ಬುಧವಾರ, ನವೆಂಬರ್ 20, 2019
20 °C

ಅಪರಿಚಿತರ ಗುಂಡಿನ ದಾಳಿ: ಮೂವರ ಹತ್ಯೆ

Published:
Updated:

ಆಸನ್‌ಸೋಲ್/ಪಶ್ಚಿಮ ಬಂಗಾಳ (ಪಿಟಿಐ): ಕಟ್ಟಡ ಕೆಲಸದಲ್ಲಿ ನಿರತರಾಗಿದ್ದ ಕಾರ್ಮಿಕರ ಮೇಲೆ ಅಪರಿಚಿತರು ಗುಂಡಿನ ದಾಳಿ ನಡೆಸಿದ ಪರಿಣಾಮ ಸ್ಥಳದಲ್ಲಿಯೇ ಮೂವರು ಸಾವನ್ನಪಿ, ಒಬ್ಬರು ಗಾಯಗೊಂಡಿರುವ ಘಟನೆ ಬುರ್ದ್ವಾನ್ ಜಿಲ್ಲೆಯ  ಅಸನ್‌ಸೋಲ್ ಎಂಬಲ್ಲಿ ಗುರುವಾರ ನಡೆದಿದೆ ಎಂದು ಪೊಲೀಸರು ತಿಳಿಸಿದ್ದಾರೆ.ಸುಮಾರು 12 ಮಂದಿ ಅಪರಿಚಿತರ ಗುಂಪೊಂದು ಗುರುವಾರ ಮುಂಜಾನೆ ಕಟ್ಟಡ ನಿರ್ಮಾಣದ ಸ್ಥಳಕ್ಕೆ ಬಂದು ಹಾರಿಸಿದ ಗುಂಡಿನ ದಾಳಿಯಲ್ಲಿ ಕಟ್ಟಡದ ಯಜಮಾನ ಲಖನ್‌ಯಾದವ್ ಸೇರಿದಂತೆ ಮೂವರು ಸ್ಥಳದಲ್ಲಿ ಮೃತಪಟ್ಟಿದ್ದಾರೆ.ಜಿಲ್ಲೆಯ ಗಡಿಯಾದ ಬಿಹಾರ ಹಾಗೂ ಜಾರ್ಖಂಡ್ ಗಡಿಯನ್ನು ಮುಚ್ಚಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಎಂದಿರುವ ಪೊಲೀಸರು ಆರೋಪಿಗಳು ಕಲ್ಲಿದ್ದಲು ಮಾಫಿಯಾದ ತಂಡ ಸದಸ್ಯರಾಗಿರಬಹುದು ಎಂಬ ಶಂಕೆ ವ್ಯಕ್ತಪಡಿಸಿದ್ದಾರೆ.

 

ಪ್ರತಿಕ್ರಿಯಿಸಿ (+)