ಭಾನುವಾರ, ಏಪ್ರಿಲ್ 18, 2021
27 °C

ಅಪಹೃತ ಪುಸ್ತಕ ವ್ಯಾಪಾರಿಯ ರಕ್ಷಣೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು:  ನಗರದಿಂದ ಸೋಮವಾರ ಅಪಹರಣಗೊಂಡಿದ್ದ ಅವೆನ್ಯೂ ರಸ್ತೆಯ ಪುಸ್ತಕ ಮಳಿಗೆಯೊಂದರ ಮಾಲೀಕ ಪ್ರಧಾನ್ ಎಂಬುವರನ್ನು ರಕ್ಷಿಸುವಲ್ಲಿ ಸಿದ್ದಾಪುರ ಪೊಲೀಸರು ಯಶಸ್ವಿಯಾಗಿದ್ದಾರೆ.ಪ್ರಧಾನ್ ಅವರ ಕರೆಯ ಬಗ್ಗೆ ಹೆಚ್ಚಿನ ಮಾಹಿತಿ ಕಲೆ ಹಾಕಿದಾಗ ಅವರು ಆಂಧ್ರಪ್ರದೇಶದ ಚಿತ್ತೂರಿನಲ್ಲಿ ಇರುವುದು ಗೊತ್ತಾಯಿತು. ನಂತರ ಅಲ್ಲಿಗೆ ತೆರಳಿ ಅವರನ್ನು ರಕ್ಷಿಸಲಾಯಿತು ಎಂದು ಪೊಲೀಸರು ತಿಳಿಸಿದ್ದಾರೆ.ವೃದ್ಧೆಯ ಕೊಲೆ: ಆರೋಪಿಯ ಬಂಧನ

ಬೆಂಗಳೂರು: ಬನಶಂಕರಿ ಎರಡನೇ ಹಂತದ ದೋಬಿ ಘಾಟ್ ಸಮೀಪ ಮಾ.7ರಂದು ನಡೆದಿದ್ದ ವಿಶಾಲಾಕ್ಷಮ್ಮ (76) ಎಂಬ ವೃದ್ಧೆಯ ಕೊಲೆ ಪ್ರಕರಣದ ಆರೋಪಿಯನ್ನು ಬಂಧಿಸುವಲ್ಲಿ ಪೊಲೀಸರು ಯಶಸ್ವಿಯಾಗಿದ್ದಾರೆ.ವಿಶಾಲಾಕ್ಷಮ್ಮ ಅವರ ಮನೆಯ ಸಮೀಪವೇ ವಾಸವಿದ್ದ ಮಹೇಶ್ (31) ಬಂಧಿತ ಆರೋಪಿ. ಆತ ವಿಶಾಲಾಕ್ಷಮ್ಮ ಅವರಿಗೆ ಮೊದಲಿನಿಂದಲೂ ಪರಿಚಿತ ವ್ಯಕ್ತಿಯಾಗಿದ್ದ ಎಂದು ಪೊಲೀಸರು ಹೇಳಿದ್ದಾರೆ.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.