ಅಪರಿಚಿತ ವಾಹನ ಡಿಕ್ಕಿ- ಜಿಂಕೆ ಸಾವು

ಮಂಗಳವಾರ, ಜೂಲೈ 23, 2019
20 °C

ಅಪರಿಚಿತ ವಾಹನ ಡಿಕ್ಕಿ- ಜಿಂಕೆ ಸಾವು

Published:
Updated:

ಕುಮಟಾ: ಸುಮಾರು ಮೂರು ವರ್ಷದ ಗಂಡು ಜಿಂಕೆಯೊಂದು ರಸ್ತೆ ದಾಟುವಾಗ  ವಾಹನಕ್ಕೆ ಸಿಕ್ಕಿ ಮೃತಪಟ್ಟ ಘಟನೆ  ಮಿರ್ಜಾನ ಬಳಿ ಗುರುವಾರ ಸಂಭವಿಸಿದೆ.ಕಾಡಿನಲ್ಲಿದ್ದ ಜಿಂಕೆಯನ್ನು ನಾಯಿ ಅಟ್ಟಿಸಿಕೊಂಡು ಬಂದಿರುವ ಸಾಧ್ಯತೆ ಇರುವುದರಿಂದ ಜಿಂಕೆ ಗಾಬರಿಯಾಗಿ ರಸ್ತೆ ದಾಟುವಾಗ ಚಲಿಸುವ ವಾಹನಕ್ಕೆ ಸಿಕ್ಕಿ ಮೃತಪಟ್ಟಿದೆ. ಜಿಂಕೆಯ ತಲೆಗೆ ಪೆಟು ಬಿದ್ದ ಕಾರಣ ಅದು ಮೃತಪಟ್ಟಿದ್ದು, ಅದರ ಒಂದು ಕೊಂಬು ಜಖಂಗೊಂಡಿದೆ.ಮಿರ್ಜಾನ ಸಮೀಪದ ಟೂರಿಸ್ಟ್ ಹೋಟೆಲ್ ಪ್ರದೇಶದ ಅರಣ್ಯ ಸರ್ವೇ ನಂಬರ್ 127ರಲ್ಲಿ ಘಟನೆ ಸಂಭವಿಸಿದೆ. ಮಿರ್ಜಾನ ರಾಷ್ಟ್ರೀಯ ಹೆದ್ದಾರಿ ಮೂಲಕ ಕುಮಟಾಕ್ಕೆ ಬರುತ್ತಿದ್ದ  ಕುಮಟಾ ವಲಯ ಅರಣ್ಯಾಧಿಕಾರಿ ವಿ.ಟಿ.ಕವರಿ ಹಾಗೂ ಪಿಎಸ್‌ಐ ಶ್ರೀಧರ ಅವರು ಜಿಂಕೆ ಮೃತಪಟ್ಟದನ್ನು ಕಂಡು ತಕ್ಷಣ ಮಾಹಿತಿ ನೀಡಿದ್ದಾರೆ. ಕತಗಾಲ ಪಶುವೈದಾಧಿಕಾರಿ ಅವರು ಜಿಂಕೆಯ ಮೃತದೇಹ ಮರಣೋತ್ತರ ಪರೀಕ್ಷೆ ನಡೆಸಿದ್ದಾರೆ.`ಜಿಂಕೆಗೆ ಅಪಘಾತಪಡಿಸಿ ಅದರ ಸಾವಿಗೆ ಕಾರಣವಾದ ವಾಹನದ ಪತ್ತೆಗೆ ಮಾಹಿತಿ ಸಂಗ್ರಹಿಸಲಾಗುತ್ತಿದೆ' ಎಂದು ಕತಗಾಲ ವಲಯ ಅರಣ್ಯಾಧಿಕಾರಿ ಸುರೇಶ ತೇಲಿ ತಿಳಿಸಿದ್ದಾರೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry