ಬುಧವಾರ, ನವೆಂಬರ್ 13, 2019
23 °C

ಅಪರೂಪದ ಕ್ಷಣಕ್ಕೆ ಸಾಕ್ಷಿಯಾದ `ಕೋಟ್ಲಾ'

Published:
Updated:
ಅಪರೂಪದ ಕ್ಷಣಕ್ಕೆ ಸಾಕ್ಷಿಯಾದ `ಕೋಟ್ಲಾ'

ನವದೆಹಲಿ (ಪಿಟಿಐ): ಫಿರೋಜ್ ಷಾ ಕೋಟ್ಲಾ ಕ್ರೀಡಾಂಗಣದಲ್ಲಿ ಭಾನುವಾರ ನಡೆದ ಡೇರ್‌ಡೆವಿಲ್ಸ್ ಮತ್ತು ಇಂಡಿಯನ್ಸ್ ನಡುವಿನ  ಪಂದ್ಯ ಅಪರೂಪದ ಕ್ಷಣಕ್ಕೆ ಸಾಕ್ಷಿಯಾಯಿತು. ವಿಂಡೀಸ್ ಕ್ರಿಕೆಟ್‌ನ ದಂತಕಥೆ ಸರ್ ವಿವಿಯನ್ ರಿಚರ್ಡ್ಸ್ ಮತ್ತು ಸಚಿನ್ ಅವರನ್ನು ನೇರವಾಗಿ ಕಾಣುವ ಅವಕಾಶ ಕ್ರಿಕೆಟ್ ಅಭಿಮಾನಿಗಳಿಗೆ ದೊರಕಿತ್ತು.ಡೆವಿಲ್ಸ್ ತಂಡದ ಸಲಹೆಗಾರರಾಗಿ ನೇಮಕವಾಗಿರುವ ರಿಚರ್ಡ್ಸ್ ಅವರನ್ನು ಸಚಿನ್ ಭೇಟಿಯಾಗಿ ಕೆಲವು ನಿಮಿಷಗಳ ಕಾಲ ಆತ್ಮೀಯವಾಗಿ ಮಾತುಕತೆ ನಡೆಸಿದರು.ರಿಚರ್ಡ್ಸ್ ಕ್ರೀಡಾಂಗಣಕ್ಕೆ ಆಗಮಿಸಿದ ಬಗ್ಗೆ ಸಚಿನ್‌ಗೆ ಡೇರ್‌ಡೆವಿಲ್ಸ್ ತಂಡದ ಮತ್ತೊಬ್ಬ ಸಲಹೆಗಾರ ಟಿ.ಎ ಶೇಖರ್ ತಿಳಿಸಿದರು. ಆಗ ಅಭ್ಯಾಸ ನಡೆಸುತ್ತಿದ್ದ ಸಚಿನ್ ತಕ್ಷಣವೇ ರಿಚರ್ಡ್ಸ್ ಬಳಿ ತೆರಳಿದರು. ಮೊದಲಿಗೆ ಆಲಿಂಗನ ಮಾಡಿಕೊಂಡು, ಬಳಿಕ ಇಬ್ಬರೂ ನಗುತ್ತಾ ಮಾತಿಗಿಳಿದರು.

ಪ್ರತಿಕ್ರಿಯಿಸಿ (+)