ಶುಕ್ರವಾರ, ನವೆಂಬರ್ 22, 2019
19 °C

ಅಪರಿಚಿತ ವಾಹನ ಡಿಕ್ಕಿ: ಗರ್ಭಿಣಿ ಜಿಂಕೆ ಸಾವು

Published:
Updated:

ಬಾಳೆಹೊನ್ನೂರು : ಅಪರಿಚಿತ ವಾಹನ ಡಿಕ್ಕಿಯಿಂದಾಗಿ ಗರ್ಭಿಣಿ ಜಿಂಕೆ ಯೊಂದು ಸಾವಿಗೀಡಾದ ಘಟನೆ ಸೋಮವಾರ ರಾತ್ರಿ ನಡೆದಿದೆ.ಪಟ್ಟಣದ ರೋಟರಿ ವೃತ್ತ ಸಮೀಪ ರಾತ್ರಿ ಸುಮಾರು 11 ಗಂಟೆ ವೇಳೆಗೆ ಅಪರಿಚಿತ ವಾಹನ ಡಿಕ್ಕಿಯಿಂದಾಗಿ ಸುಮಾರು 10ವರ್ಷದ ಜಿಂಕೆಯೊಂದು ಸ್ಥಳದಲ್ಲೇ ಮೃತಪಟ್ಟಿದೆ. ವಾಹನ ಜಿಂಕೆಯ ಹಿಂಭಾಗದ ಮೇಲೆ ಹರಿದ ಪರಿಣಾಮ ಗರ್ಭಿಣಿಯಾಗಿದ್ದ ಜಿಂಕೆ ಮರಿಗೆ ಜನ್ಮನೀಡಿ ಮೃತಪಟ್ಟಿದೆ. ಸ್ಥಳದಲ್ಲೇ ಮರಿ ಕೂಡ ಮೃತಪಟ್ಟಿದ್ದ ದೃಶ್ಯ ಹೃದಯವಿದ್ರಾವಕವಾಗಿತ್ತು.ತಕ್ಷಣ ಸ್ಥಳಕ್ಕೆ ಆಗಮಿಸಿದ ಅರಣ್ಯ ಇಲಾಖೆ ಅಧಿಕಾರಿಗಳು ಪ್ರಕರಣ ದಾಖಲಿಸಿಕೊಂಡು ಮೃತಪಟ್ಟ ಜಿಂಕೆಯನ್ನು ಬೆಂಕಿ ಹಾಕಿ ಸುಟ್ಟರು. ಸ್ಥಳದಲ್ಲಿ ಗುರುಪ್ರಸಾದ್, ಪರ ಮೇಶ್ವರ್, ನಾಗೇಶ್ ಗೌಡ, ಚಿದಾನಂದ್, ಮಹೇಶ್, ವಲಯ ಅರಣ್ಯಾಧಿಕಾರಿ ಎಚ್.ಸಿ.ಸತೀಶ್ ಚಂದ್ರ ಮತ್ತಿತರರು ಇದ್ದರು.

ಪ್ರತಿಕ್ರಿಯಿಸಿ (+)