ಸೋಮವಾರ, ಜೂನ್ 21, 2021
28 °C

ಅಪಹರಣ ಬಿಕ್ಕಟ್ಟು: ಮಧ್ಯಸ್ಥಿಕೆಗೆ ಮೂವರು ಸಂಧಾನಕಾರರು

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಭುವನೇಶ್ವರ/ ನವದೆಹಲಿ (ಪಿಟಿಐ): ಇಟಲಿ ಪ್ರಜೆಗಳ ಅಪಹರಣ ಪ್ರಕರಣದ ಬಗ್ಗೆ ಒಡಿಶಾ ಸರ್ಕಾರದ ಜತೆ ಮಾತುಕತೆಗೆ ಸಂಧಾನಕಾರರಾಗಿ ಮಾವೊವಾದಿಗಳು ಸೋಮವಾರ ರಾತ್ರಿ ಮೂವರನ್ನು ಹೆಸರಿಸಿದ್ದಾರೆ.

ಉಗ್ರರ ವಿರುದ್ಧದ ಪ್ರಕರಣ ಹಿಂದಕ್ಕೆ ಪಡೆಯುವುದೂ ಸೇರಿದಂತೆ 13 ಬೇಡಿಕೆಗಳ ಈಡೇರಿಕೆಗೆ 24 ತಾಸಿನ ಹೊಸ ಗಡುವನ್ನೂ ನೀಡಿದ್ದಾರೆ. ಅಪಹರಣ ಬಿಕ್ಕಟ್ಟನ್ನು ಅಂತ್ಯಗೊಳಿಸಲು ಮಾತುಕತೆಗೆ ಬರುವಂತೆ ಒಡಿಶಾ ಸರ್ಕಾರ ಆಹ್ವಾನಿಸಿರುವ ಬಗ್ಗೆ ಪ್ರತಿಕ್ರಿಯಿಸಿರುವ ಮಾವೊವಾದಿಗಳು ಪ್ರಸ್ತುತ ಜಾರ್ಖಂಡ್ ಜೈಲಿನಲ್ಲಿರುವ ಸಿಪಿಎಂ ಪಾಲಿಟ್‌ಬ್ಯೂರೊ ಸದಸ್ಯ ನಾರಾಯಣ್ ಸನ್ಯಾಲ್, ನಾಗರಿಕ ಹಕ್ಕುಗಳ ಹೋರಾಟಗಾರ ದಂಡಪಾಣಿ ಮೊಹಂತಿ ಮತ್ತು ವಿಶ್ವಪ್ರಿಯ ಕನೌಗೊ ಅವರನ್ನು ಸಂಧಾನಕಾರರೆಂದು ಹೆಸರಿಸಿದ್ದಾರೆ.ಕಳೆದ ವರ್ಷ ಆಗಿನ ಮಾಲ್ಕನ್‌ಗಿರಿಯ ಜಿಲ್ಲಾಧಿಕಾರಿ ಅಪಹರಣ ಪ್ರಕರಣದ ಮೂವರು ಸಂಧಾನಕಾರರಲ್ಲಿ ಕೂಡ ಮೊಹಂತಿ ಸೇರಿದ್ದರು.ಮಾವೊವಾದಿಗಳು ಮಾಧ್ಯಮದ ಮೂಲಕ ಸಂಧಾನಕಾರರ ಹೆಸರನ್ನು ಬಹಿರಂಗಪಡಿಸಿದ್ದು ರಾಜ್ಯ ಸರ್ಕಾರದ ಪ್ರತಿಕ್ರಿಯೆಯನ್ನು ನಿರೀಕ್ಷಿಸಲಾಗುತ್ತಿದೆ ಎಂದು ಜನ ಅಧಿಕಾರ್ ಮಂಚ್‌ನ ಸಂಚಾಲಕರೂ ಆಗಿರುವ ಮೊಹಂತಿ ಹೇಳಿದ್ದಾರೆ.

 

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.