪಾದಿಸಿದರು.ನಗರಸಭೆ ಸದಸ್ಯರಾದ ಪೀರಸಾಬ ಕೌತಾಳ, ಪ್ರವೀಣ ಬನ್ಸಾಲಿ, ಅನಿಲ್ ಅಬ್ಬಿಗೇರಿ, ಸಂತೋಷ ಮೇಲಗೇರಿ, ಚಾರ್ಟರ್ಡ ಅಕೌಂಟೆಂಟ್ ಅಮರ ನಾಥ ಭೋಸ್ಲೆ, ವಿಶ್ವವಿದ್ಯಾಲಯದ ಬ್ಲೂ ಶರಣು ತಂತ್ರಿ  ಸೇರಿದಂತೆ ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿದ ವಿದ್ಯಾರ್ಥಿಗಳನ್ನು ಸನ್ಮಾನಿಸಲಾಯಿತು.  ವಿ.ಆರ್.ಕುಷ್ಟಗಿ, ವಿ.ಆರ್.ಮಾಳೆಕೊಪ್ಪಮಠ, ಪಿ.ಆರ್.ಅಡವಿ, ಪ್ರಾ: ಡಾ. ಎಮ್.ಎಲ್.ಗುಳೆದಗುಡ್ಡ, ಆಯ್.ಬಿ.ಬೆಳ್ಳಿಕಟ್ಟಿ ಹಾಜರಿದ್ದರು. ನಂದಾ, ಬಸೀರಾ, ಮಧುರಾ ನಿರೂಪಿಸಿದರು.

ಪ್ರತಿಕ್ರಿಯಿಸಿ (+)