ಅಪರಾಧ ತಡೆಗೆ ಬಲಿಷ್ಠ ಕಾನೂನು ಅಗತ್ಯ

7

ಅಪರಾಧ ತಡೆಗೆ ಬಲಿಷ್ಠ ಕಾನೂನು ಅಗತ್ಯ

Published:
Updated:

ಚನ್ನಪಟ್ಟಣ: ಸಮಾಜಘಾತುಕ ಶಕ್ತಿಗಳನ್ನು ಮಟ್ಟಹಾಕಲು ಬಲಿಷ್ಠ ಕಾನೂನು ಅತ್ಯವಶ್ಯಕ ಎಂದು ಸ್ಥಳೀಯ ನ್ಯಾಯಾಧೀಶ ಗಣಪತಿ ಪ್ರಶಾಂತ್ ಅಭಿಪ್ರಾಯಪಟ್ಟರು.ತಾಲ್ಲೂಕಿನ ಕೋಡಂಬಹಳ್ಳಿಯಲ್ಲಿ ಶನಿವಾರ ನಡೆದ ಎನ್‌ಎಸ್‌ಎಸ್ ಶಿಬಿರದಲ್ಲಿ `ಕಾನೂನು ಅರಿವು-ನೆರವು~ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಅವರು ಮಾತನಾಡಿದರು.`ಇಂದು ದುಶ್ಚಟಗಳಿಗೆ ಒಳಗಾಗುತ್ತಿರುವ ಯುವಜನತೆ ಸಾಮಾಜಿಕ ಜವಾಬ್ದಾರಿಯನ್ನು ಮರೆಯುತ್ತಿದೆ. ದೃಢಸಮಾಜ ಕಟ್ಟುವ ಕಾರ್ಯದಲ್ಲಿ ಅವರ ಪಾತ್ರ ಮಹತ್ವದ್ದು~ ಎಂದರು.ಜನಸಾಮಾನ್ಯರು ನಿತ್ಯ ಜೀವನಕ್ಕೆ ಉಪಯೋಗವಾಗುವ ಸರಳ ಕಾನೂನು ಗಳ ಅರಿವು ಹೊಂದಬೇಕು  ಎಂದರು.ಸಿವಿಲ್ ನ್ಯಾಯಾಧೀಶೆ ಎನ್.ಶೀಲಾ ಶಿಬಿರಕ್ಕೆ ಚಾಲನೆ ನೀಡಿದರು. ಸಂಪನ್ಮೂಲ ವ್ಯಕ್ತಿಗಳಾಗಿ ಆಗಮಿಸಿದ್ದ ವಕೀಲರಾದ ಎಲ್.ನಾರಾಯಣಸ್ವಾಮಿ `ಮಧ್ಯಸ್ಥಿಕೆ ಮತ್ತು ರಾಜಿ ಸಂಧಾನ~, ಮಧುಸೂದನ್ ಅವರು `ಮಾಹಿತಿ ಹಕ್ಕು ಕಾಯ್ದೆ~ ಮತ್ತು `ಮಾನವ ಹಕ್ಕುಗಳ~ ಕುರಿತು ಉಪನ್ಯಾಸ ನೀಡಿದರು.ತಾಲ್ಲೂಕು ವಕೀಲರ ಸಂಘದ ಅಧಕ್ಷ  ಜೆ.ಟಿ. ಪ್ರಕಾಶ್, ಹಿರಿಯ ವಕೀಲ ಟಿ.ಎಂ. ಲಕ್ಷ್ಮಣ್, ಗ್ರಾ.ಪಂ. ಅಧ್ಯಕ್ಷ ಮದ್ದೂರಯ್ಯ, ಮಾಜಿ ಅಧ್ಯಕ್ಷ ಕೆ.ರಾಮಯ್ಯ ಇತರರು ಇದ್ದರು.ವಿಶೇಷ ಶಿಬಿರಾಧಿಕಾರಿ ಜಗದೀಶಯ್ಯ ಉಪಸ್ಥಿತರಿದ್ದರು. ಎನ್‌ಎಸ್‌ಎಸ್ ಶಿಬಿರಾಧಿಕಾರಿ ಮಹೇಶ್ ನಿರೂಪಿಸಿದರು.ಪಟ್ಟಣದ ಸರ್ಕಾರಿ ಪ್ರಥಮ ದರ್ಜೆ ಕಾಲೇಜು ವತಿಯಿಂದ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry