ಅಪರಾಧ ವ್ಯಾಪ್ತಿಗೆ ಲಂಚ ತರಲು ಸರ್ಕಾರ ಚಿಂತನೆ

7

ಅಪರಾಧ ವ್ಯಾಪ್ತಿಗೆ ಲಂಚ ತರಲು ಸರ್ಕಾರ ಚಿಂತನೆ

Published:
Updated:

ವದೆಹಲಿ (ಪಿಟಿಐ): ಖಾಸಗಿ ವಲಯದಲ್ಲಿಯೂ ಲಂಚ ಪಡೆಯುವುದನ್ನು ಶಿಕ್ಷಾರ್ಹ ಅಪರಾಧ ಎಂದು ಪರಿಗಣಿಸಲು ಐಪಿಸಿಗೆ ಸೂಕ್ತ ತಿದ್ದುಪಡಿ ತರುವ ಬಗ್ಗೆ ಕೇಂದ್ರ ಸರ್ಕಾರ ಪರಿಶೀಲಿಸುತ್ತಿದೆ.ಸದ್ಯ ಸರ್ಕಾರಿ ನೌಕರರು ಲಂಚ ಪಡೆಯುವುದು ಹಾಗೂ ಅವರಿಗೆ ಲಂಚ ಕೊಡುವುದು ಮಾತ್ರ ಕಾನೂನು ವ್ಯಾಪ್ತಿಗೆ ಬರುತ್ತದೆ. ಆದರೆ ಭ್ರಷ್ಟಾಚಾರ ವಿರುದ್ಧದ ವಿಶ್ವಸಂಸ್ಥೆ ಒಡಂಬಡಿಕೆಗೆ ಭಾರತ ಕೂಡ ಸಹಿ ಮಾಡಿರುವುದರಿಂದ ಖಾಸಗಿ ವಲಯವನ್ನೂ ಇದರ ವ್ಯಾಪ್ತಿಗೆ ತರುವ ಅವಶ್ಯಕತೆ ಇದೆ ಎಂದು ಕೇಂದ್ರ ಸಿಬ್ಬಂದಿ, ಸಾರ್ವಜನಿಕ ಕುಂದುಕೊರತೆ ಹಾಗೂ ಪಿಂಚಣಿ ಖಾತೆ ರಾಜ್ಯ ಸಚಿವ ವಿ. ನಾರಾಯಣ ಸ್ವಾಮಿ ತಿಳಿಸಿದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry